ಬೆಂಗಳೂರು:ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ದುರ್ಬಳಕೆ ಮಾಡಿಕೊಂಡು ಕೆಲ ಮಕ್ಕಳ ಪಾಲಕರಿಂದ ಹಣ ಪಡೆದು ವಂಚಿಸಿದ ಆರೋಪದಡಿ ಬಂಧನೊಕ್ಕೊಳಗಾಗಿದ್ದ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಸ್ಥೆ ನಿಶಾ ನರಸಪ್ಪ(24) ಅವರನ್ನು 39ನೇ ಎಸಿಎಂಎಂ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ವಿದ್ಯಾರಣ್ಯಪುರದ ನಿವಾಸಿ ಹಾಗೂ ಎನ್.ಎನ್.ಪ್ರೋಡಕ್ಷನ್ ಸಂಸ್ಥೆಯ ಮುಖ್ಯಸ್ಥೆ ನಿಶಾ, ವಂಶಿಕಾ ಹೆಸರು ದುರ್ಬಳಕೆ ಮಾಡಿಕೊಂಡು ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕೆಲ ಮಕ್ಕಳ ಪಾಲಕರಿಂದ ಹಣ ಪಡೆದು ವಂಚಿಸಿದ್ದಾಳೆ ಎಂದು ಆರೋಪಿಸಿ ವಂಶಿಕಾ ತಾಯಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಆರೋಪಿ ನಿಶಾಳನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಪಡಿಸಿದ್ದರು. ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.ಆರೋಪಿ ನಿಶಾ ಸದಾಶಿವನಗರದ ಕೆಫೆಯಲ್ಲಿ ಗುರುವಾರ ಮಕ್ಕಳ ಪಾಲಕರ ಜತೆ ಮಾತುಕತೆ ನಡೆಸುವ ವೇಳೆ ಹಣ ಕಳೆದುಕೊಂಡಿದ್ದ ಕೆಲವರು ತೆರಳಿ ಗಲಾಟೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸದಾಶಿವನಗರ ಪೊಲೀಸರು, ಕೂಡಲೇ ಸ್ಥಳಕ್ಕೆ ತೆರಳಿ ನಿಶಾಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಯಶಸ್ವಿನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ:ನಟ, ನಿರೂಪಕ ಮಾಸ್ಟರ್​ ಆನಂದ್​ ಪುತ್ರಿ ವಂಶಿಕ ಹೆಸರಿನಲ್ಲಿ ವಂಚನೆ
ಮನಸ್ತಾಪವಾಗಿ ದೂರವಾಗಿದ್ದರುರಿಯಾಲಿಟಿ ಶೋಗಳಲ್ಲಿ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಪುತ್ರಿ ವಂಶಿಕಾ ಭಾಗವಹಿಸಿ ಅಪಾರ ಖ್ಯಾತಿ ಗಳಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಖ್ಯೆಯ ಫಾಲೋವರ್ಸ್‌ ಹೊಂದಿದ್ದಾಳೆ. ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿಶಾ ಹಾಗೂ ಯಶಸ್ವಿನಿ ಪರಿಚಿತರಾಗಿದ್ದು, ಈ ಗೆಳೆತನದಲ್ಲಿ ಕೆಲ ಕಾರ್ಯಕ್ರಮಗಳನ್ನು ಮಾಡಿದ್ದರು. ಬಳಿಕ ಮನಸ್ತಾಪ ಬಂದು ಇಬ್ಬರು ದೂರವಾಗಿದ್ದರು.
ಇತ್ತೀಚೆಗೆ ನಿಶಾ, ವಂಶಿಕಾಳ ಹೆಸರು ದುರ್ಬಳಕೆ ಮಾಡಿಕೊಂಡು ಕೆಲ ಪಾಲಕರಿಗೆ ನಿಮ್ಮ ಮಕ್ಕಳಿಗೆ ಸಹ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ೆಟೋ ಶೂಟ್ ಕೂಡ ಮಾಡಿಸಿ ಹಣ ಪಡೆದಿದ್ದಳು. ಬಳಿಕ ಅವಕಾಶವನ್ನೂ ಕೊಡಿಸದೆ, ಹಣವನ್ನೂ ವಾಪಾಸ್ ನೀಡದ ವಂಚಿಸಿದ್ದಳು ಎನ್ನಲಾಗಿದೆ. ಕೆಫೆಯಲ್ಲಿ ಕೆಲ ಮಕ್ಕಳ ಪಾಲಕರ ಜತೆ ಮಾತುಕತೆ ಮಾಡುವಾಗ ಹಣ ಕಳೆದುಕೊಂಡವರು ನಿಶಾಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಗಲಾಟೆ ವಿಚಾರ ಗೊತ್ತಾಗಿ ಯಶಸ್ವಿನಿ ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + thirteen =
Remember me
