ಆನೇಕಲ್:ಅನೈತಿಕ ಸಂಬಂಧಕ್ಕೆ ತೊಡಕಾದ ಗಂಡ ಹಾಗೂ ಆತನ ತಂಗಿಯ ಮೇಲೆ ಹೊಂಚು ಹಾಕಿ ಆಸಿಡ್​ ಮಿಶ್ರಿತ ಟಾಯ್ಲೆಟ್​ ಕ್ಲೀನರ್​ ಎರಚಿ ದಾಳಿ ಮಾಡಿರುವ ಘಟನೆ ಬಿಹೊಸಹಳ್ಳಿ ಹಾಗೂ ಚಿಕ್ಕತಿಮ್ಮಸಂದ್ರ ರಸ್ತೆಯಲ್ಲಿ ನಡೆದಿದೆ.
ವಿಶ್ವನಾಥ್ ಮತ್ತವರ ತಂಗಿ ನಿರ್ಮಲಾರ ಮೇಲೆ ವಿಶ್ವನಾಥ್​ ಪತ್ನಿ ಹಾಗೂ ಆತನ ಪ್ರಿಯಕರ ಟಾಯ್ಲೆಟ್ ಕ್ಲೀನರ್ ಎರಚಿರುವ ಆರೋಪ ಕೇಳಿಬಂದಿದೆ. ವಿಶ್ವನಾಥ್ ಮತ್ತು ತಂಗಿ ನಿರ್ಮಲಾ ಲಿಫ್ಟ್​ ರಿಪೇರಿ ಮಾಡಲು ಸರ್ಜಾಪುರ ಅಪಾರ್ಟ್ಮೆಂಟ್​ಗೆ ಭೇಟಿ ನೀಡಿ ಮರಳುತಿದ್ದಾಗ ದುಷ್ಕೃತ್ಯ ನಡೆದಿದೆ.ಇದನ್ನೂ ಓದಿ:ಸರ್ಕಾರಿ ಶಾಲಾ ಶಿಕ್ಷಕನಾಗಿದ್ದ ಪತಿಯ ಆತ್ಮಹತ್ಯೆ ಸುದ್ದಿ ಕೇಳಿ ನೇಣಿಗೆ ಶರಣಾದ ಪತ್ನಿ
ವಿಶ್ವನಾಥ್ ಹೆಂಡತಿ ಲಕ್ಷ್ಮಿ ಮತ್ತಾಕೆಯ ಪ್ರಿಯಕರ ರಸ್ತೆಯಲ್ಲಿ ಕಾದು ಕುಳಿತು ಹೊಂಚು ಹಾಕಿ ಇಬ್ಬರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ. ಇಬ್ಬರು ಹೆಲ್ಮೆಟ್ ಹಾಕಿದ್ದರಿಂದ ಆಸಿಡ್​ಯುಕ್ತ ಕ್ಲೀನರ್​ನಿಂದ ಅಣ್ಣ-ತಂಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ವಿಶ್ವನಾಥನ ಬಲ ಎದೆ ಹಾಗೂ ತೋಳಿಗೆ ಬೊಬ್ಬೆಗಳಾಗಿದ್ದರೆ, ತಂಗಿ ನಿರ್ಮಲಾರಿಗೆ ಕೈಮೇಲೆ ಬೊಬ್ಬೆಗಳಾಗಿ ಸರ್ಜಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದನ್ನೂ ಓದಿ:ಮಟಮಟ ಮಧ್ಯಾಹ್ನ ಅಲ್ಲೇನಾಯ್ತು? … ಮುಗಿಲು ಮುಟ್ಟಿದೆ ಬಡ ಕುಟುಂಬಗಳ ಆಕ್ರಂದನ
ಸಂತ್ರಸ್ತರು ಮೂಲತಃ ಕೋಲಾರ ಜಿಲ್ಲೆಯ ಹೆಬ್ಬಣಿಯವರಾಗಿದ್ದು, ಚಂದಾಪುರದಲ್ಲಿ ವಾಸವಿದ್ದರು. ಘಟನಾ ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಇನ್ಮುಂದೆ ಯಾವುದೇ ಎಲೆಕ್ಷನ್‌ಗೆ ನಿಲ್ಲಬಾರದೆಂದು ಮನಸ್ಸು ಗಟ್ಟಿ ಮಾಡ್ಕೊಂಡಿದ್ದೆ, ಆದರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
