ಉಪ್ಪಿನಂಗಡಿ:ಗಂಡನ ಕಿರುಕುಳ ತಾಳಲಾರದೆ ಚಿಕ್ಕಮ್ಮನ ಮನೆ ಸೇರಿದ್ದ ಗೃಹಿಣಿ ಮತ್ತು ಈಕೆಗೆ ಆಶ್ರಯ ನೀಡಿದ್ದ ಚಿಕ್ಕಮಳ ಮೇಲೆ ಆ್ಯಸಿಡ್​ ದಾಳಿಯಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಕೋಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಗುರುವಾರ ಬೆಳಗ್ಗೆ ಶೈನಿ (32) ಮತ್ತು ಇವರ ಚಿಕ್ಕಮ್ಮ ಜಾನ್ಸಿ (38) ಮೇಲೆ ಆ್ಯಸಿಡ್​ ದಾಳಿಯಾಗಿದ್ದು, ಶೈನಿ ಗಂಡ ಬಿಜು ಥೋಮಸ್​ ಈ ಕೃತ್ಯವೆಸಗಿದ್ದಾನೆ.ಇದನ್ನೂ ಓದಿರಿಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!
ಥೋಮಸ್​ ಎಂಬಾತನ ಜತೆ ಶೈನಿ ಮದುವೆಯಾಗಿದ್ದಳು. ಇವರಿಗೆ ಹೆಣ್ಣು ಮಗು ಇದೆ. ಕುಡಿತ ಚಟ ಅಂಟಿಸಿಕೊಂಡಿದ್ದ ಥೋಮಸ್​, ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಬೇಸತ್ತ ಪತ್ನಿ ಗಂಡನ ಮೇಲೆ ಮುನಿಸಿಕೊಂಡು ಚಿಕ್ಕಮ್ಮನ ಮನೆ ಸೇರಿದ್ದಳು. ಅಲ್ಲಿಗೆ ಗುರುವಾರ ಬಂದ ಬಿಜು ಥೋಮಸ್​, ತನ್ನ ಪತ್ನಿ ಮತ್ತು ಅತ್ತೆ ಜಾನ್ಸಿ ಮೇಲೆ ಆ್ಯಸಿಡ್​ ಎರಚಿದ್ದಾನೆ. ಇಬ್ಬರಿಗೂ ಕಣ್ಣು ಹಾಗೂ ಮುಖಕ್ಕೆ ಗಂಭೀರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಮದ್ಯ ವ್ಯಸನಿಯಾಗಿದ್ದು, ಮದ್ಯ ಸೇವಿಸಿದಾಗ ವಿಕಾರ ವರ್ತನೆ ತೋರುತ್ತಿದ್ದ. ಈತನ ವರ್ತನೆಯಿಂದ ಬೇಸತ್ತು ಶೈನಿ ಗಂಡನ ಮನೆ ತೊರೆದಿದ್ದರು. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಅಪಘಾತದಲ್ಲಿ ಪಾರಾದರೂ ಬೆನ್ನಟ್ಟಿದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!

ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

ಇನ್ನೂ ಋತುಮತಿ ಆಗದ ಯುವತಿಯನ್ನು ತುಂಬಾ ಇಷ್ಟಪಟ್ಟು ಮದುವೆಯಾದ… ಬಳಿಕ ಆಗಿದ್ದೆಲ್ಲವೂ ದುರಂತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
