ಬೆಂಗಳೂರು:ಪ್ರೀತಿಸಲು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಅಮಾಯಕ ಯುವತಿಯ ಮೇಲೆ ಆ್ಯಸಿಡ್​ ದಾಳಿ ಮಾಡಿ ಆಕೆಯ ಬದುಕನ್ನು ದುಃಖದ ಸಾಗರಕ್ಕೆ ದೂಡಿರುವ ಆ್ಯಸಿಡ್​ ನಾಗನಿಗೆ ವಿಧಿಯೇ ಘನ ಘೋರ ಶಿಕ್ಷೆಯನ್ನು ವಿಧಿಸಿದೆ. ಕರ್ಮದ ಫಲದಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಪ್ರೀತಿಸಲು ಒಲ್ಲೆ ಎಂದ 24 ವರ್ಷದ ಯುವತಿ ಮೇಲೆ ಏ.28ರ ಗುರುವಾರ ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಬಳಿ ಭಗ್ನಪ್ರೇಮಿ ನಾಗೇಶ್​ ಆ್ಯಸಿಡ್​ ಹಾಕಿ ಪರಾರಿಯಾಗಿದ್ದ. ಈ ಘಟನೆ ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿತ್ತು. ತುಂಬಾ ನೋವಿನಿಂದ ರಸ್ತೆಯಲ್ಲಿ ಬಿದ್ದು ನರಳಾಡಿದ ಯುವತಿಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಸಾವು-ಬದುಕಿನ ನಡುವೆ ಹೋರಾಡಿದ ಯುವತಿ, ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾಳೆ.
ಆ್ಯಸಿಡ್​ ಎರಚಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡು 16 ದಿನಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಕಂಬಿ ಎಣಿಸುತ್ತಿರುವ ನಾಗೇಶನಿಗೆ ಇದೀಗ ವಿಧಿಯೇ ಘೋರ ಶಿಕ್ಷೆಯನ್ನು ನೀಡಿದೆ. ಆರೋಪಿ ನಾಗೇಶ್​ ಗ್ಯಾಂಗ್ರಿನ್​ ಕಾಯಿಲೆಯಿಂದ ಬಳಲುತ್ತಿದ್ದಾನೆ. ಗ್ಯಾಂಗ್ರಿನ್​ನಿಂದಾಗಿ ಕಾಣಿಸಿಕೊಂಡಿರುವ ನೋವಿನಿಂದ ವಿಲ ವಿಲ ಒದ್ದಾಡುತ್ತಿದ್ದಾನೆ. ತೀವ್ರ ನೋವು ಅನುಭವಿಸುತ್ತಿದ್ದು, ಇದೀಗ ಆತನಿಗೆ ಚಿಕಿತ್ಸೆ ಕೊಡಿಸಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.(ದಿಗ್ವಿಜಯ ನ್ಯೂಸ್​)
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಮಹಿಳೆಯ ಮೇಲೆ ಅತ್ಯಾಚಾರ: ಆಸ್ಟ್ರೇಲಿಯಾದಲ್ಲಿ ಲಂಕಾ ಕ್ರಿಕೆಟಿಗ ಅರೆಸ್ಟ್​, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಡ್ನಿ ಪೊಲೀಸ್​

ಭಾವಿ ಪತಿಯ ಮೊದಲ ಮದುವೆಯಲ್ಲಿ ಹನ್ಸಿಕಾರ ಭರ್ಜರಿ ಡಾನ್ಸ್​! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 17 =
Remember me
