ಬೆಂಗಳೂರು:ಮಹಾಮಾರಿ ಕೋವಿಡ್​ ಸೋಂಕು ಉಲ್ಬಣಗೊಳ್ಳುತ್ತಿದ್ದಂತೆ ಜನರು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಕುಟುಂಬ ಸದಸ್ಯರ ಕಷ್ಟಕ್ಕೂ ಕೈ ಚಾಚುತ್ತಿಲ್ಲ, ಸಾವು-ನೋವಿನಲ್ಲೂ ಭಾಗಿಯಾಗುತ್ತಿಲ್ಲ… ಎಂಬ ಆತಂಕಕಾರಿ ವಾತಾವರಣದ ನಡುವೆಯೂ ಒಳ್ಳೆತನ-ಸಹಾಯ ಗುಣ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಎಸಿಪಿ ಎಂ​.ಸತೀಶ್.
ಕರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ಗುಣಮುಖರಾದ ಯಲಹಂಕ ಉಪ ವಿಭಾಗ(ಸಂಚಾರ) ಎಸಿಪಿ ಸತೀಶ್​, ಪ್ಲಾಸ್ಮಾ ದಾನ ಮಾಡಿದ್ದಾರೆ. ಆ ಮೂಲಕ ‘ಪ್ಲಾಸ್ಮಾ ದಾನ ಮಾಡಿದ ಮೊದಲ ಸರ್ಕಾರಿ ಅಧಿಕಾರಿ’ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಇದನ್ನೂ ಓದಿರಿಇನ್ನೂ 30 ವರ್ಷ ಕರೊನಾ ಹೋಗಲ್ಲ; ಬ್ರಹ್ಮಾಂಡ ಗುರೂಜಿ ಭವಿಷ್ಯ
‘ಜೂನ್​ 28ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ ಶಂಕುಸ್ಥಾಪನೆ ಸಮಾರಂಭವಿತ್ತು. ಈ ಕಾರ್ಯಕ್ರಮಕ್ಕೆ ಐದು ದಿನ ಮಾತ್ರ ಬಾಕಿ ಇದ್ದವು. ಪೂರ್ವ ಸಿದ್ಧತೆ ಕುರಿತು ಆಯುಕ್ತರ ಕಚೇರಿಯಲ್ಲಿ ಸಭೆ ಮುಗಿಸಿ ಮನೆಗೆ ಹೋಗುವಾಗ ಚಳಿ ಕಾಣಿಸಿಕೊಂಡಿತು. ಎಚ್ಚೆತ್ತು ಮರುದಿನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​ ಪರೀಕ್ಷೆಗೊಳಗಾದೆ. ವರದಿ ಬರುವುದು ತಡವಾಯಿತು. ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮವೂ ಮುಗಿಯಿತು. ನನ್ನಲ್ಲಿ ಜ್ವರ ಸಹ ಮಾಯವಾಗಿತ್ತು. ಐದು ದಿನಗಳ ಬಳಿಕ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ನನ್ನಲ್ಲಿ ಆತಂಕ, ಭೀತಿ, ಭಯ ಕಾಣಲಿಲ್ಲ. ಧೈರ್ಯವಾಗಿಯೇ ಇದ್ದೆ’ ಎಂದು ಸತೀಶ್​ ತನಗೆ ಸೋಂಕು ತಗುಲಿದ್ದ ಸಂದರ್ಭವನ್ನು ವಿವರಿಸಿದರು.
‘ಕನಕಪುರ ರಸ್ತೆ ಶ್ರೀ ರವಿಶಂಕರ ಗುರೂಜಿ ಆಶ್ರಮದ ಕೋವಿಡ್​ ಆರೈಕೆ ಕೇಂದ್ರದಲ್ಲಿ 1 ವಾರ ಚಿಕಿತ್ಸೆ ಪಡೆದು, ನಂತರ ಹೋಂ ಐಸೋಲೇಷನ್​ನಲ್ಲಿದ್ದೆ. ಸಂಪೂರ್ಣವಾಗಿ ಸೋಂಕು ಮುಕ್ತನಾದೆ ಎಂಬ ವರದಿ ಬಂತು. ಅಷ್ಟರಲ್ಲಿ ಪ್ಲಾಸ್ಮಾ ದಾನಕ್ಕೆ ವೈದ್ಯಕೀಯ ಸಚಿವರು ಮನವಿ ಮಾಡಿದ್ದ ಸಂಗತಿ ತಿಳಿದು ನಾನು ಕೂಡ ಪ್ಲಾಸ್ಮಾ ದಾನ ಮಾಡಬೇಕೆಂದು ನಿರ್ಧರಿಸಿದೆ. ಅದರ ಪ್ರಕ್ರಿಯೆ ಹೇಗೆಂದು ಗೊತ್ತಿರಲಿಲ್ಲ. ಫೇಸ್​ಬುಕ್​ನಲ್ಲಿ ಪ್ಲಾಸ್ಮಾ ದಾನ ಬಗ್ಗೆ ಮಾಹಿತಿ ಸಿಕ್ಕಿತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಪ್ಲಾಸ್ಮಾ ನೀಡಿದೆ. ಇದಕ್ಕೂ ಮುನ್ನ ನನ್ನ ದೇಹದಲ್ಲಿ ಸೋಂಕು ಮಣಿಸುವ ರೋಗ ನಿರೋಧಕ ಶಕ್ತಿ ಇದೆ ಎಂಬುದನ್ನು ವೈದ್ಯರು ಪರೀಕ್ಷೆ ನಡೆಸಿ ಖಾತ್ರಿ ಪಡಿಸಿಕೊಂಡರು. ಮನಸ್ಸಿನಲ್ಲಿ ಒಂದು ನೆಮ್ಮದಿ ಭಾವ ಮೂಡಿತು’ ಎಂದು ಹೇಳುವಾಗ ಸತೀಶ್ ಅವರ ಮುಖದಲ್ಲಿ ಸಂತೃಪ್ತಿಯ ಛಾಯೆ ಆವರಿಸಿತ್ತು.
ಇದನ್ನೂ ಓದಿರಿಎಚ್​ಡಿಕೆ- ಡಿಕೆಶಿ ಇಬ್ಬರೂ ನಿವೃತ್ತ ಕುದುರೆಗಳು: ಸಿ.ಪಿ.ಯೋಗೇಶ್ವರ್
‘ಕರೊನಾಗೆ ಇನ್ನೂ ಔಷಧ ಪತ್ತೆಯಾಗಿಲ್ಲ. ಪ್ಲಾಸ್ಮಾವೇ ಸದ್ಯದ ಮದ್ದಾಗಿದೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಲಿ. ಒಬ್ಬ ವ್ಯಕ್ತಿಯ ಪ್ಲಾಸ್ಮಾದಿಂದ ಐಸಿಯುನಲ್ಲಿರುವ ಇಬ್ಬರು ಸೋಂಕಿತರನ್ನು ಆರೈಕೆ ಮಾಡಬಹುದು. ನನ್ನಿಂದ ಸಹೋದ್ಯೋಗಿಗಳ (ಪೊಲೀಸರು) ಪ್ರೇರೇರಿತರಾಗುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ಉಪ ವಿಭಾಗದ ಐವರು ಐಸೋಲೇಷನ್​ನಲ್ಲಿದ್ದಾರೆ. ಅವರಿಂದ ಪ್ಲಾಸ್ಮಾ ದಾನ ಮಾಡಿಸುವೆ’ ಎಂದು ಸತೀಶ್​ ತಿಳಿಸಿದರು.
‘ಕರೊನಾಗೆ ಅಂಜುವ ಅಗತ್ಯವಿಲ್ಲ. ಮನಸ್ಸಿನಲ್ಲಿ ಬಲವಾದ ಆತ್ಮವಿಶ್ವಾಸವಿದ್ದರೆ ಸೋಂಕು ಏನೂ ಮಾಡುವುದಿಲ್ಲ. ರೋಗದಿಂದ ಗುಣವಾಗುದಷ್ಟೆ ಮುಖ್ಯವಲ್ಲ. ಪ್ರಸುತ್ತ ಸಂಕಷ್ಟದ ಪರಿಸ್ಥಿಯನ್ನರಿತು ಸೋಂಕು ಮುಕ್ತರಾದವರು ಪ್ಲಾಸ್ಮಾ ದಾನ ಮೂಲಕ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು’ ಎಂದು ಎಸಿಪಿ ಸತೀಸ್​ ಮನವಿ ಮಾಡಿದರು.
9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 16 =
Remember me
