ವಿಜಯಪುರ:ಪ್ರೀತಿಯ ವಿಷಯದಲ್ಲಿ ಬುದ್ಧಿವಾದ ಹೇಳಲು ಹೋದ ವ್ಯಕ್ತಿಯನ್ನು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಲಕ್ಷ ರೂ. ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ.
ತಾಳಿಕೋಟಿಯ ಜುಬೇರ ಮೈನುದ್ದೀನ್ ಮುಲ್ಲಾ ಶಿಕ್ಷೆಗೆ ಗುರಿಯಾಗಿದ್ದಾನೆ. 2019ರ ಮಾ.21 ರಂದು ಸುಮಯ್ಯ ಕಾಶೀಮಅಲಿ ಮನ್ಸೂರ ಎಂಬಾಕೆಯನ್ನು ಪ್ರೀತಿಸುತ್ತೇನೆಂದು ಜುಬೇರ ಹಿಂಬಾಲಿಸಿದ್ದನು. ಈ ವಿಷಯ ತಿಳಿದ ಫಯಾಜಹ್ಮದ್ ಲೋಣಿ ಅವರು ಜುಬೇರಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಸಿಟ್ಟಾದ ಜುಬೇರ, ತಾಳಿಕೋಟಿಯ ಕತ್ರಿ ಬಜಾರದಲ್ಲಿರುವ ಮುತ್ತು ಅಲೇಗಾವಿ ಅವರ ಚಹಾ ಅಂಗಡಿಗೆ ಕರೆದೊಯ್ದು ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ.
ನ್ಯಾಯಾಧೀಶ ಎಲ್.ಪಿ. ಸತೀಶ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವನಿತಾ ಎಸ್.ಇಟಗಿ ವಾದ ಮಂಡಿಸಿದ್ದರು.
ತಂದೆ ಜತೆ ದೂರು ನೀಡಲು ಬಂದಿದ್ದ ಪತ್ನಿ, ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಕೊಂಡು ಠಾಣೆಗೆ ನುಗ್ಗಿದ ಪತಿ!

ಕಾಂಗ್ರೆಸ್​ಗೆ ಬಿಗ್​ ಶಾಕ್​: ಎಲ್ಲ ಹುದ್ದೆಗೂ ಗುಲಾಂ ನಬಿ ಆಜಾದ್​ ರಾಜೀನಾಮೆ

ಪರಸ್ತ್ರೀಗಾಗಿ ಕೋಮುಗಲಭೆ ನಾಟಕ! ಶಿವಮೊಗ್ಗ ಪೊಲೀಸರನ್ನೇ ಬೆಚ್ಚಿಬೀಳಿಸಿದ್ದ ಪತ್ರ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಇನ್ಮುಂದೆ ವಾರದಲ್ಲಿ 6 ದಿನ ಸಂಚರಿಸಲಿದೆ ಬೆಂಗಳೂರು-ಮಂಗಳೂರು ಎಕ್ಸ್​ಪ್ರೆಸ್​ ರೈಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
