ಬೆಂಗಳೂರು:ಸಾರ್ವಜನಿಕ ಉದ್ಯಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆಯನ್ನು ಜನರೇ ಪಾರ್ಕ್​ನಲ್ಲಿ ಲಾಕ್​ ಮಾಡಿದ್ದಾರೆ. ಅವರ ವರ್ತನೆಗೆ ಭಾರಿ ಆಕ್ಷೇಪವೂ ವ್ಯಕ್ತವಾಗಿ, ವಾಗ್ವಾದಕ್ಕೂ ಕಾರಣವಾಗಿದೆ.
ರಾಜಧಾನಿಯ ಅಗರ ಉದ್ಯನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಾರ್ಕ್​ಗೆ ವಾಯುವಿಹಾರಕ್ಕೆಂದು ಬಂದಿದ್ದ ಜನರೇ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ;ದಿನಕ್ಕೆ 3.3 ಲೀಟರ್​ ಮೂತ್ರ ಸೇವನೆ; ಕಣ್ಣು, ಮೂಗಿನಿಂದಲೂ ಒಳಗೆಳೆದುಕೊಳ್ತಾನೆ; ಮೈಗೆಲ್ಲ ಉಜ್ಜಿಕೊಳ್ತಾನೆ…!
ತುಂಡುಡುಗೆಯಲ್ಲಿದ್ದ ಕಿರಿಕ್​ ಹುಡುಗಿ: ಸಂಯುಕ್ತ ಹೆಗ್ಡೆ ಮತ್ತಾಕೆಯ ಸಂಗಡಿಗರು ಪಾರ್ಕ್​ನಲ್ಲಿ ತುಂಡುಡುಗೆ ತೊಟ್ಟು ಹುಲಾ ಲೂಪ್​ ಡಾನ್ಸ್​ ಮಾಡಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.  ನಟಿಯ ಈ ವರ್ತನೆಯನ್ನು ಪ್ರಶ್ನಿಸಿದಾಗ ಭಾರಿ ವಾಗ್ವಾದ ನಡೆದಿದೆ. ಜನರು ನಟಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪಾರ್ಕ್​ನ ಗೇಟ್​ ಬಂದ್​ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಇದು ಮತ್ತೊಂದು ಸುತ್ತಿನ ವಾಗ್ವಾದಕ್ಕೆ ಕಾರಣವಾಗಿದೆ. ಗೇಟ್​ ತೆರೆಯುವಂತೆ ಜನರೊಂದಿಗೆ ನಟಿ ಜಗಳವಾಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ನಟಿಯನ್ನು ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ;ಫ್ಲ್ಯಾಟ್​ನ ಕಿಟಕಿ ಹಾಕದೇ ಊರಿಗೆ ಹೋಗಿದ್ದ; ಐದು ತಿಂಗಳ ಬಳಿಕ ಮನೆ ನೋಡಿದವನಿಗೆ ಕಾದಿತ್ತು ಶಾಕ್​…!
ಈ ವಿದ್ಯಮಾನವನ್ನೆಲ್ಲ ಸ್ವತಃ ಸಂಯುಕ್ತಾ ಇನ್​ಸ್ಟಾಗ್ರಾಂ ಲೈವ್​ ಬಂದು ಚಿತ್ರೀಕರಿಸಿದ್ದಾರೆ. ಸ್ಪೋರ್ಟ್ಸ್​ ಬ್ರಾ ಧರಿಸಿ ವ್ಯಾಯಾಮ ಮಾಡಿದರೆ ಏನು ತಪ್ಪು ಎಂದು ಪ್ರಶ್ನಿಸಿದ್ದಾರೆ. ಇದಕ್ಕಾಗಿ ಜನರೆಲ್ಲ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
https://www.instagram.com/tv/CEtwP4plMhN/?utm_source=ig_web_copy_link
VIDEO: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
