|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ಕರೊನಾ ಲಾಕ್​ಡೌನ್​ನಲ್ಲಿ ಉದ್ಭವಿಸಿದ ಆರ್ಥಿಕ ಸಂದಿಗ್ಧ ಪರಿಸ್ಥಿತಿಯನ್ನೇ ಲಾಭ ಮಾಡಿಕೊಂಡು ಹುಟ್ಟಿಕೊಂಡ ಚೀನಿ ಸಾಲದ ಆ್ಯಪ್​ಗಳ ಹಾವಳಿಗೆ ಅಮಾಯಕರು ತತ್ತರಿಸಿದ್ದಾರೆ. ಬೆಂಗಳೂರು ನಗರ ಪೊಲೀಸರು, ಸೈಬರ್ ತಜ್ಞರ ಸಹಾಯದಿಂದ ಕಳೆದ 3 ತಿಂಗಳಲ್ಲಿ 108 ಸಾಲದ ಆ್ಯಪ್​ ಕಂಪನಿಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದ್ದಾರೆ.
ಖಾಕಿ ಪಡೆಯ ಮುಂದುವರಿದ ಭಾಗವಾಗಿ ನಕಲಿ ಕಂಪನಿಗಳಿಗೆ ಸೇರಿದ ವಿವಿಧ ಬ್ಯಾಂಕ್​ಗಳಲ್ಲಿ ತೆರೆದಿದ್ದ 120 ನಕಲಿ ಖಾತೆಗಳನ್ನು ಜಪ್ತಿ ಮಾಡಿ 5 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಸಾಲ ಮತ್ತು ಹೂಡಿಕೆ ಆ್ಯಪ್​ಗಳ ವಿರುದ್ಧ ಕಾರ್ಯಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾ ಆರ್ಥಿಕ ಸಂಕಷ್ಟದಲ್ಲಿ ಚೀನಾ ಉದ್ಯಮಿಗಳು, ಸಲೀಸಾಗಿ ಭಾರತಕ್ಕೆ ಬಂದು ಸ್ಥಳೀಯರ ಹೆಸರಿನಲ್ಲಿ ಹೂಡಿಕೆ ಮತ್ತು ಸಾಲದ ಆಪ್​ಗಳ ಕಂಪನಿ, ಬ್ಯಾಂಕ್ ಖಾತೆ ತೆರೆದು ಗುತ್ತಿಗೆ ಕೊಟ್ಟಿದ್ದಾರೆ. ಇದೀಗ ಅಜ್ಞಾತ ಸ್ಥಳದಲ್ಲೇ ಕುಳಿತು ಸಂಪೂರ್ಣ ನಿಯಂತ್ರಣ ಮಾಡುತ್ತಿದ್ದಾರೆ.
ಮೊಬೈಲ್​ಗಳಿಗೆ ಸಾಲದ ಆಪ್​ಗಳ ಲಿಂಕ್​ಗಳನ್ನು ಕಳುಹಿಸಿ ಕೇವಲ ಇನ್​ಸ್ಟಾಲ್ ಮಾಡಿಕೊಂಡು ಒಟಿಪಿ ಕೊಟ್ಟರೇ 5 ಸಾವಿರದಿಂದ 1 ಲಕ್ಷ ರೂ. ವರೆಗೂ ಸಾಲ ಕೊಡುವುದಾಗಿ ಆಮಿಷ ಒಡ್ಡಿದ್ದಾರೆ. ಅಮಾಯಕರು ಸಂಕಷ್ಟದಲ್ಲಿ ಸಾಲ ಪಡೆದರೆ ಶೇ. 40 ರಿಂದ 60 ಬಡ್ಡಿ ವಸೂಲಿ ಮಾಡುವುದರ ಜತೆಗೆ ಹೆಚ್ಚಿನ ಹಣಕ್ಕೆ ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದಾರೆ. ಆಪ್ ಡೌನ್​ಲೋಡ್ ಮಾಡಿಕೊಂಡ ಕೂಡಲೇ ಅವರ ಮೊಬೈಲ್​ನಲ್ಲಿ ಇರುವ ಫೋಟೋ, ಮೊಬೈಲ್ ನಂಬರ್​ಗಳನ್ನು ಕಳವು ಮಾಡುತ್ತಿದ್ದಾರೆ. ಸಾಲಗಾರ ಹೆಚ್ಚಿನ ಹಣ ಕೊಡದಿದ್ದರೇ ಅವರ ಪಾಲಕರಿಗೆ, ಸ್ನೇಹಿತರಿಗೆ ಕರೆ ಮಾಡಿ ಸಾಲ ಮಾಡಿದ್ದಾರೆ. ಅಥವಾ ಅಶ್ಲೀಲವಾಗಿ ನಿಂದನೆ, ಎಡಿಟ್ ಮಾಡಿದ ವಿಡಿಯೋಗಳನ್ನು ಕಳುಹಿಸಿ ಸಾಲಗಾರ ಮರ್ಯಾದೆ ತೆರೆಯುತ್ತಿದ್ದಾರೆ. ಭಯದಲ್ಲಿ ಸಾಕಷ್ಟು ಜನರು ಹೆಚ್ಚಿನ ಹಣ ಪಾವತಿಸುತ್ತಿದ್ದಾರೆ. ಇನ್ನೂ ಕೆಲವರು ಹಣ ಕಟ್ಟಲು ಸಾಧ್ಯವಾಗದೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಇತ್ತೀಚೆಗೆ ಮಲ್ಲತಹಳ್ಳಿಯ 43 ವರ್ಷದ ವ್ಯಕ್ತಿ, 6,160 ರೂ. ಸಾಲ ಪಡೆದಿದ್ದರು. ಫೆ.10ಕ್ಕೆ ಸಾಲ ಮರುಪಾವತಿ ನಿಗದಿತ ದಿನವಾದರೂ ಅದಕ್ಕೂ ಮೊದಲೇ ಸಾಲಗಾರರ ಮತ್ತು ಅವರ ಸಂಬಂಧಿಕರ ಮೊಬೈಲ್​ಗೆ ಕರೆ ಮಾಡಿ ಚಿತ್ರಹಿಂಸೆ ಕೊಟ್ಟಿದ್ದಾರೆ. ನಿಮ್ಮ ವ್ಯಕ್ತಿ, 5 ವರ್ಷದ ಬಾಲಕಿಯನ್ನು ರೇಪ್ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಮರ್ಯಾದೆ ತೆಗೆಯುತ್ತಿದ್ದು, ನೊಂದ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಇದೇ ರೀತಿ ಸಾಕಷ್ಟು ಜನರಿಗೆ ಮೋಸ ಮಾಡುತ್ತಿದ್ದಾರೆ.
ನಿರುದ್ಯೋಗಿಗಳ ಹೆಸರಿನಲ್ಲಿ ನಕಲಿ ಕಂಪನಿ: ನಿರುದ್ಯೋಗಳಿಗೆ ವಾಟ್ಸ್​ಆಪ್, ಟೆಲಿಗ್ರಾಂ ಸೇರಿ ಜಾಲತಾಣದಲ್ಲಿ ನೌಕರಿ ಆಫರ್ ಕೊಟ್ಟು ಅವರ ಕಡೆಯಿಂದ ದಾಖಲೆ ಸಂಗ್ರಹಿಸುತ್ತಾರೆ. ನೌಕರಿ ಸಿಕ್ಕಿರುವುದಾಗಿ ಹೇಳಿ ಅವರ ಹೆಸರಿನಲ್ಲೇ ನಕಲಿ ಕಂಪನಿ ತೆರೆದು ಅವರನ್ನೇ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕ ಇನ್ನಿತರ ಹುದ್ದೆಗಳಿಗೆ ನೇಮಿಸಿ ಬ್ಯಾಂಕ್ ಖಾತೆ ತೆರೆದು ಎಲ್ಲ ವಹಿವಾಟಿಗೆ ವೇದಿಕೆ ಸಜ್ಜು ಮಾಡಿದ್ದರು. ಇನ್ನೂ ಕೆಲವು ಪ್ರಕರಣಗಳಲ್ಲಿ ಕಾಲ್ ಸೆಂಟರ್ ಕಚೇರಿ ತೆರೆದು ಅವರಿಗೆ ಸ್ಯಾಲರಿ ಬ್ಯಾಂಕ್ ಖಾತೆ ತೆರೆಯಬೇಕೆಂದು ಹೇಳಿ ಅವರ ಕಡೆಯಿಂದ ದಾಖಲೆ ಪಡೆದು ಬ್ಯಾಂಕ್ ಖಾತೆ ತೆರೆದು ಅದೇ ಖಾತೆಗೆ ವಂಚಿಸಿದ್ದ ಹಣ ವರ್ಗಾವಣೆ ಮಾಡಿಕೊಂಡು ಡ್ರಾ ಮಾಡುತ್ತಿದ್ದಾರೆ. ಒಟ್ಟಾರೆ ಕಿಂಗ್​ಪಿನ್​ಗಳ ಮಾಹಿತಿ ಸಿಗದಂತೆ ಮಾಡುತ್ತಿದ್ದಾರೆ.
ಸಾಲದ ಆಪ್​ಗಳು:ಸ್ಕೈಲೈನ್ ಟೆಕ್ನಾಲಾಜಿ ಪ್ರೖೆವೆಟ್ ಲಿಮಿಟೆಡ್ ಕಂಪನಿ ನಿರ್ದೇಶಕರು ಅಮಾಯಕರಿಗೆ ವಂಚನೆ ಮಾಡಲು ಕ್ವಾಲೀಟಿ ಕ್ಯಾಷ್, ಕುಬೇರನ್ ರೂಪೀಸ್, ಓಸೀನ್ ರುಪೀಸ್​ವು, ಲೈಫ್ ವ್ಯಾಲೇಟ್, ರಾಯಲ್ ಕ್ಯಾಷ್, ಎಲಿಫ್ಯಾಂಟ್ ಕ್ಯಾಷ್, ದುಟ್ಟು ರುಪೀ, ರೈಸ್ ವ್ಯಾಲೇಟ್, ಬಾಕ್ಸ್ ಕ್ಯಾಷ್, ಸಿಸಿ ರುಪೀ, ಮಲೋ ಲೋನ್, ಸಿಂಗಲ್ ರುಪೀ, ಟೈಮ್ೕ ಲೋನ್, ರಬ್ಬಿಟ್ ಲೋನ್ ಎಂಬ ಆಪ್ ತೆರೆದಿದ್ದಾರೆ. ಇದೇ ರೀತಿ ಸಾವಿರಾರು ಆಪ್​ಗಳನ್ನು ತೆರೆದು ಲಿಂಕ್ ಮೂಲಕ ಕಳುಹಿಸುತ್ತಾರೆ. ಇದಕ್ಕೆ ಅಮಾಯಕರು ಬಲಿಯಾಗಬಾರದು ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.
52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ಸಂದೇಶವಿದು..

ಒಂದು ಭೀಕರ ಸ್ಫೋಟ, ವಾರ ಕಳೆಯುವಷ್ಟರಲ್ಲಿ 14 ಸಾವು; ಸೀಮಂತದ ಬೆನ್ನಿಗೇ ಭಾರಿ ಸೂತಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 5 =
Remember me
