ಬೆಂಗಳೂರು:ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವವರ ವಿರುದ್ಧ ಮೊಕದ್ದಮೆ ಹೂಡಿ ಎಫ್​ಐಆರ್ ದಾಖಲಿಸುವಂತೆ ರಾಜ್ಯ ಚುನಾವಣಾ ಆಯೋಗ, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹರಾಜು ಮಾಡಿರುವ ಸಾಕ್ಷ್ಯ ಸಿಕ್ಕಿರುವ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಎಫ್​ಐಆರ್ ದಾಖಲಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ. ಬಿ. ಬಸವರಾಜು ‘ವಿಜಯವಾಣಿ’ಗೆ ತಿಳಿಸಿದರು. ಹರಾಜು ಮೂಲಕ ಸದಸ್ಯತ್ವ ಪಡೆಯುವುದು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೃತ್ಯ. ಇಂತಹ ಕೃತ್ಯಗಳಿಗೆ ಕಡಿವಾಣ ಅಗತ್ಯವಾಗಿದೆ ಎಂದು ಬಸವರಾಜು ಅಭಿಪ್ರಾಯಪಟ್ಟರು.
ಸರ್ಕಾರದಿಂದಲೂ ಪತ್ರ:ಅವಿರೋಧ ಆಯ್ಕೆ ಹೆಸರಿನಲ್ಲಿ ಸದಸ್ಯರ ಹರಾಜು ಪ್ರಕರಣಗಳ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮವಹಿಸಲು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದೆ ಎಂದು ಪರಿಷತ್​ನಲ್ಲಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಚುನಾವಣೆಗೆ ತಡೆಯಾಜ್ಞೆ:ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮ ಪಂಚಾಯಿತಿಯಿಂದ ಮನ್ಮಥನಾಳ ಗ್ರಾಮವನ್ನು ಬೇರ್ಪಡಿಸಿ ಬಿಂಜವಾಡಗಿ ಗ್ರಾಮ ಪಂಚಾಯಿತಿಗೆ ಸೇರ್ಪಡೆ ಮಾಡಿದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದ ವಿರುದ್ಧ ಹೈಕೋರ್ಟ್​ದಿಂದ ತಡೆಯಾಜ್ಞೆ ಇರುವುದರಿಂದ ಹಾವರಗಿ ಮತ್ತು ಬಿಂಜವಾಡಗಿ ಗ್ರಾಮ ಪಂಚಾಯಿತಿಗಳನ್ನು ಚುನಾವಣೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.
ಎಫ್​ಐಆರ್ ದಾಖಲು:ಗ್ರಾಪಂ ಸ್ಥಾನಗಳನ್ನು ನಿಯಮ ಬಾಹಿರವಾಗಿ ಹರಾಜು ಹಾಕಿದ ಮುಖಂಡರು ಹಾಗೂ ಹರಾಜಾದ ಅಭ್ಯರ್ಥಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿ ವಾರ್ಡ್ 1ಕ್ಕೆ ಸದಸ್ಯರ ಸ್ಥಾನಗಳನ್ನು ನಿಯಮಬಾಹಿರವಾಗಿ ಹರಾಜು ಮೂಲಕ ಆಯ್ಕೆ ಮಾಡಿದ ಗ್ರಾಮದ 6 ಮುಖಂಡರು ಮತ್ತು ಆಯ್ಕೆಯಾದ ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದೆ. ಬಳ್ಳಾರಿ ಜಿಲ್ಲೆ ಕುರುಗೋಡಿನಲ್ಲಿ 18 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ವೈರಲ್ ಆಗಿದ್ದ ವಿಡಿಯೋದಲ್ಲಿ ಇರುವವರನ್ನು ಗುರುತಿಸಿ, ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ರಾಘವೇಂದ್ರ ರಾವು ತಿಳಿಸಿದರು.
ಆಯೋಗದ ಎಚ್ಚರಿಕೆ ನಡುವೆಯೂ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ, ಬಾಗೂರು ಸೇರಿದಂತೆ ವಿವಿಧ ಹೋಬಳಿಯ ಗ್ರಾಮಗಳಲ್ಲಿ ಭವನ ನಿರ್ಮಾಣ ಹಾಗೂ ದೇವಾಲಯಗಳ ಜೀಣೋದ್ಧಾರಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಹರಾಜು ನಡೆದಿದೆ. ಗ್ರಾಮಸ್ಥರೇ ಸಭೆ ಸೇರಿ ರ್ಚಚಿಸಿ ಸದಸ್ಯ ಸ್ಥಾನದ ಹರಾಜಿನ ಮೊತ್ತ ನಿಗದಿಪಡಿಸುತ್ತಿದ್ದಾರೆ. ಹಿರೀಸಾವೆ ಹೋಬಳಿ ದಿಡಗ ಗ್ರಾಮ ಪಂಚಾಯಿತಿಯ ದಿಡಗ ಹಳೇ ಗ್ರಾಮದಲ್ಲಿ 3 ಸ್ಥಾನಗಳಿಂದ ಮಾರಮ್ಮದೇವಿ ದೇಗುಲ ನಿರ್ವಣಕ್ಕೆ 11 ಲಕ್ಷ ರೂ. ಪಡೆಯಲು ತೀರ್ವನವಾಗಿದೆ. ಕರಿಕ್ಯಾತನಹಳ್ಳಿ ಗ್ರಾಮದಲ್ಲಿ 1 ಸ್ಥಾನಕ್ಕೆ 17.30 ಲಕ್ಷ ರೂ. ಹಾಗೂ ಮೆಳ್ಳಹಳ್ಳಿಯಲ್ಲಿ ಒಂದು ಸ್ಥಾನಕ್ಕೆ 3 ಲಕ್ಷ ರೂ.ಗಳನ್ನು ಗ್ರಾಮದ ಅಭಿವೃದ್ಧಿಗೆ ಅಥವಾ ದೇಗುಲ ನಿರ್ವಣಕ್ಕೆ ನೀಡಲು ಒಪ್ಪಿಗೆಯಾಗಿದೆ. ಪಿ.ಹೊಸಹಳ್ಳಿ ಹಾಗೂ ನಾಗನಹಳ್ಳಿ ಗ್ರಾಮಗಳಿಂದ 3 ಸ್ಥಾನಗಳ ಪೈಕಿ 2 ಸ್ಥಾನಗಳು 16 ಲಕ್ಷ ರೂ.ಗೆ ಮಾತುಕತೆ ನಡೆದಿದೆ. ಆದರೆ, 1 ಸ್ಥಾನಕ್ಕೆ ಅಂತಿಮ ತೀರ್ಮಾನ ಆಗಬೇಕಿದೆ. ಕಬ್ಬಳಿ ಗ್ರಾಪಂ ವ್ಯಾಪ್ತಿಯ ದಾಸರಹಳ್ಳಿ ವೀರಭದ್ರ ದೇಗುಲ ನಿರ್ವಣಕ್ಕೆ ವ್ಯಕ್ತಿಯೊಬ್ಬರು ವರ್ಷದ ಹಿಂದೆಯೇ 5 ಲಕ್ಷ ರೂ. ನೀಡಿದ್ದು, ಅವರನ್ನು ಈಗ ಗೆಲ್ಲಿಸಬೇಕಿದೆ. ಮಂಡಲೀಕನಹಳ್ಳಿ ಗ್ರಾಮದ ಬಸವೇಶ್ವರ ದೇಗುಲ ನಿರ್ವಣಕ್ಕೆ ಹಣ ಕೊಡುವುದಾಗಿ ವ್ಯಕ್ತಿಯೊಬ್ಬರು ಒಪ್ಪಿಕೊಂಡಿದ್ದು, ಅದಕ್ಕೆ ಗ್ರಾಮಸ್ಥರು ಸಮ್ಮತಿ ನೀಡಿದ್ದಾರೆ. ಬೆಳಗೀಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕೋನ ಹಳ್ಳಿಯ 1 ಸ್ಥಾನಕ್ಕೆ 4 ಲಕ್ಷ ರೂ. ನಿಗದಿಯಾಗಿದೆ. ಆದರೆ ಇದಕ್ಕೆ ಕೆಲವರ ಒಪ್ಪಿಗೆ ಇಲ್ಲದ ಕಾರಣ ಮತ್ತೊಮ್ಮೆ ಸಭೆ ನಡೆಯುವ ಸಾಧ್ಯತೆಯಿದೆ. ಇದೇ ಗ್ರಾಪಂ ವ್ಯಾಪ್ತಿಗೆ ಸೇರಲಿರುವ ಬದ್ದೀಕೆರೆಯ2 ಸ್ಥಾನಗಳು 16.5 ಲಕ್ಷ ರೂ.ಗೆ ನಿಗದಿಯಾಗಿದ್ದು, ಬಸವೇಶ್ವರಸ್ವಾಮಿ ರಥ ನಿರ್ವಣಕ್ಕೆ ಹಣ ಬಳಸಲು ಗ್ರಾಮಸ್ಥರು ಒಪ್ಪಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಅಳಿಸಲಾಗದ ಶಾಯಿ ಪೂರೈಕೆ ಮಾಡಲು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಭರದ ಸಿದ್ಧತೆ ನಡೆಸಿದೆ. ಎರಡು ಹಂತದಲ್ಲಿ ನಡೆಯುವ ಚುನಾವಣೆಯ ಮತದಾನದಲ್ಲಿ ಈ ಶಾಯಿಯನ್ನು ಬಳಸಲಾಗುತ್ತಿದೆ. 99 ಸಾವಿರ ಬಾಟಲಿಗಳಿಗೆ (ಪ್ರತಿ ಬಾಲಿನಲ್ಲಿ 5ಎಂಎಲ್) ರಾಜ್ಯ ಚುನಾವಣಾ ಆಯೋಗದಿಂದ ಬೇಡಿಕೆ ಬಂದಿದೆ. ಇದರೊಂದಿಗೆ 6,580 ಪ್ಯಾಕೇಟ್ ಸೀಲಿಂಗ್ ವ್ಯಾಕ್ಸ್​ಗೂ ಬೇಡಿಕೆ ಸಲ್ಲಿಸಿದ್ದು, ಒಟ್ಟಾರೆ ವಹಿವಾಟು 1.15 ಕೋಟಿ ರೂ. ಆಗಲಿದೆ.
ಈ ಗ್ರಾಮದ ಎಸ್​ಸಿ ಮತ್ತು ಎಸ್​ಟಿ ಮೀಸಲು ಇರುವ ವಾರ್ಡ್​ಗಳಿಗೆ 30 ವರ್ಷದಿಂದ ಚುನಾವಣೆಯೇ ನಡೆದಿಲ್ಲ. ಇಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗುತ್ತಿದ್ದಾರೆ. ಇದು ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಪಂನ ವಿಶೇಷ. ದಾಸ್ತಿಕೊಪ್ಪ, ಅಮರಾಪುರ, ವೀರಾಪುರ ಸೇರಿ ಒಟ್ಟು 3 ಗ್ರಾಮಗಳು ಈ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, 14 ಸದಸ್ಯ ಸ್ಥಾನಗಳಿವೆ. ಅದರಲ್ಲಿ ದಾಸ್ತಿಕೊಪ್ಪ ಗ್ರಾಮದಲ್ಲಿ 9 ಸದಸ್ಯ ಸ್ಥಾನಗಳಲ್ಲಿನ ಯಾವುದೇ ವಾರ್ಡ್​ಗೆ ಎಸ್​ಸಿ ಮತ್ತು ಎಸ್​ಟಿ ಮೀಸಲುಗೊಂಡರೆ ಆ ವಾರ್ಡ್​ಗೆ ಚುನಾವಣೆ ನಡೆಯುವುದಿಲ್ಲ. ಏಕೆಂದರೆ ಅಲ್ಲಿನ ಎಸ್​ಸಿ ಮತ್ತು ಎಸ್​ಟಿ ಸಮುದಾಯದ ಜನರು ಒಗ್ಗಟ್ಟಿನಿಂದ ಒಬ್ಬರನ್ನೇ ಆಯ್ಕೆ ಮಾಡುತ್ತಾರೆ. ಹಾಗಾಗಿ 1990 ರಿಂದ 2020ರ ನಡುವಿನ ಅವಧಿಯಲ್ಲಿ ಜರುಗಿದ 5 ಗ್ರಾಪಂ ಚುನಾವಣೆಗಳಲ್ಲಿ ಎಸ್​ಸಿ ಮತ್ತು ಎಸ್​ಟಿ ವಾರ್ಡ್​ನಲ್ಲಿ ಅಭ್ಯರ್ಥಿಗಳು ಅವಿರೋಧವಾಗಿಯೇ ಆಯ್ಕೆಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
