ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿವಿ ಹಾಗೂ ಬೆಂಗಳೂರು ಉತ್ತರ ವಿವಿಗಳ ಪೈಕಿ ಯಾವುದಾದರೂ ಒಂದು ವಿವಿಗೆ ಅರ್ಥಶಾಸಜ್ಞ ಪ್ರೊ.ಕೆ.ವೆಂಕಟಗಿರಿಗೌಡ ಹೆಸರು ನಾಮಕರಣ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದ್ದಾರೆ.
ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅರ್ಥಶಾಸಜ್ಞ ‘ಪ್ರೊ.ಕೆ.ವೆಂಕಟಗಿರಿಗೌಡ ಅವರ ಜನ್ಮಶತಮಾನೋತ್ಸವ’ ಸಮಾರಂಭದಲ್ಲಿ ಮಾತನಾಡಿ, ವಿವಿಗೆ ಡಾ.ಕೆ .ವೆಂಕಟಗಿರಿಗೌಡ ಹೆಸರು ನಾಮಕಾರಣ ಮಾಡುವಂತೆ ಸಮಿತಿಯವರು ನಮಗೆ ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಮಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಚರ್ಚಿಸುವುದಾಗಿ ಹೇಳಿದರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಾತನಾಡಿ, ನಾನು ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ವೆಂಕಟಗಿರಿಗೌಡರು ಅರ್ಥಶಾಸ್ತ್ರ ಪ್ರೊಫೆಸರ್ ಆಗಿ ಪಾಠ ಹೇಳಿ ಕೊಡುತ್ತಿದ್ದರು. ಶಿಸ್ತು ಹಾಗೂ ಸಿಟ್ಟಿನ ಮನುಷ್ಯ. ಅರ್ಥಶಾಸ್ತ್ರದ ಪ್ರಬುದ್ಧ ವ್ಯಾಖ್ಯಾನಕಾರರಾಗಿದ್ದರು ಎಂದು ಬಣ್ಣಿಸಿದರು.
ವೆಂಕಟಗಿರಿಗೌಡರ ಕೃತಿ ಭಾಷಾಂತರಿಸಿಆಯಾ ವಿವಿಗಳು ಪ್ರತಿಭಾವಂತರಿಗೆ ಒಳ್ಳೆಯ ಪ್ರೋತ್ಸಾಹ ನೀಡಿದರೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂಹಾವರ್ಡ್ ವಿವಿಗಳಂತಹ ಉನ್ನತ ವಿಶ್ವವಿದ್ಯಾಲಯಗಳನ್ನು ಹುಡುಕಿಕೊಂಡು ಹೋಗುವ ಅಗತ್ಯತೆ ಬರುವುದಿಲ್ಲ. ಹೀಗಾಗಿ, ವೆಂಕಟಗಿರಿಗೌಡರ ಕೃತಿಗಳನ್ನು ಜನ ಸಮೂಹಕ್ಕೆ ತಲುಪುವ ರೀತಿಯಲ್ಲಿ ನಮ್ಮ ಭಾಷೆಗೆ ಭಾಷಾಂತರಿಸಿದರೆ ಓದಲು ಅನುಕೂಲವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು. ಆಯಾ ಕಾಲಘಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸದಿದ್ದರೆ ಅಮೂಲ್ಯ ಸಂಪತ್ತುನ್ನು ಕಳೆದುಕೊಳ್ಳಬೇಕಾಗುತ್ತದೆ. ಎಲ್ಲರೂ ಆಗಂತಕರಾಗಿಯೇ ಜಗತ್ತಿಗೆ ಬರುತ್ತಾರೆ. ನಂತರ ಅತಿಥಿಗಳಾಗಿ ಉಳಿಯುವುದು ಸಹಜ. ಆದರೆ, ಒಬ್ಬ ವ್ಯಕ್ತಿ ಮೃತಪಟ್ಟ ಮೇಲೂ ಸಹಸ್ರಾರು ಜನರು ಸೇರಿ ಕಾರ್ಯಕ್ರಮ ಮಾಡುತ್ತಾರೆ ಅಂದರೆ ಅಂಥ ವ್ಯಕ್ತಿ ಬದುಕಿದ ರೀತಿಯನ್ನು ನಮಗೆ ತೋರಿಸುತ್ತದೆ. ಇದೇ ಸಾಲಿಗೆ ಡಾ.ಕೆ.ವೆಂಕಟಗಿರಿಗೌಡ ಸೇರಿದವರು ಎಂದು ಶ್ರೀಗಳು ಹೇಳಿದರು.
ಇದನ್ನೂ ಓದಿ:ಭಾರತ- ಲಂಕಾ ಫೈನಲ್ ಪಂದ್ಯದ ಗತಿ ಬದಲಾಯಿಸಿದ ಮೊಹಮದ್ ಸಿರಾಜ್‌ನ ಒಂದು ಓವರ್ ದಾಳಿ ಹೀಗಿತ್ತು….
8 ಸಾಧಕರಿಗೆ ಪ್ರಶಸ್ತಿಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್‌ಸಿಂಗ್, ರಿಸರ್ವ್ ಬ್ಯಾಂಕ್ ಆ್ ಇಂಡಿಯಾ (ಆರ್‌ಬಿಐ) ಮಾಜಿ ನಿರ್ದೇಶಕ ಡಾ.ಚರಣ್ ಸಿಂಗ್, ಮಾಜಿ ರಾಜ್ಯ ಸಭಾ ಸದಸ್ಯ ರಾಜೀವ್ ಗೌಡ ಸೇರಿ 8 ಸಾಧಕರಿಗೆ ಡಾ.ಕೆ.ವೆಂಕಟಗಿರಿಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರೊ.ಕೆ.ಮಲ್ಲಯ್ಯ ರಚಿಸಿರುವ ‘ಡಾ.ಕೆ.ವೆಂಕಟಗಿರಿಗೌಡ-ಭಾರತದ ಖ್ಯಾತ ಅರ್ಥಶಾಸಜ್ಞ’ ಪುಸ್ತಕ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್, ಸಲಹಾ ಸಮಿತಿ ಅಧ್ಯಕ್ಷ ಪ್ರೊ.ಎಚ್.ಕೃಷ್ಣೇಗೌಡ ಮತ್ತಿತರರಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 + 7 =
Remember me
