ಬೆಂಗಳೂರು:ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರ ಮದುವೆ ಡೇಟ್​ ಫಿಕ್ಸ್​ ಆಗಿದೆ. ಕೊಡಗು ಮೂಲದ ಉದ್ಯಮಿ ಯಶಸ್ವಿ ಜೊತೆ ಇದೇ ನವೆಂಬರ್ 27 ಮತ್ತು 28ರಂದು ಹಸೆಮಣೆ ಏರಲಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಅದಿತಿ ಪ್ರಭುದೇವ ಅವರ ಮದುವೆ ಫಿಕ್ಸ್​ ಆಗಿತ್ತು.
ಮದುವೆ ಆಹ್ವಾನ ಪತ್ರಿಕೆಯಲ್ಲಿ‘ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ’ಎಂದು ಹಾಕಿಸಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ತಂದೆ-ತಾಯಿ, ಗುರು-ಹಿರಿಯರ, ಮನೆ ದೇವರ ಆಶೀರ್ವಾದದೊಂದಿಗೆ ಎಂದು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಹಾಕಿಸಿಕೊಳ್ಳೋದು ಸಾಮಾನ್ಯ. ಆದರೆ, ನಟಿ ಅದಿತಿ ಅವರು ತಮ್ಮ ಆಹ್ವಾನ ಪತ್ರಿಕೆಯಲ್ಲಿ ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ ಎಂದು ಹಾಕಿಸಿಕೊಂಡಿದ್ದು, ಅವರಲ್ಲಿನ ಕನ್ನಡಾಭಿಮಾನ ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಟ ರಾಜ್ಯೋತ್ಸವ ತಿಂಗಳಲ್ಲೇ ದಾಂಪತ್ಯ ಜೀವನಕ್ಕೂ ಕಾಲಿಡುತ್ತಿರುವ ಅದಿತಿ ಅವರಿಗೆ ಲಕ್ಷಾಂತರ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ದಾವಣಗೆರೆ ಮೂಲದ ಅದಿತಿ ಮೊದಲು ‘ನಾಗಕನ್ನಿಕೆ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದು, ನಂತರ ಧೈರ್ಯಂ ಸಿನಿಮಾ ಮೂಲಕ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದರು. ‘ಸಿಂಗ’, ‘ಬಜಾರ್’, ‘ರಂಗನಾಯಕಿ’, ‘ಬ್ರಹ್ಮಚಾರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಚಂದ್ರು ಕಾರು 100 ಕಿಲೋ ಮೀಟರ್ ವೇಗದಲ್ಲಿತ್ತು… ಪ್ರಕರಣ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 4 =
Remember me
