ಬೆಂಗಳೂರು:ಚಂದನವನದ ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್‍ರವರು ಕಲಿಯುಗದ ಕರ್ಣ ಎಂದೇ ಖ್ಯಾತಿ ಪಡೆದಿದ್ದರು. ಕೆಲ ವರ್ಷಗಳ ಹಿಂದೆ ಅಂಬರೀಶ್‍ರವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ 2 ಲಕ್ಷ ರೂ. ಹಣ ನೀಡಿರುವ ಬಗ್ಗೆ ಸಂಸದೆ ಸುಮಲತಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಎಂ.ಎಸ್. ಧೋನಿಗೆ ಈ ಹಿಂದೆ ಅಂಬರೀಶ್ ಸಹಾಯ ಮಾಡಿದ್ದರು ಎನ್ನುವ ವಿಚಾರವೂ ಬೆಳಕಿಗೆ ಬಂದಿತ್ತು. ಕ್ರಿಕೆಟ್ ಆಡಲು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ ಧೋನಿ ಆಟ ನೋಡಿ ಮನಸೋತ ರೆಬಲ್ ಸ್ಟಾರ್, ಅವರ ಕಷ್ಟದ ಬಗ್ಗೆ ತಿಳಿದು ಹಣ ನೀಡಿದ್ದರಂತೆ. ಈ ವಿಚಾರದ ಬಗ್ಗೆ ಮಂಡ್ಯ ಸುಮಲತಾ ಅಂಬರೀಶ್ ಈಗ ಮಾಹಿತಿ ಹೊರಹಾಕಿದ್ದಾರೆ.
ಅಂಬರೀಶ್‍ರವರು ಮಾಡಿದ ಮಾನವೀಯ ಕಾರ್ಯಗಳ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಏಕೆಂದರೆ ಅವರು ಮಾಡುವ ದಾನದ ಬಗ್ಗೆ ಎಲ್ಲಿಯೂ ಪ್ರಚಾರ ಮಾಡಿಕೊಳ್ಳುತ್ತಿರಲಿಲ್ಲ. ಅನಿರೀಕ್ಷಿತವಾಗಿ ಈ ಬಗ್ಗೆ ನನಗೆ ತಿಳಿದಾಗ ಸರ್ಪ್ರೈಸ್ ಆಗುತ್ತದೆ. ಅವರನ್ನು ಪ್ರೀತಿಸುವ ಜನರೇ ದಾನ ಕರ್ಣ ಎಂದು ಅಂಬರೀಶ್‍ರನ್ನು ಕರೆಯುತ್ತಾರೆ ಎಂದು ಟ್ವಿಟ್​​ನಲ್ಲಿ ಬರೆದುಕೊಂಡಿದ್ದಾರೆ.
So many deeds of kindness by#RebelStarAmbareeshare little known because he never believed in publicising them. So it's a wonderful surprise when I come across information like this unexpectedly. No wonder thatwas also called fondly as Dhaana Karna by people who loved him.❤pic.twitter.com/tzRmUHuKTH— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA)August 21, 2021
So many deeds of kindness by#RebelStarAmbareeshare little known because he never believed in publicising them. So it's a wonderful surprise when I come across information like this unexpectedly. No wonder thatwas also called fondly as Dhaana Karna by people who loved him.❤pic.twitter.com/tzRmUHuKTH
2004, ಭಾರತ-ಶ್ರೀಲಂಕಾ ಪಂದ್ಯ:
2004ರಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅದ್ಭುತ ಆಟ ಪ್ರದರ್ಶಿಸಿದರು. ಈ ವೇಳೆ ಪಂದ್ಯ ನೋಡಲು ಹೋಗಿದ್ದ ಅಂಬರೀಶ್‌ಗೆ ಧೋನಿ ಆಟ ಗಮನ ಸೆಳೆಯಿತು. ಬಳಿಕ ಧೋನಿಯ ಹಿನ್ನೆಲೆ ಬಗ್ಗೆ ತಿಳಿದುಕೊಂಡು ಅಂಬರೀಶ್, ಧೋನಿ ಭೇಟಿ ಮಾಡಿ 2 ಲಕ್ಷ ರೂಪಾಯಿ ಚೆಕ್ ಕೊಟ್ಟಿದ್ದರಂತೆ. ಈ ಕುರಿತು ಅನೇಕ ಪತ್ರಿಕೆಗಳಲ್ಲಿ ತಡವಾಗಿ ವರದಿಯಾಗಿದೆ.
ಒಲಿಂಪಿಕ್ಸ್ ಪದಕ ವಿಜೇತನಿಗೆ ಗೌರವ, ಆರ್ಮಿ ಕ್ರೀಡಾಂಗಣಕ್ಕೆ ‘ನೀರಜ್ ಚೋಪ್ರ’ ಹೆಸರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + fifteen =
Remember me
