ಬಾಗಲಕೋಟೆ:ಚಾಲುಕ್ಯರ ಕಾಲ ರಾಜಧಾನಿಯಾಗಿದ್ದ ಐಹೊಳೆಯ ಪುರಾತನ ದೇವಾಲಯಗಳಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿದ್ದು, ಐತಿಹಾಸಿಕ ದೇವಾಲಯಗಳ ಸೂಕ್ತ ನಿರ್ವಹಣೆಗೆ ಆಗ್ರಹಿಸಿ ಸ್ಯಾಂಡಲ್​ವುಡ್​ನ ನಾಯಕ ನಟ ಅನಿರುದ್ಧ್​​ ವಿಷ್ಣುವರ್ಧನ್​ ವಿಡಿಯೋ ಸಂದೇಶದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಐಹೊಳೆ ಶಿಲ್ಪಕಲೆಯ ತೊಟ್ಟಿಲು, ದೇವಸ್ಥಾನಗಳ ಬೀಡು. ಇಲ್ಲಿಗೆ ಜಿಲ್ಲೆ, ದೇಶ, ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಪ್ರತಿದಿನ ಭೇಟಿ ನೀಡುತ್ತಾರೆ. ಆದರೆ ಇಲ್ಲಿರುವ ದೇವಸ್ಥಾನಗಳ ಸಂಕೀರ್ಣದಲ್ಲಿ ಕೆಲವು ದೇವಸ್ಥಾನಗಳ ಶಿಲ್ಪ, ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

A post shared by Aniruddha Jatkar (@aniruddhajatkar)
ಇದನ್ನೂ ಓದಿ:ಮೈಸೂರು ದಸರಾ 2024; ಕಾಡಿನಿಂದ ನಾಡಿನತ್ತ ಹೊರಟ ಅಭಿಮನ್ಯು ನೇತೃತ್ವದ ಗಜಪಡೆ
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬೇಸರ ವ್ಯಕ್ತಪಡಿಸಿರುವ ನಟ ಅನಿರುದ್ಧ್​​ ಐತಿಹಾಸಿಕ ದೇವಸ್ಥಾನಗಳ ಫೋಟೋಗಳನ್ನು ಹಂಚಿಕೊಂಡಿದ್ದು ನಿರ್ವಹಣೆಗೆ ಮನವಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಟ ಅನಿರುದ್ಧ್​​ ಐಹೊಳೆಗೆ ಭೇಟಿ ನೀಡಿದ್ದರು.  ವೇಳೆ ಗೋಡೆಗಳು, ಶಿಲ್ಪಗಳ ಮೇಲೆ ಬಿರುಕು ಕಾಣಿಸಿದ್ದು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ದುರಸ್ತಿ ಮತ್ತು ಸೂಕ್ತ ನಿರ್ವಹಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಇತ್ತ ನಟ ಅನಿರುದ್ಧ್​ ಮಾಡಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈ ಬಗ್ಗೆ ಅಧಿಕಾರಿಗಳು ಮಾತನಾಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ಮರಳುಗಲ್ಲಿನ ದೇವಸ್ಥಾನಗಳಲ್ಲಿ ಆಗಾಗ ಸಣ್ಣ ಬಿರುಕು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಬಗ್ಗೆ ಅಧ್ಯಯನ ನಡೆಸಿ ಕಾಮಗಾರಿ ಕೈಗೊಳ್ಳಲಾಗುವುದು. ಶಿಲ್ಪಗಳಲ್ಲಿ ಬಿರುಕು ಬಿಟ್ಟಿದ್ದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಮಗಾರಿ ನಡೆಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 12 =
Remember me
