ಬೆಂಗಳೂರು:ಹಿಂದುತ್ವದ ಬಗ್ಗೆ ಅವಹೇಳನಕಾರಿಯಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ನಟ ಚೇತನ್ ಅಹಿಂಸಾನನ್ನು ಶೇಷಾದ್ರಿಪುರಂ ಪೊಲೀಸರು ಇಂದು ಬೆಳಗ್ಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದೀಗ ನಟ ಚೇತನ್​ಗೆ 32ನೇ ಎಸಿಎಮ್​ಎಮ್​ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಶಿವಕುಮಾರ್ ಎಂಬುವರು ನೀಡಿದ್ದ ದೂರಿನಂತೆ ಶೇಷಾದ್ರಿಪುರಂ ಠಾಣೆ ಪೊಲೀಸರು ಐಪಿಸಿ 295A, 505B ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಚೇತನ್​ನನ್ನು ಬಂಧಿಸಿ ಕೋರ್ಟ್​ಗೆ ಕರೆತಂದಿದ್ದರು. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಚೇತನ್ ಅವರನ್ನು ಬಂಧಿಸಲಾಗಿತ್ತು.ಇದನ್ನೂ ಓದಿ:ರೈಲು ನಿಲ್ದಾಣದ ಟಿ.ವಿ ಪರದೆಯಲ್ಲಿ ಪ್ರದರ್ಶನವಾದ ನೀಲಿ ಚಿತ್ರ; ಮುಜುಗರಕ್ಕೊಳಗಾದ ಪ್ರಯಾಣಿಕರು
Hindutva is built on LIESSavarkar: Indian ‘nation’ began when Rama defeated Ravana & returned to Ayodhya —> a lie1992: Babri Masjid is ‘birthplace of Rama’ —> a lie2023: Urigowda-Nanjegowda are ‘killers’ of Tipu—> a lieHindutva can be defeated by TRUTH—> truth is EQUALITY— Chetan Kumar Ahimsa / ಚೇತನ್ ಅಹಿಂಸಾ (@ChetanAhimsa)March 20, 2023
Hindutva is built on LIESSavarkar: Indian ‘nation’ began when Rama defeated Ravana & returned to Ayodhya —> a lie1992: Babri Masjid is ‘birthplace of Rama’ —> a lie2023: Urigowda-Nanjegowda are ‘killers’ of Tipu—> a lieHindutva can be defeated by TRUTH—> truth is EQUALITY
ನಟ ಚೇತನ್ ತಮ್ಮ ಫೇಸ್​ಬುಕ್​ನಲ್ಲಿ ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಬರೆದುಕೊಂಡಿದ್ದರು. ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎಂಬುದು ಸುಳ್ಳು. ಬಾಬರಿ ಮಸೀದಿ ರಾಮನ ಜನ್ಮಭೂಮಿ ಎಂದು ನಂಬಿರುವುದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದಾಗಿದೆ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ:ನಾಗರಹಾವಿನ ವಿಷ ಹೀರಿ ತಾಯಿ ಜೀವ ಉಳಿಸಿದ ಪುತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 2 =
Remember me
