ಮಂಡ್ಯ: ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮ ದಿನವನ್ನು ಅಭಿಮಾನಿ ಓಂಕಾರ್ ವಿಶಿಷ್ಟವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ನಗರದ ವಿಕಸನ ಸಂಸ್ಥೆಯ ಆಶ್ರಯದಲ್ಲಿರುವ ಮಕ್ಕಳಿಗೆ ಉಚಿತವಾಗಿ ಹೇರ್​ ಕಟ್ಟಿಂಗ್​ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿದರು.
ಈ ಸಂಸ್ಥೆಯಲ್ಲಿ ಪಾಲಕರಿಂದ ದೂರವಾದ ಮಕ್ಕಳು ಆಶ್ರಯ ಪಡೆದಿದ್ದಾರೆ. ಸಂಸ್ಥೆಯಲ್ಲಿರುವ 30ಕ್ಕೂ ಹೆಚ್ಚು ಮಕ್ಕಳಿಗೆ ಹೊದಿಕೆ ಕೂಡ ವಿತರಿಸಲಾಯಿತು. ಸಂಸ್ಥೆಯಲ್ಲಿರುವ ಮಕ್ಕಳು ಕೇಕ್​ ಕತ್ತರಿಸಿ ದರ್ಶನ್​ಗೆ ಒಳ್ಳೆಯದಾಗಲಿ ಎಂದು ಅರಸಿದರು.
ಮೂಲತಃ ಆಂಧ್ರಪ್ರದೇಶದವರಾದ ಓಂಕಾರ್, ಹಲವು ವರ್ಷಗಳಿಂದ ನಗರದಲ್ಲಿ ಕಟ್ಟಿಂಗ್​ ಸೆಲೂನ್ ನಡೆಸುತ್ತಿದ್ದಾರೆ. ದರ್ಶನ್​ ಅವರ ಅಪ್ಪಟ ಅಭಿಮಾನಿಯಾಗಿರುವ ಅವರು ಪ್ರತಿ ವರ್ಷ ದರ್ಶನ್ ಜನ್ಮದಿವನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ದರ್ಶನ್ ಅವರ ವ್ಯಕ್ತಿತ್ವ ಮತ್ತು ಸರಳತೆ ನನಗೆ ಇಷ್ಟ. ಅವರ ಗುಣವನ್ನು ಅನುಸರಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಜನ್ಮದಿನ ಆಚರಿಸಿ ನನ್ನಿಂದಾಗುವ ವಸ್ತುಗಳನ್ನು ವಿತರಿಸುತ್ತೇನೆ. ಆದರೆ, ಈವರೆಗೂ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿರುವುದು ಬೇಸರದ ವಿಷಯ ಎಂದರು.
ವಿಕಸನ ಸಂಸ್ಥೆಯ ಸಂಯೋಜಕ ಪ್ರದೀಪ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + six =
Remember me
