ಬೆಂಗಳೂರು:ರಾಜರಾಜೇಶ್ವರಿ ನಗರದ ಉಪಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿರುವ ಬೆನ್ನಲ್ಲೇ ಮೂರು ಪಕ್ಷದ ನಾಯಕರ ಪ್ರಚಾರ ಭರಾಟೆ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಇಂದು ಪ್ರಚಾರ ಕಣಕ್ಕೆ ಧುಮುಕಿರುವುದು ಬಿಜೆಪಿ ಪಾಳಯಕ್ಕೆ ಮತ್ತಷ್ಟು ಬಲ ತಂದಿದೆ.
ಚುನಾವಣಾ ಪ್ರಚಾರಕ್ಕೆ ಹೊರಡುವ ಮುನ್ನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್​, ನನ್ನ ಚಿತ್ರಗಳ ನಿರ್ಮಾಪಕ ಎಂಬ ಕಾರಣಕ್ಕೆ ಪ್ರಚಾರಕ್ಕೆ ತೆರಳುತ್ತಿಲ್ಲ. ಬದಲಾಗಿ ಅವರ ಮಾನವೀಯತೆಯನ್ನು ನೋಡಿ ಹೋಗುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ಭಾರತ ವಿರೋಧಿ ಮೀಟಿಂಗ್​ ಮಧ್ಯೆ ಶ್ರೀರಾಮ, ಹನುಮಾನ್​- ಪಾಕ್​ ಗಣ್ಯರು ಸುಸ್ತೋ ಸುಸ್ತು!
ಇಡೀ ಜಗತ್ತನೇ ಕರೊನಾ ಬಾಧಿಸಿದೆ. ಇಂತಹ ಸಂದರ್ಭದಲ್ಲಿ ಅನೇಕರು ಊಟವಿಲ್ಲದೇ ಪರದಾಡಿದ್ದಾರೆ. ಆದರೆ, ಮುನಿರತ್ನ ಅವರು ಅನೇಕರ ಜನರಿಗೆ ದಾಸೋಹವನ್ನೇ ನಡೆಸಿದರು. ಅವರ ಕಾರ್ಯಗಳಾಗಲಿ ಅಥವಾ ನಿರ್ಮಾಪಕನೆಂಬ ಕಾರಣದಿಂದಾಗಲಿ ನಾನು ಪ್ರಚಾರಕ್ಕೆ ಹೋಗುತ್ತಿಲ್ಲ. ಮಾನವೀಯ ಕೆಲಸಗಳನ್ನು ಗುರುತಿಸಿ ಅವರ ಪರ ಪ್ರಚಾರ ಮಾಡುತ್ತಿದ್ದೇನೆಂದು ಪುನರುಚ್ಛರಿಸಿದರು.
ಇದೇ ವೇಳೆ ನಿಖಲ್​ ಹೆಸರು ಪ್ರಸ್ತಾಪಿಸಿದ ದರ್ಶನ್​​, ಆರ್​ಆರ್ ನಗರ ಕ್ಷೇತ್ರದಲ್ಲಿ ನಿಖಿಲ್, ಅವರ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ನಾನು ಮುನಿರತ್ನ ಪರವಾಗಿ ಪ್ರಚಾರಕ್ಕೆ ಹೊಗುತ್ತಿದ್ದೇನೆ ಎಂದಷ್ಟೇ ಹೇಳಿದರು.
ಒಂದು ಬೆಳಗ್ಗೆಯಿಂದ ರಾತ್ರಿಯವರೆಗೂ ನಟ ದರ್ಶನ್​ ಅವರು ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅನೇಕ ಏರಿಯಾಗಳಲ್ಲಿ ರೋಡ್​ ಶೋ ನಡೆಸಲಿದ್ದು, ಎಲ್ಲೆಡೆ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಆರ್ ಆರ್ ನಗರಕ್ಕೆ ಡಿ ಕೆ ಸೋದರರ ಪ್ರವೇಶ ನಿರ್ಬಂಧಕ್ಕೆ ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
