ಬಳ್ಳಾರಿ:ರೇಣುಕಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಇಂದು ಆರೋಪಿ ದರ್ಶನ್​ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆ ಮಾಡಲಾಯಿತು. ಪ್ರಕರಣದ ತನಿಖೆಯನ್ನು ಎಲ್ಲಾ ಆಯಾಮಗಳಲ್ಲಿಯೂ ಪೂರ್ಣಗೊಳಿಸಿರುವ ಪೊಲೀಸ್ ಅಧಿಕಾರಿಗಳು, ಒಟ್ಟು 231 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ಈ ವಿಚಾರ ತಿಳಿದ ನಟ ದರ್ಶನ್ ಚಿಂತೆಗೀಡಾಗಿದ್ದರು. ಇದರ ಬೆನ್ನಲ್ಲೇ ಅವರ ​ಆರೋಗ್ಯ ಪರಿಸ್ಥಿತಿ ಹೇಗಿದೆ ಎಂದು ವೈದ್ಯರು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:‘ಡಿ ಗ್ಯಾಂಗ್’​ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆ: ರಕ್ತದ ಕಲೆ, 200ಕ್ಕೂ ಹೆಚ್ಚು ಸಾಕ್ಷ್ಯ! ಸ್ಫೋಟಕ ಸಂಗತಿ ಬಯಲು
ಇಂದು ಜಾರ್ಜ್ ಶೀಟ್ ಸಲ್ಲಿಕೆ ವಿಚಾರ ತಿಳಿದು ಟೆನ್ಷನ್ ಆಗಿದ್ದ ನಟ ದರ್ಶನ ಆರೋಗ್ಯ ಪರಿಶೀಲನೆ ನಡೆಸಿದ ವೈದ್ಯರು, ಆರೋಪಿಯ ಆರೋಗ್ಯ ಸದ್ಯ ಸಹಜ ಸ್ಥಿತಿಯಲ್ಲಿದೆ. ಬಿಪಿ, ಶುಗರ್ ನಾರ್ಮಲ್​ ಆಗಿದೆ ಎಂದು ಹೇಳಿದ್ದಾರೆ. ಪ್ರತಿವಾರವು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಖೈದಿಗಳ ಆರೋಗ್ಯ ಪರಿಶೀಲಿಸಲು ಜೈಲಿಗೆ ಆಗಮಿಸುವ ವೈದ್ಯರು ಒಟ್ಟು 385 ಖೈದಿಗಳ ಆರೋಗ್ಯ ತಪಾಸಣೆ ನಡೆಸುತ್ತಾರೆ.
ವಿಶೇಷವಾಗಿ ದರ್ಶನ್ ಆರೋಗ್ಯ ಚೆಕ್ ಮಾಡಿದ ವೈದ್ಯರು, ನಟನ ಆರೋಗ್ಯವು ಸ್ಟೇಬಲ್ ಎಂದು ತಿಳಿಸಿದ್ದಾರೆ. ಚಾಜ್೯ ಶೀಟ್ ಸಲ್ಲಿಕೆ ಮತ್ತು ಸಾಕ್ಷಿ ಸಂಗ್ರಹದ ಬಗ್ಗೆ ಮಾಹಿತಿ ಪಡೆದ ಹಿನ್ನಲೆ ದರ್ಶನ್ ಮುಖದಲ್ಲಿ ಆತಂಕ ಮೂಡಿತ್ತು ಎನ್ನಲಾಗಿದೆ. ಬೆಳಗ್ಗೆ ತಿಂಡಿ ಮಾಡಿದ್ದು ಬಿಟ್ಟರೆ ಮಧ್ಯಾಹ್ನದ ಊಟ ಸೇವಿಸಿಲ್ಲ. ಸದ್ಯದ ವರದಿಯ ಪ್ರಕಾರ, ಊಟವನ್ನು ದರ್ಶನ್ ಕೊಠಡಿಯಲ್ಲಿ ಇರಿಸಲಾಗಿದ್ದೇ ಆದರೂ ಅವರು ಇನ್ನೂ ಊಟ ಮಾಡಿಲ್ಲ ಎಂದು ತಿಳಿಸಲಾಗಿದೆ.
‘ಡಿ ಗ್ಯಾಂಗ್’​ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆ: ರಕ್ತದ ಕಲೆ, 200ಕ್ಕೂ ಹೆಚ್ಚು ಸಾಕ್ಷ್ಯ! ಸ್ಫೋಟಕ ಸಂಗತಿ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + nineteen =
Remember me
