ಭೇರ್ಯ:ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರಕ್ಕೆಂದು ನಟ ದರ್ಶನ್​ ಬಂದಿದ್ದ ವೇಳೆ ಗ್ರಾಮದ ನಡುರಸ್ತೆಯಲ್ಲಿ ನಿಂತು ಯಾರಿಗೂ ಮುಂದೋಗದಂತೆ ಬೆದರಿಸಿದ್ದ ಬಸವ, ದರ್ಶನ್ ಬಂದು ಮೈ ಸವರಿದ ಕೂಡಲೇ ದಾರಿ ಬಿಟ್ಟಿತ್ತು. ಈಗ ಮುಂಗಾಲು ಪೆಟ್ಟಾಗಿ ಹುಲ್ಲು ತಿನ್ನದೆ, ನೀರು ಕುಡಿಯದೆ ಕಾಳಮ್ಮನಕೊಪ್ಪಲು ಗ್ರಾಮದ ದೇವಸ್ಥಾನದ ಆವರಣದಲ್ಲಿ ಮಲಗಿರುವ ಆ ಬಸವನ ಚಿಕಿತ್ಸೆಗೆ ದರ್ಶನ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿರಿಕಣ್ಣೀರಿಟ್ಟ ವಿರಾಟ್​ ಕೊಹ್ಲಿ, ಅಂತಹದ್ದೇನಾಯ್ತು?
ದರ್ಶನ್​ ಸೂಚನೆಯಂತೆ ಬುಧವಾರ ಮೈಸೂರಿನಿಂದ ಕಾಳಮ್ಮನಕೊಪ್ಪಲು ಗ್ರಾಮಕ್ಕೆ ಬಂದ ಅವರ ಸ್ನೇಹಿತರು ಮತ್ತು ವೈದ್ಯರು ಸ್ಥಳೀಯ ವೈದ್ಯರಿಂದ ಬಸವನ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಚಿಕಿತ್ಸೆ ನೀಡಿ ಉಪಚರಿಸಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ದರ್ಶನ್ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮನ್ನು ಕಳುಹಿಸಿದ್ದಾರೆ. ಚಿಕಿತ್ಸೆಗೆ ಎಷ್ಟು ಖರ್ಚಾದರೂ ಪರವಾಗಿಲ್ಲ. ಬಸವ ಗುಣಮುಖವಾಗಬೇಕು ಎಂಬುದು ದರ್ಶನ್​ ಆಸೆ ಎಂದು ಅವರ ಸ್ನೇಹಿತರು ಮಾಹಿತಿ ನೀಡಿದರು.
ಕಳೆದ ವಾರವಷ್ಟೆ ಬಸವನ ಆನಾರೋಗ್ಯದ ಕುರಿತು ‘ವಿಜಯವಾಣಿ’ ಮತ್ತು ‘ದಿಗ್ವಿಜಯ ನ್ಯೂಸ್’ ಸುದ್ದಿ ಪ್ರಸಾರ ಮಾಡಿ ಗಮನ ಸೆಳೆದಿತ್ತು. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಪರವಾಗಿ ಈ ಗ್ರಾಮಕ್ಕೆ ದರ್ಶನ್ ಪ್ರಚಾರಕ್ಕೆಂದು ಬಂದಿದ್ದಾಗ ಜನರು ತಮ್ಮ ನೆಚ್ಚಿನ ನಟನನ್ನು ನೋಡಲು ಕಿಕ್ಕಿರಿದು ತುಂಬಿದ್ದರು. ಈ ವೇಳೆ ಬಸವ ಗ್ರಾಮದ ನಡು ರಸ್ತೆಯಲ್ಲಿ ನಿಂತು ಬೆದರಿಸಿತ್ತು. ಆ ವೇಳೆ ಪ್ರಚಾರ ವಾಹನದಿಂದ ಕೆಳಗಿದ ದರ್ಶನ್ ಬಸವನ ಮೈ ಸವರಿದ್ದರು. ಕೂಡಲೇ ಬಸವ ಏನೂ ಮಾಡದೆ ದಾರಿ ಬಿಟ್ಟಿತ್ತು.
ಇದನ್ನೂ ಓದಿರಿರೌಡಿಶೀಟರ್ ಜತೆ ಜಬರ್ದಸ್ತ್ ಎಣ್ಣೆ ಪಾರ್ಟಿ ಮಾಡಿದ ಸಬ್ ಇನ್ಸ್‌ಪೆಕ್ಟರ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − five =
Remember me
