ಬೆಂಗಳೂರು:ಧೋತಿ, ಶರ್ಟ್ ಮತ್ತು ನಡುವಂಗಿ ಸೇರಿ ಮತ್ತಿತರರ ಜವಳಿ ಉತ್ಪನ್ನಗಳನ್ನು ತಯಾರಿಸುವ ಮುಂಚೂಣಿಯ ರಾಮರಾಜ್ ಕಾಟನ್ ಕಂಪನಿಗೆ ಚಿತ್ರನಟ ದರ್ಶನ್ ರಾಯಭಾರಿಯಾಗಿ ಕಾಣಿಸಲಿದ್ದಾರೆ. ಇದರಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಈಗಾಗಲೇ ಮಾರುಕಟ್ಟೆ ವಿಸ್ತರಿಸಿಕೊಂಡಿರುವ ಕಂಪನಿ ಕರ್ನಾಟಕದಲ್ಲೂ ವಹಿವಾಟು ಎತ್ತರಿಸಲು ಸಹಾಯವಾಗಲಿದೆ.
2,500ಕ್ಕೂ ಹೆಚ್ಚು ಧೋತಿ ಸೇರಿ ರೇಷ್ಮೆ, ಲಿನಿನ್, ಸ್ಟೈನ್ ಗಾರ್ಡ್ ಮತ್ತು ಸುಗಂಧಿತ ಧೋತಿಗಳನ್ನು ಕಂಪನಿ ತಯಾರಿಸುತ್ತಿದೆ. ಮಕ್ಕಳಿಗಾಗಿ ಲಿಟ್ಲ್​ಸ್ಟಾರ್ ಧೋತಿಸ್ ಹಾಗೂ ಯುವಕರಿಗಾಗಿ ವೆಲ್​ಕ್ರೋ ಪಾಕೆಟ್ ಧೋತಿ ಉತ್ಪನ್ನಗಳು ಹೆಚ್ಚು ಸೆಳೆಯುತ್ತಿವೆ.
1983ರಲ್ಲಿ ಉದ್ಯಮಿ ಕೆ.ಆರ್.ನಾಗರಾಜನ್ ಸಂಸ್ಥೆಯನ್ನು ಆರಂಭಿಸಿದ್ದು, ಅಲ್ಪ ಕಾಲದಲ್ಲೇ ಹೆಚ್ಚು ಯಶಸ್ವಿ ಪಡೆದಿದೆ. ಬಿಳಿ ಕಾಟನ್ ಶರ್ಟ್ ಮತ್ತು ಧೋತಿಗಳು ದಕ್ಷಿಣ ಭಾರತದ ಪ್ರಮುಖ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ರಾಜಕಾರಣಿ ಮತ್ತು ಕೈಗಾರಿಕೋದ್ಯಮಿಗಳು ಧರಿಸುವ ಕಾಟನ್ ಶರ್ಟ್ ಮತ್ತು ಧೋತಿಗಳು ಹೆಮ್ಮೆಯ ಬ್ರಾ್ಯಂಡ್ ಆಗಿ ಹೊರಹೊಮ್ಮಿದೆ.
2016ರಲ್ಲಿ ಧೋತಿ ವೀಕ್ ಅಭಿಯಾನ ಆರಂಭಿಸಿದ ಕಂಪನಿ, ಪ್ರತಿವಾರ ಕೂಡ ಧೋತಿ ವೀಕ್ ಆಚರಿಸಲು ನಿರ್ಧರಿಸಿದೆ. ಸಂಪ್ರದಾಯಕ್ಕಿಂತ ಹೆಚ್ಚಾಗಿ ಟ್ರೆಂಡ್​ಗಾಗಿ ಧೋತಿ ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಸಂಸ್ಥಾಪಕ ನಾಗರಾಜನ್ ಇಂತಹ ಯೋಜನೆಗಳನ್ನು ಆರಂಭಿಸಿರುವುದರಿಂದ ನೇಕಾರರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದ್ದಾರೆ. ಆಂದಾಜು 50 ಸಾವಿರ ನೇಕಾರರ ಕುಟುಂಬಗಳನ್ನು ಬೆಂಬಲಿಸುತ್ತಿವೆ. 3 ವರ್ಷಗಳ ಹಿಂದೆ ಆನ್​ಲೈನ್ ವ್ಯವಹಾರ ಆರಂಭಿಸಿರುವ ಕಂಪನಿ ಯುಎಸ್, ಯುಕೆ, ಆಸ್ಟ್ರೇಲಿಯಾ, ಕೆನಡಾ ಮತ್ತಿತರರ ದೇಶಗಳಿಗೆ ಪೂರೈಕೆ ಮಾಡುತ್ತಿದೆ. ತಿರುಪೂರ್​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿ ಈರೋಡ್, ಮಧುರೈ, ತಿರುಪೂರ್​ಗಳಲ್ಲಿ ಉತ್ಪಾದನಾ ಕೇಂದ್ರಗಳಿವೆ. 147 ಎಂಒಪಿಎಸ್ ಜಾವವನ್ನು (105 ಕಂಪನಿ ಒಡೆತನದ ಮಳಿಗೆಗಳು) ಸ್ಥಾಪಿಸಿರುವ ಕಂಪನಿ ದೇಶಾದ್ಯಂತ 15 ಸಾವಿರ ಚಿಲ್ಲರೆ ಮಳಿಗೆಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಮಲೇಷ್ಯಾ ಮತ್ತು ಶ್ರೀಲಂಕಾದಲ್ಲಿ ಸಾಗರೋತ್ತರ ಉಪಸ್ಥಿತಿ ಹೊಂದಿದ್ದು, ಅಲ್ಲಿನ ಮಾರುಕಟ್ಟೆಗಳಲ್ಲಿ ಪ್ರವೇಶ ಮಾಡಲು ಅಧ್ಯಯನ ನಡೆಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fifteen =
Remember me
