ಬೆಂಗಳೂರು:ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ತಿಗೊಳಿಸಿರುವ ಪೊಲೀಸರು ಸೆಪ್ಟೆಂಬರ್​ 4ರಂದು ನ್ಯಾಯಾಲಯ್ಕಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ದರ್ಶನ್​​ ಆ್ಯಂಡ್​ ಟೀಂ ಜೈಲುಪಾಲಾಗಿ ಮೂರು ತಿಂಗಳು ಕಳೆದಿವೆ.
ಇದನ್ನು ಓದಿ:ಟ್ರೈನಿ ವೈದ್ಯೆ ಹತ್ಯೆ ಕೇಸ್; ಮರಣೋತ್ತರ ಪರೀಕ್ಷೆ ದಾಖಲೆ ಮಿಸ್ಸಿಂಗ್​​.. ಸಿಬಿಐಗೆ ಸುಪ್ರೀಂ ಸೂಚಿಸಿದ್ದೇನು ಗೊತ್ತಾ?
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್‌ಶೀಟ್‌ ಅನ್ನು ಸಲ್ಲಿಸಿದ್ದರೆ. ಜೂನ್​ 8ರಂದು ಏನೆಲ್ಲಾ ನಡೆಯಿತು ಎಂದು ಪೊಲೀಸರು ಬಳಿ ಸ್ವತಃ ದರ್ಶನ್​​ ಬಾಯಿಬಿಟ್ಟಿರುವ ಸತ್ಯಗಳನ್ನು ಚಾರ್ಜ್​ಶೀಟ್​ನಲ್ಲಿ ನೋಡಬಹುದಾಗಿದೆ. ಚಾರ್ಜ್​​​ಶೀಟ್​​ ಪ್ರತಿ ಸಿಕ್ಕಿದು ದರ್ಶನ್​ ಸ್ವಇಚ್ಛೆಯಿಂದ ನೀಡಿರುವ ಹೇಳಿಕೆಯಲ್ಲಿ ಏನಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಜೂನ್ 8ರ ಬೆಳಗ್ಗೆ ಕತ್ರಿಗುಪ್ಪೆ ಫ್ಲ್ಯಾಟ್​ನಿಂದ ಮನೆಗೆ ಬಂದಿದ್ದೆ. ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್​ಗೆ ಚಿಕ್ಕಣ್ಣ ಬಂದಿದ್ದ. ಚಿಕ್ಕಣ್ಣ ಸಹ ಚಿತ್ರನಟನಾಗಿದ್ದು ಆಗಾಗ ನನ್ನನ್ನು ಭೇಟಿಯಾಗುತ್ತಿದ್ದ. ಮಧ್ಯಾಹ್ನ 3.30ರ ಸುಮಾರಿಗೆ ಪ್ರದೋಶ್ ನಮ್ಮ ಮನೆಗೆ ಬಂದಿದ್ದ. ನಂತರ ಸ್ಟೋನಿಬ್ರೂಕ್ಸ್​ನ ರೆಸ್ಟೋರೆಂಟ್​ಗೆ ಮೂವರು ಹೋಗಿದ್ದೆವು. ಸ್ಟೋನಿಬ್ರೂಕ್ಸ್ ರೆಸ್ಟೋರೆಂಟ್​ಗೆ ಚಿತ್ರ ನಟ ಚಿಕ್ಕಣ್ಣ ಸಹ ಬಂದಿದ್ದರು. ಅಲ್ಲೇ ಮಧ್ಯಾಹ್ನ ಊಟ ಮುಗಿಸಿ ಟೇಬಲ್​ನಲ್ಲಿ ಕುಳಿತು ಚರ್ಚೆ ಮಾಡಿದೆವು. ಅಲ್ಲಿಗೆ ಪವನ್ ಬಂದಿದ್ದ, ತನ್ನ ಮೊಬೈಲ್​ನಲ್ಲಿ ಫೋಟೋ ತೋರಿಸಿದ್ದ. ಗೌತಮ್ ಹೆಸರಿನ ಇನ್​ಸ್ಟಾಗ್ರಾಮ್​​​​ ಖಾತೆಯಿಂದ ಮೆಸೇಜ್​​​​​ ಬರುತ್ತಿದೆ. ಪವಿತ್ರಾ ಅಕ್ಕನಿಗೆ ದಿನ ಖಾಸಗಿ ಅಂಗಾಂಗ ಫೋಟೋ ಕಳಿಸುತ್ತಿದ್ದಲ್ಲದೇ, ನಿನ್ನ ರೇಟ್ ಎಷ್ಟು, ನಾನೇ ರೂಮ್ ಮಾಡುವೆ ಬಾ, ನಾನು ದರ್ಶನ್​ಗಿಂತ ಚೆನ್ನಾಗಿದ್ದೇನೆಂದು ಮೆಸೇಜ್ ಮಾಡುತ್ತಿದ್ದ ಎಂಬ ಮಾಹಿತಿ ನೀಡಿದ.
ಈ ಮೆಸೇಜ್​ ಮಾಡಿತ್ತಿದ್ದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿದ್ದರು. ರಾಘವೇಂದ್ರ ಮತ್ತು ಆತನ ಸ್ನೇಹಿತರು ರೇಣುಕಾಸ್ವಾಮಿಯನ್ನು ಅಪಹರಿಸಿ ತಂದು ಶೆಡ್​ನಲ್ಲಿ ಇರಿಸಿರುವುದಾಗಿ ಮಾಹಿತಿ ಬಂತು. ಸ್ಟೋನಿ ಬ್ರೂಕ್ಸ್​ನಿಂದಲೇ ಪವಿತ್ರಾಗೆ ಊಟ ಕಳುಹಿಸಿರುತ್ತೇನೆ. ಪವಿತ್ರಾಗೌಡ ಊಟ ಮಾಡುತ್ತಿದ್ದ ವೇಳೆ ವಿಡಿಯೋ ಕಾಲ್ ಮಾಡಿದ್ದೆ. ಊಟದ ನಂತರ ಶೆಡ್​ಗೆ ಹೋಗೋಣ ಎಂದು ಪವಿತ್ರಾ ಗೌಡಗೆ ಹೇಳಿದ್ದೆ. ನಿನಗೆ ಮೆಸೇಜ್​ ಮಾಡುತ್ತಿದ್ದವನನ್ನು ವಿಚಾರಿಸಿಕೊಂಡು ಬರೋಣ ಎಂದು ಪವಿತ್ರಾಗೌಡಗೆ ತಿಳಿಸಿದ್ದೆ. ನನ್ನ ಜತೆಗಿದ್ದ ಚಿಕ್ಕಣ್ಣ ಮತ್ತಿತರರನ್ನು ಮನೆಗೆ ಹೋಗಿ ಎಂದು ಹೇಳಿದ್ದೆ. ನಾನು, ವಿನಯ್, ಪ್ರದೋಶ್​ ಜತೆಗೆ ಸ್ಕಾರ್ಪಿಯೊ ಕಾರಿನಲ್ಲಿ ಪವಿತ್ರಾ ಮನೆ ಬಳಿಗೆ ಹೋಗಿ, ಅವಳನ್ನು ಕರೆದುಕೊಂಡು ಒಟ್ಟಿಗೆ ಕಾರಿನಲ್ಲಿ ಹೊರಟೆವು. ಸಂಜೆ 4.30ರ ಸುಮಾರಿಗೆ ನಾವು ವಿನಯ್​ಗೆ ಸೇರಿದ ಶೆಡ್​ ತಲುಪಿದೆವು. ವಾಹನದಿಂದ ಇಳಿದು ನೋಡಿದಾಗ ವಾಹನಕ್ಕೆ ಒರಗಿ ಓರ್ವ ಕೂತಿದ್ದ. ಆತನನ್ನು ತೋರಿಸಿದ ಪವನ್ ಇವನೇ ಮೆಸೇಜ್ ಮಾಡುತ್ತಿದ್ದವನು. ಪವಿತ್ರಾ ಅಕ್ಕನಿಗೆ ಖಾಸಗಿ ಅಂಗಾಂಗ ಫೋಟೋ ಕಳುಹಿಸುತ್ತಿದ್ದ ಎಂದಿದ್ದ.
ರಾಘವೇಂದ್ರ, ದೀಪಕ್, ನಂದೀಶ್ ಕೂಡ ಪಟ್ಟಣಗೆರೆ ಶೆಡ್​ನಲ್ಲೇ ಇದ್ದರು. ತೀವ್ರ ಆಯಾಸಗೊಂಡಿದ್ದ ವ್ಯಕ್ತಿ ಬ್ಲೂಜೀನ್ಸ್ ಪ್ಯಾಂಟ್, ಶರ್ಟ್ ಧರಿಸಿದ್ದ. ನಾನು ಅಲ್ಲಿಗೆ ಹೋಗುವ ಮೊದಲೇ ಹೊಡೆದಿರುವಂತೆ ಕಂಡು ಬಂತು. ಆತನ ಬಳಿಗೆ ಹೋಗಿ ನೀನೇನಾ ಈ ರೀತಿ ಮೆಸೇಜ್ ಮಾಡಿದ್ದು ಎಂದು ಕೇಳಿದೆ, ಹೌದು ನಾನೇ ಮೆಸೇಜ್​​ ಕಳುಹಿಸಿದ್ದು ಎಂದು ಆತ ಒಪ್ಪಿಕೊಂಡಿದ್ದ. ನಿನಗೆ ಎಷ್ಟು ಸಂಬಳ ಎಂದಾಗ 20 ಸಾವಿರ ರೂಪಾಯಿ ಬರುತ್ತೆ ಎಂದು ಹೇಳಿದ. ಅದಕ್ಕೆ ನಾನು 20 ಸಾವಿರ ರೂಪಾಯಿ ಸಂಬಳದಲ್ಲಿ ಇವಳನ್ನು ಮೇಂಟೇನ್ ಮಾಡಲಾಗುತ್ತಾ? ನನ್ ಮಗನೇ.. ನೀನು ಇವಳನ್ನು ಮೇಂಟೇನ್ ಮಾಡೋಕಾಗುತ್ತಾ.. ಕೆಟ್ಟದಾಗಿ ಮೆಸೇಜ್​​​ ಮಾಡಿದ್ಯಲ್ಲ ಎಂದು ಪ್ರಶ್ನಿಸಿದಾಗ ಮಾತನಾಡಲಿಲ್ಲ ಎಂದು ಹೇಳಿಕೆಯಲ್ಲಿ ದರ್ಶನ್​ ವಿವರಿಸಿದ್ದಾರೆ.
ಜೈಲುಪಾಲಾಗಿರುವ ದರ್ಶನ್ ಆಂಡ್ ಗ್ಯಾಂಗ್​ನ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆಯಾಗಿದೆ. ಎಲ್ಲ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12 ರವರೆಗೆ 3 ದಿನಗಳ ಕಾಲ ವಿಸ್ತರಣೆ ಮಾಡಿ ಬೆಂಗಳೂರಿನ 24ನೇ ಎಸಿಎಂಎ ನ್ಯಾಯಾಲಯವು ಆದೇಶ ಹೊರಡಿಸಿದೆ.
ಬಜರಂಗ್ ಪುನಿಯಾಗೆ ಕೊಲೆ ಬೆದರಿಕೆ; ಸಂದೇಶದಲ್ಲಿ ಉಲ್ಲೇಖಿಸಿರುವ ವಿಚಾರ ಹೀಗಿದೆ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 + thirteen =
Remember me
