ಮೈಸೂರು:ತಮ್ಮ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಯಾರಾದರು ಉತ್ತಮ ಹೆಸರನ್ನು ಗಳಿಸಿದ್ದರೆ ಸಾಕು ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ಅದರಲ್ಲೂ ರಾಜಕೀಯದಲ್ಲಿ, ಸರ್ಕಾರಿ ಉದ್ಯೋಗಗಳಲ್ಲಿನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇನ್ನೂ ಸಿನಿಮಾ ನಟರ ಹೆಸರಂತೂ ಸಾಕಷ್ಟು ದುರಪಯೋಯವಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗಷ್ಟೇ ನಡೆದ ಪ್ರಕರಣ. ಮೃತ ಅರ್ಜುನ ಆನೆಯ ಸ್ಮಾರಕ ನಿರ್ಮಾಣಕ್ಕೆ ನಟ ದರ್ಶನ್ ಹೆಸರಲ್ಲಿ ಖದೀಮನೊಬ್ಬ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದ. ಇದು ಭಾರಿ ಚರ್ಚೆಗೀಡಾಗಿತ್ತು.
ಈ ರೀತಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ನಡುವೆ ಕೆಲವರು ಸ್ವಾಭಿಮಾನದಿಂದ ಬದುಕು ನಡೆಸುವವರು ಕೂಡ ಇದಾರೆ. ತಮ್ಮ ಸ್ವಂತದವರು ಎಷ್ಟೇ ಪ್ರಭಾವಿಯಾಗಿರಲಿ ಅಥವಾ ಪ್ರಖ್ಯಾತಿ ಆಗಿರಲಿ ಈ ಬಗ್ಗೆ ಎಲ್ಲಿಯೂ ಜಂಭ ಕೊಚ್ಚಿಕೊಳ್ಳದೆ, ತಾವಾಯ್ತು ತಮ್ಮ ಜೀವನ ಆಯ್ತು ಅಂತ ಬದುಕುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಅಕ್ಕ.
ಹೌದು, ದರ್ಶನ್​ ಅವರು ಕನ್ನಡ ಚಿತ್ರರಂಗದ ಸ್ಟಾರ್​ ನಟ. ಆದರೆ, ಎಲ್ಲಿಯೂ ದರ್ಶನ್​ ಹೆಸರೇಳದೆ ಅವರ ಅಕ್ಕ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಅವರ ಹೆಸರು ಸರಳ. ಅವರಿಗೆ 63 ವರ್ಷ. ಕಳೆದ ಏಳು ವರ್ಷದಿಂದ ಮನೆಯಲ್ಲೇ ಅಡುಗೆ ತಯಾರಿಸಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಯಾರಾದ್ರೂ ಟ್ರಿಪ್​ ಹೋಗ್ತಿದ್ರೆ ಅಥವಾ ಮನೆಯಲ್ಲಿ ಮಾಡಿದ ಅಡುಗೆ ಬೇಕು ಅನಿಸಿದರೆ, ಇವರಿಗೆ ಮುಂಚಿತವಾಗಿ ಹೇಳಿದರೆ ಸಾಕು ರುಚಿ ರುಚಿಯಾದ ಅಡುಗೆ ಮಾಡಿಕೊಡುತ್ತಾರೆ.
ಅಂದಹಾಗೆ ಸರಳ ಅವರು ದರ್ಶನ್​ ಅವರ ದೊಡ್ಡಪ್ಪನ ಮಗಳು. ನಮ್ಮ ವಂಶ ಸ್ವಾಭಿಮಾನವಾಗಿ ಬದುಕಬೇಕು ಎಂಬುದೇ ದರ್ಶನ್​ ಆಸೆ. ನಾವು ಆತನನ್ನೇ ಫಾಲೋ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ದೊಡ್ಡಪ್ಪನ ಮಕ್ಕಳು ಅಂತ ಭೇದ-ಭಾವ ಮಾಡಲ್ಲ. ಸ್ವಂತ ಅಕ್ಕ-ತಂಗಿಯರ ರೀತಿ ಎಲ್ಲರನ್ನು ವಿಶ್ವಾಸದಿಂದ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಎಂದು ಸರಳ ಅವರು ದರ್ಶನ್​ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಇನ್ನು ಸರಳ ಅವರು ಮೈಸೂರಿನ ಯಾದವಗಿರಿಯಲ್ಲಿ ನೆಲೆಸಿದ್ದಾರೆ. ಇವರ ಅಡುಗೆ ಕೈರುಚಿ ಸವಿಯಲು ಸಾಕಷ್ಟು ಮಂದಿ ದಿನನಿತ್ಯ ಅವರ ಮನೆಗೆ ಹೋಗುತ್ತಿರುತ್ತಾರೆ.
A post shared by Moody Foodie karnataka (@moody_foodie_karnataka)

ಆನೆ ಅರ್ಜುನ್ ಸ್ಮಾರಕ ನೆಪದಲ್ಲಿ ದರ್ಶನ್​ ಹೆಸರು ದುರ್ಬಳಕೆಅರ್ಜುನನ ಸ್ಮಾರಕ ನಿರ್ಮಾಣ ಮಾಡೋದಕ್ಕೆಂದು ನಟ ದರ್ಶನ್ ಹೆಸರೇಳಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಆಗ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಮೈಸೂರು ಜಿಲ್ಲೆಯ ನವೀನ್ ಎಚ್‌.ಎನ್. ಎಂಬಾತ ಅರ್ಜುನ ಪಡೆ ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹಲವರು ಹಣ ಸಹಾಯ ಮಾಡಿದ್ದಾರೆ. ಇದರಿಂದ ನವೀನ್​ ಎಚ್​.​​ಎನ್.​​ ಖಾತೆಗೆ ಲಕ್ಷಾಂತರ ಹಣ ಜಮೆ ಆಗಿದೆ ಎಂದು ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಆರೋಪ ಮಾಡಿದ್ದಾರೆ. ಈತ ಹಣ ಸಂಗ್ರಹಿಸಿದ ಬಗ್ಗೆ ದೂರು ದಾಖಲಾಗಿದೆ. ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಸಹಾಯ ಮಾಡುವಂತೆ ನವೀನ್​ ನಟ ದರ್ಶನ್ ಅವರ ಪಿಎಯನ್ನೂ ಸಂಪರ್ಕ ಮಾಡಿದ್ದಾನೆ. ಅವರಿಂದ ಕಲ್ಲುಗಳನ್ನು ತೆರೆಸಿಕೊಂಡಿದ್ದಾನೆ. ಆ ಕಲ್ಲುಗಳನ್ನು ಅರಣ್ಯ ಇಲಾಖೆಯವರಿಗೆ 30 ಸಾವಿರ ರೂ.ಗೆ ಮಾರಿದ್ದಾನೆ ಅಂತ ಆರೋಪ ಕೇಳಿಬಂದಿದೆ. ಕೆಲವು ನವೀನ್ ಅಕೌಂಟ್‌ಗೆ ಹಣ ಹಾಕಿರುವುದಾಗಿ ಪೋನ್ ಪೇ, ಗೂಗಲ್ ಪೇ ಸ್ಕ್ರೀನ್‌ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಆತನಿಗೆ ಅನುಮತಿ ಕೊಟ್ಟಿದ್ದು ಯಾರು? ಎನ್ನುವ ಪ್ರಶ್ನೆ ಮೂಡಿದೆ.
ನೀವು ಸಿಂಗಲ್​ ಆಗಿದ್ರೆ ನನ್ನನ್ನು ಬಾಡಿಗೆ ಪಡೆಯಿರಿ ಎಂದ ಯುವತಿ! ಒಂದು ದಿನಕ್ಕೆ ಇಷ್ಟು ಹಣ ಕೊಡಬೇಕಂತೆ…

ಅರ್ಜುನ ಆನೆಯ ಸ್ಮಾರಕ ನಿರ್ಮಾಣಕ್ಕೆ ದರ್ಶನ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ ಖದೀಮ

ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಾಟ: ಗಗನಸಖಿ ಬಂಧನ! ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ ಬಯಲು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six − one =
Remember me
