ಗುಂಡ್ಲುಪೇಟೆ:ಬಜಾರ್ ಚಿತ್ರದ ನಾಯಕ ಧನ್ವೀರ್ ಅರಣ್ಯದಲ್ಲಿ ರಾತ್ರಿವೇಳೆ ಸಫಾರಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿನಿಮಾ ನಟರಿಗೊಂದು-ಜನ ಸಾಮಾನ್ಯರಿಗೊಂದು ರೂಲ್ಸ್​ ಇದೆಯಾ? ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.
ರಾತ್ರಿ ಸಫಾರಿಗೆ ಅವಕಾಶ ಇಲ್ಲ. ಆದರೂ ಆ ವೇಳೆ ಜೀಪ್ ನಲ್ಲಿ ಕಾಡು ಸುತ್ತಿರುವ ನಟ ಧನ್ವೀರ್ ಹುಲಿ ಕಂಡು ಸಂಭ್ರಮಿಸಿರುವುದು ವಿಡಿಯೋದಲ್ಲಿದೆ. ಈ ದೃಶ್ಯಾವಳಿಗಳು ವೈರಲ್ ಆಗುತ್ತಿದ್ದಂತೆ ಧನ್ವೀರ್ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟ ಸಫಾರಿ ನಡೆಸಿರುವ ಪ್ರದೇಶವನ್ನು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶವೆಂದು ಹೇಳಲಾಗುತ್ತಿದೆ‌.
ಅವಕಾಶ ಇಲ್ಲದಿದ್ದರೂ ರಾತ್ರಿ ಸಫಾರಿಯನ್ನು ನಟ ಹೇಗೆ ನಡೆಸಲು ಸಾಧ್ಯ? ನಟ ಸುತ್ತಾಡಿರುವ ಜೀಪ್ ಅರಣ್ಯ ಇಲಾಖೆಯದ್ದೇ ಇರಬಹುದು. ಜನರಿಗೆ ಸಫಾರಿಗೆ ಸಮಯ ನಿಗದಿ ಮಾಡಿ ಚಿತ್ರನಟನಿಗೆ ಇಷ್ಟ ಬಂದಾಗ ಸಫಾರಿ ಮಾಡಲು ಅವಕಾಶ ನೀಡುವುದು ಯಾವ ನ್ಯಾಯ? ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ‌.
ಈ ಬಗ್ಗೆ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಚಿತ್ರನಟ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ರಾತ್ರಿ ಸಫಾರಿ ನಡೆಸಿರುವುದು ನಿಜವಾದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಮತ್ತು ಪೊಲೀಸರಿಗೂ ದೂರು ನೀಡಲಾಗುವುದು ಎಂದು ಹೇಳಿದ್ದಾರೆ.
https://www.facebook.com/VVani4U/videos/383053866205615
ಪ್ರೇಮ ವಿವಾಹವಾಗಿದ್ದ ಮಗಳು 5 ವರ್ಷದ ಹಿಂದೆಯೇ ನಾಪತ್ತೆ! ಗಂಡನ ಮನೆಯಲ್ಲಿದೆ ನಿಗೂಢ ರಹಸ್ಯ?

https://www.vijayavani.net/diesel-tanker-accident/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
