ಬೆಂಗಳೂರು:ಹೆತ್ತ ತಾಯಿಯೇ ತನ್ನ ಮೂರುವರೆ ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿದ್ದಲ್ಲದೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಇದೀಗ ಆ ಕಂದಮ್ಮನಿಗೆ ನೆರವಾಗುವುದಾಗಿ ನಟ ಧ್ರುವ ಸರ್ಜಾ ಹೇಳಿದ್ದಾರೆ.
ಇದನ್ನೂ ಓದಿ:ಪಾಕ್​ ಕ್ರಿಕೆಟ್ ತಂಡಕ್ಕೆ ಸೇನೆಯಿಂದ ತರಬೇತಿ!: ಕಾರಣ ಹೀಗಿದೆ ನೋಡಿ..
ಸ್ಟಾಲಿನ್‌ ಎಂಬ ಪುಟ್ಟ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದ ಶಾರಿನ್‌ ತನ್ನ ಗೆಳೆಯನ ಜತೆ ಸೇರಿ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದಳು ಎಂಬ ಅಂಶ ಕಳೆದ ಫೆಬ್ರವರಿ 19ರಂದು ಮಹಿಳಾ ಸಂಘಟನೆಯವರ ಸಕಾಲಿಕ ಮಧ್ಯಪ್ರವೇಶದಿಂದ ಬೆಳಕಿಗೆ ಬಂದಿತ್ತು.
ರಾಜೇಶ್ವರಿ ಮತ್ತು ಇತರ ಸಹೃದಯಿ ಮಹಿಳೆಯರು ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಮಗುವೊಂದು ದಿಗ್ಬಂಧನದಲ್ಲಿದೆ ಎಂಬ ಸುದ್ದಿ ತಿಳಿದು ಭೇಟಿ ನೀಡಿದಾಗ ಕರುಣಾಜನಕ ಕಥೆ ಬೆಳಕಿಗೆ ಬಂದಿತ್ತು. ಹಲ್ಲೆಗೀಡಾದ ಮೂರುವರೆ ವರ್ಷದ ಸ್ಟಾಲಿನ್ ಎಂಬ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. ಸದ್ಯ ಸರ್ಕಾರಿ ಶಿಶುಮಂದಿರದಲ್ಲಿ ಪಾಲನೆ ಮಾಡಲಾಗುತ್ತಿದೆ. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮಗುವಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಸ್ವಂತ ಮಗುವಿನೊಂದಿಗೆ ಹೆತ್ತ ತಾಯಿಯ ವರ್ತನೆ ಬಗ್ಗೆ ಕೇಳಿ ನೋವು ಅಸಮಾಧಾನ ವ್ಯಕ್ತಪಡಿಸಿದ ನಟ ಧ್ರುವ ಆ ಮುಗ್ಧ ಕಂದಮ್ಮನಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ ಅವರು ಮಗುವಿಗೆ ಏನು ಅಗತ್ಯವಿದೆಯೋ ಅದನ್ನ ಮಾಡ್ತೀನಿ. ಸರ್ಕಾರಿ ಶಿಶುಮಂದಿರಲ್ಲಿರುವ ಮಗುವನ್ನು ನಾನೇ ಭೇಟಿ ನೀಡಿ ಮಗುವನ್ನು ನೋಡಬೇಕು ಎಂಬ ಆಸೆಯಿದೆ. ಆದರೆ ಈ ಘಟನೆಯನ್ನು ಪ್ರಚಾರ ಅಂದುಕೊಳ್ಳಬಾರದು. ಅದಕ್ಕಾಗಿ ಏನೇ ಸಹಾಯ ಬೇಕಿದ್ರೂ ಮಾಡ್ತೀನಿ ಆದರೆ ಎಲ್ಲೂ ಗೊತ್ತಾಗಬಾರದು ದಯವಿಟ್ಟು ಪ್ರಚಾರ ಮಾಡಬೇಡಿ ಅಂತ ಕೇಳಿಕೊಂಡಿದ್ದಾರೆ.
ಮಗು ಸ್ಟಾಲಿನ್ ಗೆ ತಾಯಿ ಶಾರಿನ್, ಪ್ರಿಯಕರನೊಂದಿಗೆ ಸೇರಿಕೊಂಡು ಮನಬಂದಂತೆ ದಿನನಿತ್ಯ ಹಲ್ಲೆ ನಡೆಸುತ್ತಿದ್ದಳು. ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ; ಬೀಗ ಹಾಕಿ ಹೋಗುತ್ತಿದ್ದಳು. ಈ ವಿಷಯ ತಿಳಿದು ನೆರೆಹೊರೆಯ ದೂರಿನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಗು ಸ್ಟಾಲಿನ್ ನನ್ನು ರಕ್ಷಿಸಿದ್ದರು.
ಈ ಘಟನೆ ಕುರಿತು ಗಿರಿನಗರ ಪೊಲೀಸರು ರಾಕ್ಷಸಿ ತಾಯಿ ಶಾರಿನ್‌ ಮತ್ತು ಆಕೆಯೊಂದಿಗೆ ಸೇರಿ ಮಗುವನ್ನು ಹಿಂಸಿಸಿದ ದುರುಳ ಬಾಯ್‌ಫ್ರೆಂಡ್‌ ದಿನೇಶ್‌ನನ್ನು ಬಂಧಿಸಿದ್ದಾರೆ.
ಪಾಕ್​ ಕ್ರಿಕೆಟ್ ತಂಡಕ್ಕೆ ಸೇನೆಯಿಂದ ತರಬೇತಿ!: ಕಾರಣ ಹೀಗಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + five =
Remember me
