ಬೆಂಗಳೂರು:ಸ್ಯಾಂಡಲ್​ವುಡ್​​ ನಟ ಧ್ರುವ ಸರ್ಜಾ, ಪ್ರೇರಣಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೇರಣಾ ಸೀಮಂತ ಶಾಸ್ತ್ರ ನಡೆದಿದ್ದು, ವಿಡಿಯೋ ವೈರಲ್​​ ಆಗಿದೆ.

ಧ್ರುವ ಸರ್ಜಾ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಇರುವ ಫಾರ್ಮ್‌ ಹೌಸ್‌ನಲ್ಲಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ.

‘ಐ ಲವ್ ಯು ಮೈ ವೈಫ್‌. ಈ ವರ್ಷ ಕೃಷ್ಣ ಜನ್ಮಾಷ್ಟಮಿ ನಮ್ಮ ಕೊಂಚ ಎಕ್ಸಟ್ರಾ ಸ್ಪೆಷಲ್ ಆಗಿತ್ತು. ಆಪ್ತರು ಈ ಕಾರ್ಯಕ್ರದಲ್ಲಿ ಭಾಗಿಯಾಗಿದ್ದರು’ ಎಂದು ಧ್ರುವ ಬರೆದುಕೊಂಡಿದ್ದಾರೆ. ಸೀಮಂತ ಕಾರ್ಯಕ್ರಮದ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
A post shared by Dhruva Sarja (@dhruva_sarjaa)
ಹಸಿರು ಮತ್ತು ನೇರಳೆ ಕಾಂಬಿನೇಷನ್ ಸೀರೆಯಲ್ಲಿ ಪ್ರೇರಣಾ ಮಿಂಚಿದ್ದರೆ, ಕ್ರೀಮ್ ಬಣ್ಣದ ಪಂಚೆ ಶೆಲ್ಯೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 2023ರಲ್ಲ ಪುಟ್ಟ ಕಂದಮ್ಮ ಬರ ಮಾಡಿಕೊಳ್ಳಲಿರುವ ದಂಪತಿ ಕೆಲವು ದಿನಗಳ ಹಿಂದೆ ತಾವು 2 ನೇ ಮಗುವಿನ ಪೋಷಕರಾಗುತ್ತಿರುವ ಕುರಿತಾಗಿ ಸುದ್ದಿ ಹಂಚಿಕೊಂಡಿದ್ದರು.
Success Story; ಉನ್ನತ​ ಹುದ್ದೆಯನ್ನು ತೊರೆದು ಯುಪಿಎಸ್​ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಬಾಡಿ ಬಿಲ್ಡರ್!

Sign in to your account
Please enter an answer in digits:4 × 3 =
Remember me
