ಬೆಂಗಳೂರು:ಮಾರ್ಟಿನ್ ಚಿತ್ರತಂಡ ಹಾಗೂ ನಟ ಧ್ರುವ ಸರ್ಜಾ ಶ್ರೀನಗರಕ್ಕೆ ತೆರಳುತ್ತಿದ್ದ ವಿಮಾನ ತಾಂತ್ರಿಕ ತೊಂದೆರೆ ಎದುರಿಸಿದ್ದು, ಸದ್ಯ ಅಪಾಯದಂಚಿನಿಂದ ಪಾರಾಗಿದೆ. ಕೂದಲೆಳೆ ಅಂತರದಲ್ಲಿ ಆ್ಯಕ್ಷನ್ ಪ್ರಿನ್ಸ್​ ಹಾಗೂ ಚಿತ್ರತಂಡ ಪಾರಾಗಿದ್ದಾರೆ.
ಇದನ್ನೂ ಓದಿ:ಪ್ರಭಾಸ್​ ಮುಂಬರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ನಟಿ! ಯಾರೀ ಬೆಡಗಿ?
ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಆದ ಪರಿಣಾಮ ಹೀಗಾಗಿದೆ. ತೊಡಕು ಉಂಟಾದ ಕೂಡಲೇ ಸಾವಿರಾರು ಅಡಿ ಕೆಳಗಿಳಿದು, ಪೈಲೆಟ್ ಕಂಟ್ರೋಲ್ ತಪ್ಪಿದೆ. ಕೂಡಲೇ ಎಚ್ಚೆತ್ತುಕೊಂಡ ಪೈಲೆಟ್​, ಕ್ರಾಶ್ ಆಗಬೇಕಿದ್ದ ವಿಮಾನವನ್ನು ಕಂಟ್ರೋಲ್​ ಪಡೆದು, ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಯಾವುದೇ ಅನಾಹುತ ಅಗದಂತೆ ಶ್ರೀನಗರದಲ್ಲಿ ಪೈಲೆಟ್​ ಪ್ಲೈಟ್​ಲ್ಯಾಂಡ್ ಮಾಡಿದ್ದಾರೆ. ಮಾರ್ಟಿನ್ ಚಿತ್ರದ ಸಾಂಗ್ ಶೂಟಿಂಗ್​ಗಾಗಿ ಕಾಶ್ಮೀರಕ್ಕೆ ಹೋಗಿರುವ ಚಿತ್ರತಂಡ ಇದೀಗ ಕೂದಲೆಳೆ ಅಂತರದಲ್ಲಿ ಪಾರಾಗಿರುವುದು ನಿಜಕ್ಕೂ ಅದೃಷ್ಟ ಎನ್ನಬಹುದು. ಸದ್ಯ ಸೇಫ್ ಆಗಿ ಚಿತ್ರತಂಡದ ಜತೆ ಶ್ರೀನಗರದಲ್ಲಿರುವ ಧ್ರುವ ಸರ್ಜಾ, ಈ ಕುರಿತಂತೆ ಅಭಿಮಾನಿಗಳಿಗೆ ಚಿಕ್ಕ ಅಪ್ಟೇಟ್​ ಕೂಡ ನೀಡಿದ್ದಾರೆ.
A post shared by Dhruva Sarja (@dhruva_sarjaa)

ಘಟನೆ ನೆನಪಿಸಿಕೊಂಡು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಧೃವ ಸರ್ಜಾ, ಚಿತ್ರತಂಡದೊಂದಿಗೆ ಇರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
