ಬೆಂಗಳೂರು:ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಹ್ಯಾಂಗ್​ಮನ್​ ಪವನ್ ಜಲ್ಲಾದ್​ಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ನಟ ಜಗ್ಗೇಶ್​ ಘೋಷಿಸಿದ್ದಾರೆ. ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದಾರೆ.
ನಿರ್ಭಯಾ ಅತ್ಯಾಚಾರ, ಹತ್ಯೆ ಅಪರಾಧಿಗಳನ್ನು ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸಲು ದೆಹಲಿ ಪಟಿಯಾಲಾ ನ್ಯಾಯಾಲಯ ಆದೇಶ ನೀಡಿದೆ. ಈ ಕೆಲಸವನ್ನು ಉತ್ತರ ಪ್ರದೇಶದ ಪೊಲೀಸರು ಪವನ್ ಜಲ್ಲಾದ್ ​(57)ಗೆ ಒಪ್ಪಿಸಿದ್ದಾರೆ.
ಪವನ್​ ಜಲ್ಲಾದ್​ ಕುಟುಂಬದವರು ಹಿಂದಿನಿಂದಲೂ ಹ್ಯಾಂಗ್​ಮನ್​ ಕೆಲಸವನ್ನೇ ಮಾಡುತ್ತ ಬಂದಿದ್ದಾರೆ. ಈಗ ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೆ ಹಾಕಲಿರುವ ಪವನ್​ ಜಲ್ಲಾದ್​, ನಾನು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧವಾಗಿದ್ದೇನೆ. ಇದು ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಕೊಟ್ಟ ಅವಕಾಶ ಎಂದು ಭಾವುಕರಾಗಿ ದೇವರಿಗೆ ನಮಿಸಿದ್ದರು.
ಈ ಬಗ್ಗೆ ನಿನ್ನೆ ವಿಜಯವಾಣಿ ವೆಬ್​ಸೈಟ್​ (Vijayavani.net) ಸುದ್ದಿ ಮಾಡಿತ್ತು. ಸುದ್ದಿಯ ಲಿಂಕ್​ನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ನಟ ಜಗ್ಗೇಶ್​ ಅವರು, ಮಾನ್ಯರೇ ರಾಕ್ಷಸ ಸಂಹಾರವೆಂಬುದು ದೇವರ ನಿಯಮ. ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದು ನೀವು ಹೇಳಿದ್ದು ಕೇಳಿ ಭಾವುಕನಾದೆ. ನೀವೇ ಆ ಪಾಪಿಗಳನ್ನು ನೇಣಿಗೇರಿಸಿದರೆ ನಾನು ನನ್ನ ಕಲೆಯಿಂದ ದುಡಿದ 1 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಆ ಹಣವನ್ನು ನಿಮಗಾಗಿ ಇಂದೇ ಮೀಸಲಿಟ್ಟಿದ್ದೇನೆ. ದುರುಳ ನಿಗ್ರಹವೂ ದೇವರ ಸೇವೆ…ಹರಿ ಓಂ ಎಂದು ಟ್ವೀಟ್​ ಮಾಡಿದ್ದಾರೆ.

ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧ: ಮಗಳ ಮದುವೆಗೆ ಹಣ ಹೊಂದಿಸಲು ದೇವರೇ ಕೊಟ್ಟ ಅವಕಾಶ ಎಂದ ಪವನ್ ಜಲ್ಲಾದ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 7 =
Remember me
