ತುಮಕೂರು:ಕಾಂಗ್ರೆಸ್ ಪಕ್ಷ ಬಂದರೆ ಯಾವ ಹಿಂದೂಗಳಿಗೂ ಉಳಿಗಾಲ ಇರುವುದಿಲ್ಲ. ನಮ್ಮ ಸಂಸ್ಕೃತಿ, ಆಚಾರಗಳಿಗೆ ಉಳಿಗಾಲ ಇರುವುದಿಲ್ಲ ಎಂದು ಕಾಂಗ್ರೆಸ್​​ ವಿರುದ್ಧವಾಗಿ ರಾಜ್ಯಸಭೆ ಸದಸ್ಯ ಜಗ್ಗೇಶ್ ವಾಗ್ದಾಳಿ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಪತರು ನಾಡಿನಲ್ಲಿ ಸಿಂಹ ಘರ್ಜನೆ ನಡೀತ್ತಿದೆ. ಚುನಾವಣೆ ಬಂದಾಗ ಜನರು ಬಹಳ ಪ್ರಜ್ಞೆವಂತಿಕೆ ಮೆರೆಯಬೇಕಾಗಿದೆ. ನಮ್ಮ ಹಿತರಕ್ಷಣೆ ಕಾಪಾಡೋರು ಯಾರು ಅಂತಾ ಯೋಚನೆ ಮಾಡಿ ಒಂದು ನಿರ್ಣಯ ಮಾಡಬೇಕು. ಆದರೆ ಚುನಾವಣೆ ಅಂದಾಗ ಬಹಳ ನಾಟಕಗಳು ನಡೀತ್ತಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಕ್ಕಳ ಪರೀಕ್ಷೆ ಬಗ್ಗೆ ಮೋದಿಗೆ ಕಾಳಜಿ, ಅವರ ಸೂಚನೆಯಂತೆ ರೋಡ್ ಶೋನಲ್ಲಿ‌ ಬದಲಾವಣೆ: ಶೋಭಾ ಕರಂದ್ಲಾಜೆ
ದೇಶದಲ್ಲಿ ನಾನೊಬ್ಬನೇ ಎಂದು ಕಾಂಗ್ರೆಸ್ ನಾಟಕ ಮಾಡುತ್ತಿದೆ. ಕರ್ನಾಟಕವನ್ನು ಗುಡಿಸಿ ಗುಂಡಾಂತರ ಮಾಡಿದವರು ಇವರಾಗಿದ್ದಾರೆ. ಮೋದಿಯವರು ಬಂದ ಮೇಲೆ ದೇಶದಲ್ಲಿ ಅದ್ಬುತವಾದ ಕೆಲಸಗಳು ನಡೆದಿವೆ. ಶತ್ರುಗಳಿಗೆ ಬುದ್ದಿ ಕಲಿಸೋದು, ರಾಷ್ಟ್ರದ ಒಳಗೆ ಒಳ್ಳೆಯ ಅಭಿವೃದ್ಧಿ ಮಾಡಿ, ಅವರದ್ದೇ ಆದ ಛಾಪು ಮೂಡಿಸಿ, ಅದ್ಭುತ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದು ನರೇಂದ್ರ ಮೋದಿ ಅವರ ನಾಯಕತ್ವ ಗುಣವನ್ನು ಹಾಡಿ ಹೊಗಳಿದ್ದಾರೆ.
ಕಾಂಗ್ರೆಸ್ ಪಕ್ಷ ಬಂದರೆ ಯಾವ ಹಿಂದೂಗಳಿಗೂ ಉಳಿಗಾಲ ಇರುವುದಿಲ್ಲ. ನಮ್ಮ ಸಂಸ್ಕೃತಿ, ಆಚಾರ ಉಳಿಗಾಲ ಇರುವುದಿಲ್ಲ. ಮೋದಿಯವರು ಮಾತನ್ನು ಮನಸ್ಸಲ್ಲಿ ಇಟ್ಟುಕೊಳ್ಳಿ. ನಿಮ್ಮ ಮತ ಶ್ರೇಷ್ಠ ಮತ, ಅದನ್ನು ಮಾರಾಟ ಮಾಡಬೇಡಿ ಎಂದು ಬಿಜೆಪಿಗೆ ತಮ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಎಸ್​ಎಸ್​​ಎಲ್​​ಸಿ ಫಲಿತಾಂಶ ಪ್ರಕಟಣಾ ದಿನಾಂಕ ನಿಗದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + seven =
Remember me
