ಬೆಂಗಳೂರು:ಹುಲಿಯುಗುರಿನ ಪೆಂಡೆಂಟ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್​ ಅದಾದ ಬಳಿಕ ಬಹಳ ಬೇಸರಗೊಂಡಿದ್ದು, ಇದೀಗ ತೀರಾ ಮನನೊಂದು ತಮ್ಮ ಮನದ ಭಾವನೆಯನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಯಾವುದೇ ವಿಚಾರವಾದರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಬಂದಿರುವ ಅವರು ಇದೀಗ ತೀರಾ ಬೇಸರಗೊಂಡಿದ್ದು, ಇನ್ನು ಮುಂದೆ ಯಾವ ವಿಚಾರವಾಗಿಯೂ ತಾವು ಮಾತನಾಡುವುದಿಲ್ಲ ಎಂಬಂಥ ನಿರ್ಧಾರಕ್ಕೆ ಬಂದಂತಿದೆ.
ತಮ್ಮ ತಾಯಿ ಉಡುಗೊರೆಯಾಗಿ ಕೊಟ್ಟಿರುವ ಹುಲಿಯುಗುರಿನ ಪೆಂಡೆಂಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿರುವ ಅವರಿಗೆ ಇಂದೊಂದು ಹೈಕೋರ್ಟ್ ಆದೇಶದಿಂದ ಸ್ವಲ್ಪ ನಿರಾಳಗೊಂಡಿರುವ ಅವರು ಅದರ ಬೆನ್ನಿಗೇ ತಮ್ಮ ಅನಿಸಿಕೆಯೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?
“ನಾನಾಯಿತು ನನ್ನ ಬದುಕಾಯಿತು ಎಂದು ಶ್ರದ್ಧೆಯಿಂದ ಬಾಳುತ್ತಿರುವ ನನ್ನನ್ನು ಪ್ರಚಾರ ವಸ್ತುವಿನಂತೆ ಬಳಕೆ ಮಾಡಲಾಯಿತು. ಪ್ರೀತಿ ನಂಬಿಕೆ ಸಂಬಂಧ ಎಂದು ಸಾಮಾಜಿಕವಾಗಿ ಮಾತಾನಾಡುತ್ತಿದ್ದ ನನ್ನನ್ನು ಮೂಕನಾಗಿಸಿ ಇನ್ನುಮುಂದೆ ಯಾವ ವಿಷಯವು ಮಾತನಾಡದಂತೆ ದಿಗ್ಬಂಧ ಹಾಕಿಕೊಂಡಿತು ಮನಸ್ಸು ಇಂದಿನ ದುರ್ಧೈವ ಪ್ರಚಾರ ಕಂಡು! ಸಂಬಂಧ ಅರಿವಿಲ್ಲದ ಸಮುದಾಯ..!” ಎಂದು ಜಗ್ಗೇಶ್ ತಮ್ಮ ಮನದಾಳದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಅವರು ತಾವು ಇನ್ನು ಸೋಷಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಯಾವ ವಿಚಾರದ ಕುರಿತು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನೆ ಮಾಡಿದಂತಿದೆ.
ನಾನಾಯಿತು ನನ್ನ ಬದುಕಾಯಿತು ಎಂದು ಶ್ರದ್ಧೆಯಿಂದ ಬಾಳುತ್ತಿರುವ ನನ್ನನ್ನು ಪ್ರಚಾರ ವಸ್ತುವಿನಂತೆ ಬಳಕೆ ಮಾಡಲಾಯಿತು!ಪ್ರೀತಿ ನಂಬಿಕೆ ಸಂಬಂಧ ಎಂದು ಸಾಮಾಜಿಕವಾಗಿ ಮಾತಾನಾಡುತ್ತಿದ್ದ ನನ್ನನ್ನು ಮೂಕನಾಗಿಸಿ ಇನ್ನುಮುಂದೆ ಯಾವ ವಿಷಯವು ಮಾತನಾಡದಂತೆ ಧಿಗ್ಭಂಧ ಹಾಕಿಕೊಂಡಿತು ಮನಸ್ಸು ಇಂದಿನ ದುರ್ಧೈವ ಪ್ರಚಾರ ಕಂಡು!ಸಂಬಂಧ ಅರಿವಿಲ್ಲದ ಸಮುಧಾಯ.!
— ನವರಸನಾಯಕ ಜಗ್ಗೇಶ್ (@Jaggesh2)October 30, 2023

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
