ಬೆಂಗಳೂರು:ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಈಡಾಗಿರುವ ಡ್ರೋನ್ ಪ್ರತಾಪ್, ನಿನ್ನೆ ರಾತ್ರಿ ಖಾಸಗಿ ವಾಹಿನಿಯೊಂದರಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕುಳಿತು ತನ್ನ ಬಗೆಗಿನ ಆರೋಪಗಳಿಗೆ ಉತ್ತರ ನೀಡಿದ್ದಾನೆ. ‘‘ಅವನನ್ನು ನಾಡಿಗೆ ಪರಿಚಯಿಸಿ ತಪ್ಪು ಮಾಡಿದೆ’’ ಎಂದು ಇತ್ತೀಚೆಗಷ್ಟೇ ಹೇಳಿದ್ದ ಹಿರಿಯ ನಟ ಜಗ್ಗೇಶ್, ಈತನ ಉತ್ತರಗಳನ್ನೆಲ್ಲ ಟಿವಿಯಲ್ಲಿ ನೋಡಿ ತಮ್ಮ ಅಭಿಪ್ರಾಯನವನ್ನು ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ.
ಪ್ರತಾಪ್ ಸಂದರ್ಶನ ನಡೆಯುತ್ತಿದ್ದ ಸಮಯದಲ್ಲೇ ಸರಣಿ ಟ್ವೀಟ್‌ಗಳನ್ನು ಮಾಡಿರುವ ಜಗ್ಗೇಶ್ ಎಲ್ಲಿಯೂ ಪ್ರತಾಪ್‌ನ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೆ ಅವರ ಟ್ವೀಟ್ ಓದಿದರೆ ಪ್ರತಾಪ್ ಬಗ್ಗೆಯೇ ಹೇಳಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ‘‘ಪ್ರಾಮಾಣಿಕವಾಗಿ ಕಲಿತು ಅರಿತ ಜ್ಞಾನಿ ಸಾವಿರ ಅನುಮಾನದ ಪ್ರಶ್ನೆಗೆ ಒಂದೆ ಮಾತಿನಲ್ಲಿ ಸಾಕ್ಷಿಸಮೇತ ಉತ್ತರಕೊಟ್ಟು ಪುಟಿದೇಳುತ್ತಾನೆ! ಆಂತರ್ಯದಲ್ಲಿ ಗೆದ್ದು ಗಳಿಸಲು ವಾಮಮಾರ್ಗ ಅನುಸರಿಸುವವ ಮಾತಿಗೆ ಮಾತು ಪೋಣಿಸಿ ಅನುಮಾನಿಸಿದವರ ದಾರಿ ತಪ್ಪಿಸಿ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ! ಜಾಲತಾಣ ಬಲ್ಲವರಿಗೆ ಕೋಟಿ ಕಣ್ಣು ಅರಿವಿರಲಿ ಮನುಜ!’’ ಎಂದು ಪರೋಕ್ಷವಾಗಿ ಪ್ರತಾಪ್‌ಗೆ ಜಗ್ಗೇಶ್ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಫೇಸ್​ಬುಕ್​ನಲ್ಲಿ ಡ್ರೋನ್ ಪ್ರತಾಪ್ ಫ್ಯಾನ್ಸ್ ಕ್ಲಬ್ ತೆರೆದಿದ್ದು ಅಭಿಮಾನಿಗಳೋ, ಪ್ರತಾಪನೋ?
‘‘ಬಡತನ ಮೂವರನ್ನು ಸೃಷ್ಟಿಸುತ್ತದೆ! 1) ಪ್ರಾಮಾಣಿಕವಾಗಿ ದುಡಿದು ಜಗ ಗೆಲ್ಲುವನ! 2) ಶ್ರಮಕ್ಕೆ ಫಲ ಸಿಗದೆ ಇರುವಂತೆ ಇದ್ದು ಕೊನೆಯಾಗುವನ! 3) ಮೂರನ್ನ ಆರು ಮಾಡಿ, ಆರನ್ನು ಹನ್ನೆರಡು ಅಂತ ನಂಬಿಸಿ ಚದುರಂಗದ ಆಟಕ್ಕೆ ಆಕಾಶ ತೋರಿಸೋ ಚಾಲಾಕಿಯನ್ನ! ಮೊದಲ ಇಬ್ಬರು ಸಾವಿನವರೆಗು ಚಪ್ಪಾಳೆ ಅನುಕಂಪ ಗೌರವ ಪ್ರಾಪ್ತ! ಮೂರನೆಯವ ಗಳಿಸಿದ್ದೂ ಕಳೆದುಕೊಂಡು ಬದುಕಿದ್ದು ಸತ್ತ ಶವದಂತೆ!’’ ಎಂದು ಒಗಟೊಗಟಾಗಿ, ಆದರೆ ಸ್ವಲ್ಪ ಯೋಚಿಸಿದ ಕೂಡಲೇ ಸ್ಪಷ್ಟವಾಗುವಂತೆ ಜಗ್ಗೇಶ್ ಜರಿದಿದ್ದಾರೆ.
‘‘ತಿನ್ನುವ ಮೂರು ತುತ್ತು ಗಂಟಲಿಂದ ಇಳಿದ ಗಂಟೆಗೆ ಮಲ! ಗಳಿಸಿದ ಸಕಲೈಶ್ವರ್ಯ ಲೆಕ್ಕಹಾಕಿ ಭಾಗ ಪಡೆದು ಗಳಿಸಿದವನ ಸದ್ಗತಿ ಕಾಣಿಸದ ಜಗ! ಇದ್ದವನು ಒಂದು ದಿನ ಇಲ್ಲವಾಗುತ್ತಾನೆ! ನಕ್ಕುನಲಿದವರು ಮರೆತು ಮಂಚವೇರುತ್ತಾರೆ! ಮಣ್ಣಿಗೆ, ಬೆಂಕಿಗೆ ಸೇರಿದ ದೇಹ ಕುರುಹು ಇಲ್ಲದೆ ನಾಶ! ಈ ನಶ್ವರಕ್ಕೆ ಮನುಜನ ನೂರೆಂಟು ನಾಟಕ! ಜಾರುವ ಪರದೆಯ ಮುಂದೆ ನಾಟಕ ನೈಜವಿರಲಿ!’’ ಎಂದೂ ಕಿವಿಮಾತು ಹೇಳಿದ್ದಾರೆ. ಇದಕ್ಕೆ ನೂರಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ‘‘ನಿಮ್ಮ ಸಹಾಯವನ್ನು ಆತ ನೆನಪಿಸಿಕೊಳ್ಳುತ್ತಲೂ ಇಲ್ಲ. ನಿಮ್ಮ ನಂಬಿಕೆಗೆ ದ್ರೋಹ ಮಾಡಿದವರು ಉದ್ಧಾರ ಆಗುವುದಿಲ್ಲ ಬಿಡಿ. ಆತ ಮನುಷ್ಯರಿಂದ ತಪ್ಪಿಸಿಕೊಳ್ಳಬಹುದು. ದೇವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಸುಮ್ಮನೆ ಯೋಚನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ’’ ಎಂದು ಜಗ್ಗೇಶ್ ಅವರಿಗೆ ಸಲಹೆ ನೀಡಿದ್ದಾರೆ.
ಇದುವರೆಗೂ ನಾನು ಹಾರಿಸಿದ್ದು ಕಾಗೆಯಲ್ಲ ಎಂದ ಡ್ರೋನ್ ಪ್ರತಾಪ್…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nineteen =
Remember me
