ಹಾಸನ:ಚೆಕ್ ಬೌನ್ಸ್ ಕೇಸ್‌ನಲ್ಲಿ ಸ್ಯಾಂಡಲ್​ವುಡ್​​​ ನಟ ನೀನಾಸಂ ಅಶ್ವಥ್  ಬಂಧಿಸಿ ನ್ಯಾಯಾಧೀಶರ ಮುಂದೆ ಹಾಸನ ಪೊಲೀಸರು ಹಾಜರುಪಡಿಸಿದ್ದಾರೆ.
ಹಾಸನ ಮೂಲದ ರೋಹಿತ್ ಎಂಬುವವರಿಂದ ಹಸು ಖರೀದಿಸಿದ್ ಅಶ್ವಥ್,  1.5 ಲಕ್ಷದ ಚೆಕ್ ನೀಡಿದ್ದರು. ಬ್ಯಾಂಕ್‌ಗೆ ಹಾಕಿದಾಗ ಅಶ್ವಥ್ ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಈ ಸಂಬಂಧ ರೋಹಿತ್ ಹಾಸನದ ಜೆಎಮ್‌ಎಫ್‌ಸಿ‌ ಕೋರ್ಟ್‌ನಲ್ಲಿ‌ ದೂರು ದಾಖಲಿಸಿದ್ದರು. ಕೋರ್ಟ್ ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ನಾಲ್ಕೂ ಬಾರಿಯೂ ಅಶ್ವಥ್ ಕೋರ್ಟ್‌ಗೆ ಹಾಜರಾಗಿರಲಿಲ್ಲ.
ಪ್ರಕರಣದಲ್ಲಿ ನೀನಾಸಂ ಅಶ್ವಥ್ ವಿರುದ್ಧ ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿದ್ದರು ಪ್ರಯೋಜನವಾಗಿರಲಿಲ್ಲ. ನಾಲ್ಕೂ ಬಾರಿಯೂ ಕೋರ್ಟ್‌ಗೆ ಹಾಜರಾಗದ ಕಾರಣ ಐದನೇ ಬಾರಿ ಅರೆಸ್ಟ್ ವಾರೆಂಟ್ ಹಿನ್ನಲೆ ಹಾಸನ ಬಡಾವಣೆ ಠಾಣೆ ಪೊಲೀಸರು ನಟನನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಬಂಧಿಸಿ ನ್ಯಾಯಾಧೀಶರ ಮುಂದೆ  ಪೊಲೀಸರು ಹಾಜರುಪಡಿಸಿದ್ದರು.
ನ್ಯಾಯಾಧೀಶರ ಮುಂದೆ ನೀನಾಸಂ ಅಶ್ವಥ್ ತಪ್ಪೊಪ್ಪಿಕೊಂಡಿದ್ದು ಶೇ.25 ರಷ್ಟು ಹಣ ಪಾವತಿಸಿದ್ದಾರೆ. ಇನ್ನುಳಿದ ಹಣ ಶೀಘ್ರದಲ್ಲೇ ನೀಡುವುದಾಗಿ ಹೇಳಿದ್ದಾರೆ.  ಶೇಕಡಾ 25 ರಷ್ಟು ಹಣ ಪಾವತಿ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಅಶ್ವಥ್ ಬಿಡುಗಡೆ ಮಾಡಲಾಗಿದೆ.
ಕಲಘಟಗಿ ಮಾಜಿ ಶಾಸಕ ಸಿಎಮ್‌ ನಿಂಬಣ್ಣವರ್ ನಿಧನ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × two =
Remember me
