ಬೆಂಗಳೂರು:ನಟ ಸುದೀಪ್​ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಬಹಳ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಬಹುಭಾಷಾ ನಟ ಪ್ರಕಾಶ್​ ರಾಜ್​ ಅವರು ಟ್ವೀಟ್​ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ಬಲವಾಗಿ ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಪ್ರಕಾಶ್​ ರಾಜ್​ ಟ್ವೀಟ್​ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ:ಚುನಾವಣಾ ತಯಾರಿ ನಡೆಸುತ್ತಿದ್ದ ಸ್ವತಂತ್ರ ಅಭ್ಯರ್ಥಿಗೆ ಶಾಕ್​ ನೀಡಿದ ಜಿಲ್ಲಾಧಿಕಾರಿ!
I strongly believe this is a Fake news spread by the desperate ,loosing BJP in Karnataka.@KicchaSudeepis far more sensible Citizen to fall prey ..ಕರ್ನಾಟಕದಲ್ಲಿ ಸೋಲುವ ಭಯದಲ್ಲಿ .. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ .. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ#justaskinghttps://t.co/kIRmFczTIO
— Prakash Raj (@prakashraaj)April 5, 2023

ಸುದೀಪ್​ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವಿಚಾರ ದೇಶಾದ್ಯಂತ ಸುದ್ದಿಯಾಗಿದೆ. ಇಂದು ಮಧ್ಯಾಹ್ನ ನಡೆಸುವ ಸುದ್ದಿಗೋಷ್ಠಿಯಲ್ಲಿ ಎಲ್ಲ ಪ್ರಶ್ನೆಗೂ ಉತ್ತರ ಸಿಗಲಿದೆ. ಆದರೆ, ಈಗಾಗಲೇ ಅಭಿಮಾನಿಗಳು ಟ್ವಿಟರ್​ನಲ್ಲಿ ಅಭಿಯಾನ ಶುರು ಮಾಡಿದ್ದು, ರಾಜಕೀಯ ಪ್ರವೇಶ ಮಾಡದಂತೆ ಸುದೀಪ್​ ಅವರನ್ನು ಕೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಬೊಮ್ಮಾಯಿ ಇತಿಹಾಸ ಸೃಷ್ಟಿ?: 1985ರಲ್ಲಿ ಹೆಗಡೆ ಬಳಿಕ ಯಾವುದೇ ಪಕ್ಷ ಸತತ ಅಧಿಕಾರಕ್ಕೇರಿಲ್ಲ
ನಮಗೆ ರಾಜಕೀಯ ಬೇಡ. ನೀವು ಸಿನಿಮಾದಲ್ಲಿ ಇದ್ದುಕೊಂಡೇ ನಮಗೆ ಮನರಂಜನೆ ನೀಡಿದರೆ ಸಾಕು. ನಿಮ್ಮನ್ನು ಎಲ್ಲಾ ವರ್ಗದ ಜನರು ಗೌರವಿಸುತ್ತಾರೆ. ರಾಜಕೀಯಕ್ಕೆ ಸೇರಿ ನಿಮ್ಮ ಹೆಸರು ಮತ್ತು ಗೌರವವನ್ನು ಹಾಳುಮಾಡಿಕೊಳ್ಳಬೇಡಿ. ಈಗ ಯಾವ ರೀತಿ ಸಿನಿಮಾದಲ್ಲಿ ಇದ್ದುಕೊಂಡೇ ಅಳಿಲು ಸೇವೆ ಮಾಡುತ್ತಿದ್ದೀರೋ ಅದನ್ನೇ ಮುಂದುವರಿಸಿ. ರಾಜಕೀಯಕ್ಕೆ ಸೇರಿ ಅಭಿಮಾನಿಗಳ ಮನಸ್ಸನ್ನು ನೋಯಿಸಬೇಡಿ ಎಂದು ಮನವಿ ಮಾಡಿದ್ದಾರೆ.
ನಟ ಸುದೀಪ್​ಗೆ ಬಂದ ಬೆದರಿಕೆ ಪತ್ರದಲ್ಲಿ ಏನಿದೆ? ತನಿಖೆಯ ಜವಾಬ್ದಾರಿ ಸಿಸಿಬಿ ಹೆಗಲಿಗೆ

ಖಾಸಗಿ ವಿಡಿಯೋ ಲೀಕ್​ ಮಾಡುವುದಾಗಿ ನಟ ಸುದೀಪ್​ಗೆ ಬೆದರಿಕೆ ಪತ್ರ: ದೂರು ದಾಖಲು

ನಟ ಸುದೀಪ್ ಬಿಜೆಪಿ ಸೇರುತ್ತಾರಾ?! ಇಂದು ಮಧ್ಯಾಹ್ನ ಸಿಎಂ ಸುದ್ದಿಗೋಷ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − two =
Remember me
