ಬೆಂಗಳೂರು:ಜೈಲರ್​ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಸೂಪರ್​ಸ್ಟಾರ್​ ರಜಿನಿಕಾಂತ್​ ಇಂದು ಜಯನಗರದ ಬಿಎಂಟಿಸಿ ಡಿಪೋಗೆ ಅಚ್ಚರಿಯ ಭೇಟಿ ನೀಡಿದ್ದಾರೆ. ಇಡೀ ಜಗತ್ತಿನಾದ್ಯಂತ ತಮ್ಮದೆಯಾದ ಅಭಿಮಾನಿ ಬಳಗವನ್ನು ಹೊಂದಿರುವ ಸೂಪರ್​ಸ್ಟಾರ್​ರನ್ನು ತಮ್ಮ ಡಿಪೋನಲ್ಲಿ ನೋಡಿ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಹುಬ್ಬೇರಿಸಿದ್ದಾರೆ.

ಜಯನಗರ ಬಿಎಂಟಿಸಿ ಡಿಪೋಗೆ ಬೆಳಗ್ಗೆ 11.30ಕ್ಕೆ ಆಗಮಿಸಿದ ರಜನಿಕಾಂತ್ 11.45 ರವರೆಗೂ ಡಿಪೋದಲ್ಲೇ ಇದ್ದರು. ಅಲ್ಲಿದ್ದ ಸಿಬ್ಬಂದಿಗಳ ಜತೆ ಮಾತನಾಡಿ ಡಿಪೋ ಒಳಗೆ ಸುತ್ತಾಡಿದ ಬಳಿಕ ಅಲ್ಲಿಂದ ತೆರಳಿದ್ದಾರೆ.
ಇದನ್ನೂ ಓದಿ:ನವಜಾತ ಶಿಶುವನ್ನು ಚೀಲದಲ್ಲಿ ತುಂಬಿಸಿದ ವೃದ್ಧ ; ಮಗುವಿನ ಅಳುವಿನ ಶಬ್ಧದಿಂದ ಹೊರ ಬಿತ್ತು ಸತ್ಯ

ರಜಿನಿಕಾಂತ್​ ದಿಢೀರ್​ ಭೇಟಿ ನೀಡಿದ್ದೇಕೆ ಮತ್ತು ಬೆಂಗಳೂರಿಗೆ ಯಾವ ಕೆಲಸದ ನಿಮಿತ್ತ ಬಂದಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ರಜಿನಿಕಾಂತ್​ ಅವರನ್ನು ನೋಡಿ ಜಯನಗರ ಡಿಪೋ ಸಿಬ್ಬಂದಿ ಮಾತ್ರ ತುಂಬಾ ಖುಷಿಯಾದರು. ಅಲ್ಲದೆ, ಸಿಬ್ಬಂದಿ ಜತೆ ಕ್ಯಾಮೆರಾಗೆ ಪೋಸ್​ ಸಹ ನೀಡಿದ್ದಾರೆ. ಡಿಪೋದಲ್ಲಿ ಇಬ್ಬರು ಸ್ನೇಹಿತರು ಮತ್ತು ಸಿಬ್ಬಂದಿ ಜತೆ ಕೆಲ ಸಮಯ ಕಳೆದಿದ್ದಾರೆ. ಒಂದು ಕಾಲದಲ್ಲಿ ಅಂದರೆ, ಸಿನಿಮಾಗೆ ಪ್ರವೇಶ ಪಡೆಯುವ ಮುನ್ನ ರಜಿನಿಕಾಂತ್​ ಅವರು ಕಂಡಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಗಾಂಧಿ ಬಜಾರ್​ನಲ್ಲಿರುವ ವಿದ್ಯಾರ್ಥಿ ಭವನ ಹಾಗೂ ರಾಘವೇಂದ್ರ ಸ್ವಾಮಿ ಮಠಕ್ಕೂ ರಜಿನಿಕಾಂತ್​ ಭೇಟಿ ನೀಡಿದ್ದು, ಬೆಂಗಳೂರಿಗ ಬಾಲ್ಯದ ಜೀವನವನ್ನು ಮೆಲಕು ಹಾಕಿದ್ದಾರೆ.

ಇನ್ನು ರಜಿನಿಕಾಂತ್​ ನಟನೆಯ ಜೈಲರ್​ ಸಿನಿಮಾ ಇದೇ ತಿಂಗಳ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಈ ಸಿನಿಮಾಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಬಾಕ್ಸ್​ಆಫೀಸ್​ನಲ್ಲೂ ಹಲವು ದಾಖಲೆಗಳನ್ನು ಮುರಿದಿದೆ. ಈ ಚಿತ್ರದಲ್ಲಿ ನಟ ಶಿವರಾಜ್​ಕುಮಾರ್​ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್​)

ಪಾಕ್​​ ಮಾಜಿ ಪ್ರಧಾನಿ ಇಮ್ರಾನ್ ಖಾನ್​ಗೆ ಜೈಲಿನಲ್ಲಿ ತುಪ್ಪದೊಂದಿಗೆ ದೇಸಿ ಚಿಕನ್, ಮಟನ್ ಊಟ

ರಕ್ಷಾಬಂಧನಕ್ಕೂ ಮುನ್ನವೇ ಸಹೋದರನಿಗೆ ಎಂದಿಗೂ ಮರೆಯದ ಕೊಡುಗೆ ನೀಡಿದ ಅಕ್ಕ..

ತಿರುಗಿ ನೋಡುವಷ್ಟರಲ್ಲಿ ಕೈ ಸೊಂಟದ ಮೇಲಿತ್ತು: ಶೇರ್​ ಆಟೋದಲ್ಲಿ ನಡೆದ ಕಹಿ ಘಟನೆ ಬಿಚ್ಚಿಟ್ಟ ನಟಿ ಐಶ್ವರ್ಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
