ಬೆಂಗಳೂರು:ಪುಸ್ತಕಗಳಿಗಿಂತ ದೊಡ್ಡ ಮೇಷ್ಟ್ರು ಬೇರೆಯಿಲ್ಲ. ನಮಗೆ ಪಾಠ ಮಾಡಿದ ಮೇಷ್ಟ್ರುಗಳನ್ನು ಮರೆತರೂ, ಪುಸ್ತಕಗಳ ಕೈಹಿಡಿದರೆ ಅವು ನಮ್ಮನ್ನು ಮೇಷ್ಟ್ರುಗಳ ರೀತಿಯಲ್ಲಿ ಸಲಹುತ್ತವೆ ಎಂದು ನಟ ರಮೇಶ್ ಅರವಿಂದ್ ಹೇಳಿದರು.
ಎಚ್‌ಎಸ್‌ಆರ್ ಬಡಾವಣೆಯಲ್ಲಿ ಸಪ್ನ ಬುಕ್ ಹೌಸ್‌ನ 21ನೇ ಪುಸ್ತಕ ಮಳಿಗೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ರಮೇಶ್​ ಅರವಿಂದ್​, ಜ್ಞಾನದ ಅಧಿಪತಿಗಳಾದ ಬ್ರಹ್ಮ, ಸರಸ್ವತಿಗೆ ದೇವಾಲಯಗಳಿಲ್ಲ. ಆದರೆ ಪುಸ್ತಕಗಳಿಗೆ ಗ್ರಂಥಾಲಯವಿದೆ. ಓದುಗರಿಗೆ ಗ್ರಂಥಾಲಯವೇ ದೇವಾಲಯ ಅಲ್ಲಿರುವ ಪುಸ್ತಕಗಳೇ ದೇವರಂತೆ. ಇಂತಹ ಪುಸ್ತಕ ದೇವಾಲಯ ಎಲ್ಲ ಬಡಾವಣೆಗಳಲ್ಲೂ ಇರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ನಾವು ಬಟ್ಟೆ, ಒಡವೆ ಸೇರಿ ಅಂಗಡಿಗಳಲ್ಲಿ ಕೊಳ್ಳುವ ಯಾವುದೇ ವಸ್ತುವನ್ನು ಬದಲಾಯಿಸಬಹುದು. ಆದರೆ ಪುಸ್ತಕ ಅಂಗಡಿಯಲ್ಲಿ ಒಂದು ಒಳ್ಳೆಯ ಪುಸ್ತಕ ಕೊಂಡರೆ ಅದರಿಂದ ನಾವೇ ಬದಲಾಗಬಹುದು. ಆ ಮೂಲಕ ಜಗತ್ತನ್ನೇ ಬದಲಿಸಬಹುದು ಎಂದು ಅಭಿಪ್ರಾಯಪಟ್ಟರು.
ಪುಸ್ತಕ ಉದ್ದಿಮೆಗಳಿಂದ ಬರಹಗಾರರ ಬೆಳವಣಿಗೆ:ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಒಂದು ಬಡಾವಣೆ, ಪ್ರದೇಶದ ಶ್ರೀಮಂತಿಕೆಯನ್ನು ಅಲ್ಲಿರುವ ಪುಸ್ತಕ ಭಂಡಾರಗಳ ಸಂಖ್ಯೆಯಿಂದ ಅಳೆಯಬೇಕು. ಈ ನಿಟ್ಟಿನಲ್ಲಿ ಪ್ರತಿ ಬಡಾವಣೆಗೂ ಒಂದು ಪುಸ್ತಕ ಮಳಿಗೆ ಇರಬೇಕು. ಪುಸ್ತಕ ಭಾವನಾತ್ಮಕ ವಿಷಯವಾಗಿದ್ದರೂ ವ್ಯವಹಾರಿಕವಾಗಿಯೂ ಯಶಸ್ಸು ಕಾಣಬೇಕು. ಪುಸ್ತಕ ಉದ್ದಿಮೆ ಲಾಭದಾಯಕವಾಗಿ ರೂಪುಗೊಂಡಲ್ಲಿ ಬರಹಗಾರರು ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಟಿ ರಂಜನಿ ರಾಘವನ್, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್, ಸಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಬರಹಗಾರ ಪ್ರೊ. ಮಲ್ಲೆಪುರಂ ಜಿ ವೆಂಕಟೇಶ್, ಕನ್ನಡ ಹೋರಾಟಗಾರ ರಾ. ನಂ. ಚಂದ್ರಶೇಖರ್ ಇತರರು ಇದ್ದರು.
ಅಕ್ರಮ ಹಣ ವರ್ಗಾವಣೆ: ಕೆಜಿಎಫ್ ಬಾಬುಗೆ ಮತ್ತೆ ಇಡಿ ಸಮನ್ಸ್​ ಜಾರಿ

3 ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ದಂಪತಿ ಬದುಕಿಗೆ ಕೊಳ್ಳಿ ಇಟ್ಟ ಕಟ್ಟೆ! ತುರುವೇಕೆರೆಯಲ್ಲಿ ದುರ್ಘಟನೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × four =
Remember me
