ಹಾವೇರಿ:86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಟ ರಮೇಶ್ ಅರವಿಂದ್ ಮಾತನಾಡುತ್ತಾ, ಪ್ರತಿಯೊಬ್ಬರಿಗೂ ಅವರದ್ದೇ ಆದ ನೆಮ್ಮದಿಯ ಜೀವನ ಇದೆ. ಆದರೆ ಈ ಜೀವನ ಸಾಲದು. ಇದಕ್ಕಿಂತಲೂ ವಿಶೇಷವಾದದ್ದು ಬೇಕು ಎಂಬ ಕಾತರ ಎಲ್ಲರಿಯೂ ಇರುತ್ತದೆ. ಆ ಚಡಪಡಿಕೆಯನ್ನು ಸಾಹಿತ್ಯ ನೀಡುತ್ತದೆ. ನಮಗೆ ಗೊತ್ತಿಲ್ಲದ ಜ್ಞಾನ, ಪ್ರಪಂಚವನ್ನು ತೋರಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ ಎಂದು ಹೇಳಿದರು.
ಇದೇ ವೇಳೆ ಸಾಧಕರಿಗೆ ಮೂರು ಸಲಹೆಯನ್ನು ನೀಡಿದರು. ಜೀವನದಲ್ಲಿ ಪ್ರತಿಯೊಬ್ಬರೂ ಸಾಧನೆ ಮಾಡಬೇಕು. ಮುಖ್ಯವಾಗಿ ಸಾಧಿಸಿದ ನಂತರ ಮೂರು ವಿಚಾರಗಳನ್ನು ಸದಾ ನೆನಪಿನಲ್ಲಿ ಇಡಬೇಕು ಎಂದರು.
1) ಸಾಧಕರಾದವರು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು
2) ವಿಮಾನದಲ್ಲಿ ಹೆಚ್ಚಿನ ಭಾರ ಹಾಕಿದರೆ ಹಾರಲು ಆಗುವುದಿಲ್ಲ. ಹಾಗೆಯೇ ಸಾಧಕರು ಉತ್ತುಂಗಕ್ಕೆ ಏರಿದಾಗ ಗೆಲುವನ್ನು ವಿನಯದಿಂದ ಸ್ವೀಕರಿಸಬೇಕು.
3) ಫಸಲಿಲ್ಲದ ಕೃಷಿಗೆ ಸಮಯಕ್ಕೆ ಸಲ್ಲದ ಸಾಲಕ್ಕೆ, ಸಾಕ್ಷಿ ಇಲ್ಲದ ಅಪವಾದಕ್ಕೆ ಹಾಗೂ ಮಾನವೀಯತೆ ಇಲ್ಲದ ಸಾಧನೆಗೆ ಬೆಲೆಯೇ ಇಲ್ಲ. ಹೀಗಾಗಿ ಸಾಧಕರು ಮಾನವೀಯತೆಯಿಂದ ಇರಬೇಕು ಎಂದು ಸಂದೇಶ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
