ಬೆಂಗಳೂರು:ಪ್ರತಿಬಾರಿಯಂತೆ ಈ ಬಾರಿಯೂ ಆರ್​ಸಿಬಿ ಅಭಿಮಾನಿಗಳು ಜೋಶ್​ನಲ್ಲಿದ್ದಾರೆ. ಕಪ್​ ನಮ್ಮದೆ ಎನ್ನುವ ಕೂಗು ಜೋರಾಗಿಯೆ ಇದೆ. ಆರ್​ಸಿಬಿ ಬಿಡುಗಡೆ ಮಾಡಿದ ಪೋಮೊವೊಂದು ಇದೀಗ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.
ಮಾರ್ಚ್​ 19ರಂದು ‘ಆರ್​ಸಿಬಿ ಅನ್​ಬಾಕ್ಸ್’ ಕಾರ್ಯಕ್ರಮ ನಡೆಸಲಿದೆ. ಈ ಸಮಾರಂಭದ ಪ್ರೋಮೊವೊಂದು ಬಿಡುಗಡೆಯಾಗಿದ್ದು, ಕಂಬಳದ ಕೋಣಗಳೊಂದಿಗೆ ಸ್ಯಾಂಡಲ್​​ವುಡ್​ ನಟ ರಿಷಬ್​ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಪ್ರೋಮೋ ಕ್ರೀಡಾ ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತಾಗಿದೆ.
ಆರ್​ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು, ಕಳೆದೆರಡು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್​ ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಈ ಬಾರಿ ಮಾರ್ಚ್​ 19ರಂದು ನಿಗದಿಯಾಗಿದೆ. ಪ್ರೋಮೊದಲ್ಲಿ ಕಂಬಳದ ಕೋಣಗಳೊಂದಿಗೆ ನಟ ರಿಷಬ್​ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಅನ್​ಬಾಕ್ಸ್ ಕಾರ್ಯಕ್ರಮ ನಡೆಯಲಿದೆ.
ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
Understood what Rishabh Shetty is trying to say?
You’ll find out at RCB Unbox. Buy your tickets now. 🎟️@shetty_rishab#RCBUnbox#PlayBold#ArthaAytha#ನಮ್ಮRCBpic.twitter.com/sSrbf5HFmd
— Royal Challengers Bengaluru (@RCBTweets)March 13, 2024

ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು. ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡಲಾಗುವುದು ಎಂದು ಆರ್​ಸಿಬಿ ತಂಡ ಈಗಾಗಲೇ ತಿಳಿಸಿದೆ.
ಕಾಂತಾರ ಸಿನೆಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಈ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಕಂಬಳದ ಕೋಣಗಳ ಮೇಲೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎಂದು ಬರೆದಿರುತ್ತದೆ. ಈ ವೇಳೆ ರಿಷಬ್ ಶೆಟ್ಟಿಬೆಂಗಳೂರುಹೆಸರಿನ ಕೋಣವನ್ನು ಇದು ಬೇಡ ಭಟ್ರೆ.. ತೆಗೆದುಕೊಂಡು ಹೋಗಿ ಇದನ್ನು ಎಂದು ಹೇಳಿ ಅರ್ಥ ಆಯ್ತಾ ಎಂದು ಹೇಳುತ್ತಾರೆ. ರಾಯಲ್​ ಚಾಲೆಂಜರ್ಸ್ ಮುಂದೆ ಬೆಂಗಳೂರು ಎನ್ನುವ ಹೆಸರು ಬದಲಾಗುವ ಸಾಧ್ಯತೆ ಎನ್ನುವ ಹಾಗೆ ಈ ಪ್ರೋಮೋದಲ್ಲಿ ಕಂಡು ಬಂದಿದೆ.
ಆದರೆ ಈ ಪ್ರೋಮೊ ನೋಡಿದ ಅಭಿಮಾನಿಗಳು ಏನಪ್ಪಾ? ನಮಗೆ ಅರ್ಥವಾಗ್ತಿಲ್ಲ…, ನೀವೆ ಹೇಳಿ…, ಹೆಸರು ಬದಲಾವಣೆ ಮಾಡುತ್ತೀರಾ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಡ್ರಗ್ಸ್​ ಪ್ರಕರಣ; ʼಮಾಣಿಕ್ಯʼ ನಟಿ ವರಲಕ್ಷ್ಮಿ ಶರತ್‌ಕುಮಾರ್​ಗೆ NIA ನೋಟಿಸ್ ಜಾರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + fifteen =
Remember me
