ಬೆಂಗಳೂರು:‘ಅವತಾರ ಪುರುಷ’ ಸಿನಿಮಾ ಚಿತ್ರೀಕರಣ ವೇಳೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಟ ಶರಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ಬೆಳಗ್ಗೆ ಎಚ್ಎಂಟಿ ಗ್ರೌಂಡ್​ನಲ್ಲಿ ಸಿನಿಮಾ ಶೂಟಿಂಗ್​ ನಡೆಯುತಿತ್ತು. ಆ ವೇಳೆ ತೀವ್ರ ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದ ಶರಣ್​ರನ್ನು ನಿರ್ದೇಶಕ ಸಿಂಪಲ್ ಸುನಿ ತಂಡ ಆಸ್ಪತ್ರೆಗೆ ಕರೆದೊಯ್ದರು. ಈ ಬಗ್ಗೆ ‘ದಿಗ್ವಿಜಯ ನ್ಯೂಸ್​’ ಜತೆ ಮಾತನಾಡಿದ ನಟಿ ಶ್ರುತಿ, ‘ಇಂದು ಅವತಾರ ಪುರುಷ ಶೂಟಿಂಗ್​ನಲ್ಲಿ ಅಣ್ಣ ಭಾಗಿಯಾಗಿದ್ರು. ಅಲ್ಲಿ ಅಣ್ಣನಿಗೆ ಹೊಟ್ಟೆನೋವು ಕಾಡುತಿತ್ತು. ಕರೊನಾ ಹಿನ್ನೆಲೆಯಲ್ಲಿ ಮತ್ತು ಚಿತ್ರೀಕರಣಕ್ಕೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ಅವರು ತನ್ನ ನೋವನ್ನ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ನೋವು ಹೆಚ್ಚಾದ ಹಿನ್ನೆಲೆ ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ’ ಎಂದರು.ಇದನ್ನೂ ಓದಿರಿVIDEO|ಶರಣ್​ ಹುಟ್ಟು ಹಬ್ಬದ ಅಂಗವಾಗಿ ಅವತಾರ್​ ಪುರುಷ ಚಿತ್ರದ ಟ್ರೈಲರ್ ಬಿಡುಗಡೆ
‘ಶರಣ್​ಗೆ ಕಿಡ್ನಿಯಲ್ಲಿ ಸ್ಟೋನ್ ಇದೆ ಎಂದು ಡಾಕ್ಟರ್ ಹೇಳಿದ್ದಾರೆ. ಇವತ್ತು ಆಸ್ಪತ್ರೆಯಲ್ಲೇ ಇರಲು ಸೂಚಿಸಿದ್ದಾರೆ. ಶೂಟಿಂಗ್ ಪೋಸ್ಟ್ ಪೋನ್​ ಆಗಿದ್ದಕ್ಕೆ ತುಂಬಾ ಬೇಸರ ಪಟ್ಟುಕೊಂಡಿದ್ದಾನೆ. ಚಿಕಿತ್ಸೆ ಬಳಿಕ ನಾಳೆ(ಭಾನುವಾರ) ಮನೆಗೆ ಕಳಿಸುವ ಸಾಧ್ಯತೆ ಇದೆ’ ಎಂದು ನಟಿ ಶ್ರುತಿ ಹೇಳಿದರು.
‘ನಾವು ಡ್ರಗ್ಸ್​ ಪಾರ್ಟಿ ಮಾಡ್ತಾ ಇದ್ವಿ, ಅದರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಿದ್ಲು…’

VIDEO| ಇದು ಕನ್ನಡದಲ್ಲಿ ಎಸ್‌ಪಿಬಿ ಹಾಡಿದ ಕೊ‌ನೆಯ ಹಾಡು!

ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
