ಶಿವಮೊಗ್ಗ:ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಹ್ಯಾಟ್ರಿಕ್ ಹಿರೋ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರು ತಮ್ಮ 40.04 ಕೋಟಿ ರೂಪಾಯಿ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್​: ಜಸ್ಟ್​ 10 ಸೆಕೆಂಡ್​ನಲ್ಲಿ ಈ ಚಿತ್ರದಲ್ಲಿರುವ ಸಿಂಹವನ್ನು ಹುಡುಕಿ…
ಪತಿ ಶಿವರಾಜ್‌ ಕುಮಾರ್‌ ಅವರ ಬಳಿ 49 ಕೋಟಿ ರೂ. ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಒಟ್ಟಾರೆ ಪತಿ-ಪತ್ನಿ ಬಳಿ ಒಟ್ಟು 89.04 ಕೋಟಿ ರೂ. ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ತಮ್ಮ ವಾರ್ಷಿಕ ಆದಾಯ 1.48 ಕೋಟಿ ರೂಪಾಯಿ ಎಂದು ಗೀತಾ ಅವರು ಹೇಳಿದ್ದು, ಶಿವಣ್ಣ ಆದಾಯ 2.97 ಕೋಟಿ ರೂ. ಎಂದು ತಿಳಿಸಲಾಗಿದೆ. ಶಿವಣ್ಣ ಬಳಿ 22,58,338, ಪತ್ನಿ ಗೀತಾ ಅವರ ಬಳಿ 3 ಲಕ್ಷ ರೂಪಾಯಿ ಕೈಯಲ್ಲಿದೆ. ಮುಕ್ಯವಾಗಿ ಅವರ ಮೇಲೆ ಯಾವುದೇ ಪ್ರಕರಣಗಳು ಇಲ್ಲ ಎಂದು ತಿಳಿಸಿದ್ದಾರೆ.

ಶಿವರಾಜ್​ಕುಮಾರ್ ಅವರಿಗೆ 3 ಕೋಟಿ ರೂಪಾಯಿ ಸಾಲ, 13.6 ಕೋಟಿ ರೂಪಾಯಿ ಅಡ್ವಾನ್ಸ್ ಸೇರಿ ಒಟ್ಟು 17 ಕೋಟಿ ಇದೆ. ಗೀತಾ ಶಿವರಾಜ್​ಕುಮಾರ್ ಅವರದ್ದು 7 ಕೋಟಿ ರೂಪಾಯಿ ಸಾಲ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಗೀತಾ ಅವರ ಬಳಿ 1.07 ಕೋಟಿ ರೂಪಾಯಿ ಟೊಯೋಟಾ ಹೈಬ್ರಿಡ್‌ ಕಾರು, ಶಿವಣ್ಣ ಬಳಿ ಒಂದು ಟೊಯೋಟಾ ಫಾರ್ಚುನರ್‌, ಮಾರುತಿ ಎರ್ಟಿಗಾ ಹಾಗೂ ವೋಲ್ವೋ ಎಸ್‌90 ಕಾರಿದೆ. ಇವುಗಳ ಮೌಲ್ಯ ಒಟ್ಟು 87.70 ಲಕ್ಷ ಎಂದು ಗೀತಾ ಅವರು ದಾಖಲು ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಬಳಿ 5.54 ಕೋಟಿ ರೂಪಾಯಿ ಹಾಗೂ ನಟ ಶಿವರಾಜ್‌ ಕುಮಾರ್‌ 18 ಕೋಟಿ ರೂ. ಚರಾಸ್ತಿ ಇದೆ ಎಂದು ತಮ್ಮ ಅಫಿಡೆವಿಟ್​ನಲ್ಲಿ ತಿಳಿಸಿದ್ದಾರೆ.
ಚಿತ್ರದುರ್ಗ: ಸಚಿವ ಜಮೀರ್ ಅಹಮ್ಮದ್​ ಖಾನ್​ಗೆ ಹಠಾತ್ ಎದೆನೋವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 12 =
Remember me
