ಚಿತ್ರದುರ್ಗ:ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಪರ ನಿಗದಿಯಾಗಿದ್ದ ನಟ ಕಿಚ್ಚ ಸುದೀಪ್ ಅವರ ರೋಡ್​ ಶೋ ರದ್ದಾಗಿದೆ. ಪರಿಣಾಮವಾಗಿ ಸುದೀಪ್ ಅವರನ್ನು ನೋಡಲೆಂದು ಬಂದಿದ್ದ ಅಭಿಮಾನಿಗಳು ನಿರಾಸೆಯಿಂದ ಮರಳುವಂತಾಗಿದೆ.
ಬಿಜೆಪಿ ಅಭ್ಯರ್ಥಿ ಪರ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮತಕ್ಷೇತ್ರದ ಭರಮಸಾಗರ, ಸಿರಿಗೆರೆ ಗ್ರಾಮದಲ್ಲಿ ಸುದೀಪ್ ರೋಡ್ ಶೋ ನಿಗದಿಯಾಗಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸಿರಿಗೆರೆ ಹೆಲಿಪ್ಯಾಡ್​ಗೆ ಹೆಲಿಕಾಪ್ಟರ್ ಬರದೇ ರೋಡ್ ಶೋ ರದ್ದಾಗಿದೆ.
ಇದನ್ನೂ ಓದಿ:ಜೊತೆಗಿದ್ದವನ ಹೆಣವನ್ನೇ 2 ವರ್ಷ ಫ್ರಿಡ್ಜ್​ನಲ್ಲಿಟ್ಟ; ಸತ್ತವನ ಹಣವನ್ನೇ ದಿನಗಟ್ಟಲೆ ಬಳಸಿಬಿಟ್ಟ!
ಸಿರಿಗೆರೆ, ಭರಮಸಾಗರ ಗ್ರಾಮದಲ್ಲಿ ಸುದೀಪ್‌ ರೋಡ್ ಶೋ ಬಳಿಕ ಹೊಳಲ್ಕೆರೆ, ಚಳ್ಳಕೆರೆಯಲ್ಲೂ ರೋಡ್ ಶೋ ನಡೆಯಬೇಕಿತ್ತು. ಆದರೆ ಅಲ್ಲಿನ ರೋಡ್ ಶೋ ಕೂಡ ರದ್ದುಗೊಂಡಿದೆ. ಎಲ್ಲ ಕಡೆ ಸುದೀಪ್​ಗೆ ಕಾದಿದ್ದ ಅಭಿಮಾನಿಗಳು ನಿರಾಸೆಯಿಂದ ಮರಳುವಂತಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + seventeen =
Remember me
