ಬೆಂಗಳೂರು:ಬ್ಯಾಂಕಾಕ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರ ಇಂದು ಸಂಜೆ ಅಥವಾ ತಡರಾತ್ರಿ ಬೆಂಗಳೂರಿಗೆ ತಲುಪುವ ಸಾಧ್ಯತೆ ಇದೆ.
ಇಂದು ಬೆಳಗ್ಗೆಯೂ ಬ್ಯಾಂಕಾಕ್​ನಲ್ಲಿ ಒಂದಷ್ಟು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯಲಿವೆ. ಈಗಾಗಲೇ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ಬಾಕಿ ಉಳಿದಿರುವ ಪ್ರಕ್ರಿಯೆಗಳು ಇಂದು ಮಧ್ಯಾಹ್ನದ ಒಳಗೆ ಮುಗಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮಧ್ಯಾಹ್ನ 2 ಗಂಟೆಯ ಒಳಗೆ ಎಲ್ಲ‌ ಪ್ರಕ್ರಿಯೆಗಳು ಮುಗಿದರೆ, ಬ್ಯಾಂಕಾಕ್​ನಿಂದ ಸ್ಪಂದನಾ ಪಾರ್ಥೀವ ಶರೀರ ಸಂಜೆ 6 ಗಂಟೆಗೆ ಬೆಂಗಳೂರು ತಲುಪುವ ಸಾಧ್ಯತೆ ಇದೆ.
ಇದನ್ನೂ ಓದಿ:ಸಿಬಿಐನಂತೆ ಸಿಐಡಿ ತನಿಖೆ: ಕ್ರಿಮಿನಲ್ ಇಂಟಲಿಜೆನ್ಸ್ ಯುನಿಟ್ ಸ್ಥಾಪನೆ; ಗಂಭೀರ ಅಪರಾಧಗಳ ಗುಪ್ತ ಮಾಹಿತಿ ಸಂಗ್ರಹ
ಇಂಡಿಗೋ ಪ್ಯಾಸೆಂಜರ್ ವಿಮಾನದ ಮೂಲಕವೇ ಪಾರ್ಥಿವ ಶರೀರ ತರಬಹುದು ಎನ್ನಲಾಗಿದೆ. ಏಕೆಂದರೆ, ಇಂಡಿಗೋ ವಿಮಾನದಲ್ಲಿ ಪಾರ್ಥಿವ ಶರೀರ ತರಲು ಅವಕಾಶ ಇರುತ್ತದೆ. ಆದರೆ, ಮಧ್ಯಾಹ್ನ 2 ಗಂಟೆಯ ನಂತರವೂ ಪ್ರಕ್ರಿಯೆಗಳು ತಡವಾದ್ರೆ ಥೈ ಏರ್​ಲೈನ್ಸ್ ಮೂಲಕ ಪ್ರಾರ್ಥೀವ ಶರೀರ ತರಬೇಕಾಗುತ್ತದೆ. ಬ್ಯಾಂಕಾಕ್ ಟು ಬೆಂಗಳೂರಿಗೆ ಇಂದು ರಾತ್ರಿ 9.30ಕ್ಕೆ ಥೈ ಏರ್​ಲೈನ್ಸ್​ ವಿಮಾನ ಇದೆ. ಒಂದು ವೇಳೆ ಕಾನೂನು ಪ್ರಕ್ರಿಯೆ‌ ತಡವಾಗಿ ರಾತ್ರಿ 9.30ರ ವಿಮಾನದಲ್ಲಿ ಹೊರಟರೆ ಬೆಂಗಳೂರಿಗೆ ಬರಲು ಮಧ್ಯರಾತ್ರಿ ಆಗಲಿದೆ.
ಸದ್ಯಕ್ಕೆ ಪಾರ್ಥೀವ ಶರೀರದ ಅಂತಿಮ ದರ್ಶನ ಎಲ್ಲಿ ಆಗಬೇಕು ಎಂಬ ಚರ್ಚೆ ನಡೆಯುತ್ತಿದೆ. ಮಲ್ಲೇಶ್ವರಂ ಗ್ರೌಂಡ್ ಅಥವಾ ಬಿಜೆಪಿ ಕಚೇರಿ ಎದುರಿನ ಮೈದಾನ ಎರಡರಲ್ಲಿ‌ ಒಂದು ಕಡೆ ಅಂತಿಮ ದರ್ಶನಕ್ಕೆ ಇಡಲು ಪ್ಲ್ಯಾನ್ ಮಾಡಲಾಗುತ್ತಿದೆ. ಅಂತ್ಯಕ್ರಿಯೆಯು ಈಡಿಗ ಸಮುದಾಯದ ಪ್ರಕಾರ ಆಗಲಿದೆ. ಅಂತ್ಯಕ್ರಿಯೆ ಜಾಗ ಇನ್ನಷ್ಟೇ ನಿರ್ಧಾರ ಆಗಬೇಕಿದೆ. ಮೂಲಗಳ ಪ್ರಕಾರ ನಾಳೆ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ಕಾರ್ಯ ನಡೆಸುವ ಸಾಧ್ಯತೆ ಇದೆ.(ದಿಗ್ವಿಜಯ ನ್ಯೂಸ್​)
ಹರ ಹರ ಶಂಭು ಹಾಡನ್ನು ಹಾಡಿ ಜನಮನ ಗೆದ್ದಿರುವ ಗಾಯಕಿ ಫರ್ಮಾನಿ ನಾಜ್​ ಸಹೋದರನ ಬರ್ಬರ ಹತ್ಯೆ!

ಟ್ರಕ್​ ಹಿಂದೆ ನಿಂತಿದ್ದ ಕಾರಿಗೆ ಮತ್ತೊಂದು ಟ್ರಕ್ ಡಿಕ್ಕಿ​: ದೇವಸ್ಥಾನದಿಂದ ಮರಳುತ್ತಿದ್ದ ಯುವತಿ ದುರ್ಮರಣ

ಸಮಷ್ಠಿ ಹಿತ ಮುಖ್ಯ: ಮನೋಲ್ಲಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + five =
Remember me
