ಬೆಂಗಳೂರು:‘ನನ್ನ ಮಗ ತಪ್ಪು ಮಾಡಿಲ್ಲ. ಅಪ್ಪಿತಪ್ಪಿ ನಮಗೆ ಗೊತ್ತಿಲ್ಲದೆ ಅವನೇನಾದರೂ ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಿಕೊಂಡು ಬರಲಿ. ಕಾನೂನಿನ ಮುಂದೆ ಎಲ್ಲರೂ ಒಂದೇ…’ ಎಂದು ನಟ ಲೂಸ್​ಮಾದ ಯೋಗಿ ಕುರಿತು ಅವರ ತಾಯಿ ಅಂಬುಜಾ ಹೇಳಿದ್ದಾರೆ.
ಡ್ರಗ್ಸ್​ ಕೇಸ್​ ಸಂಬಂಧ ನಟ ಲೂಸ್​ಮಾದ ಈಗಾಗಲೇ ಐಎಸ್​ಡಿ ವಿಚಾರಣೆ ಎದುರಿಸಿ ಮನೆಗೆ ಬಂದಿದ್ದಾರೆ. ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಅಂಬುಜಾ, ‘ಅವನು ತಪ್ಪು ಮಾಡಿದ್ರೆ, ಬೇಜಾರಾಗಿದ್ರೆ ನಮಗೆ ಗೊತ್ತಾಗುತ್ತೆ. ಸದ್ಯ ತುಂಬಾ ಆರಾಮಾಗಿದ್ದಾನೆ. ವಿಚಾರಣೆ ಮುಗಿಸಿ ಮನೆಗೆ ಬಂದಾಗ ಏನಾಯ್ತು ಎಂದು ಕೇಳಿದೆ. ಅದಕ್ಕೆ ಅವನು ‘ಏನಿಲ್ಲ ಮಮ್ಮಿ ಆರಾಮಾಗಿ ಹೋಗಿ ಬಂದೆ. ಎಷ್ಟು ಬೇಕೋ ಅಷ್ಟನ್ನು ಕೇಳಿದ್ರು, ನಾನೂ ಹೇಳಿದೆ’ ಅಂದ. ಡಿಪಾರ್ಟ್​ಮೆಂಟ್​ನವರೇನು ದಡ್ಡರಲ್ಲ. ಅವರಿಗೆ ಗೊತ್ತಾಗುತ್ತೆ. ತಪ್ಪಿತಸ್ಥರು ಯಾರೆಂದು. ಮತ್ತೊಮ್ಮೆ ವಿಚಾರಣೆಗೆ ಕರೆದರೆ ಖಂಡಿತಾ ಹೋಗ್ತಾನೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದರು. ಹಾಗೇ ಯೋಗಿ ಡಿಫ್ರೆಶನ್​ಗೆ ಹೋಗಿದ್ದರು ಎಂಬ ಮಾತನ್ನು ಅಲ್ಲಗೆಳೆದರು.ಇದನ್ನೂ ಓದಿರಿಮತ್ತೊಂದು ಎಡವಟ್ಟು ಮಾಡಿಕೊಂಡ ಲೂಸ್​ ಮಾದ!
ಕೆಲವರು ಎಲೆ-ಅಡಿಕೆ ಜತೆ ಕಡ್ಡಿಪುಡಿ ಹಾಕ್ತಾರೆ. ಬಾಯಲ್ಲಿ ಹೊಗೆಸೊಪ್ಪು ಇಟ್ಟುಕೊಳ್ತಾರೆ, ನಶ್ಯೆ ಹಾಕೋತ್ತಾರೆ. ಹಾಗೇ ನನ್ನ ಮಗ ಕುಡಿತ-ಸಿಗರೇಟ್​ ಬಳಸುತ್ತಿದ್ದ. ಈ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಸಿನಿಮಾದಲ್ಲಿ ಅವಕಾಶಗಳು ಸಿಗದೆ ಡಿಫ್ರೆಶನ್​ಗೆ ಒಳಗಾಗಿದ್ದ ಎಂಬುದು ಸುಳ್ಳು ಎಂದು ಅಂಬುಜಾ ಸ್ಪಷ್ಟಪಡಿಸಿದರು.
ಒಳ್ಳೇ ಕಥೆಯನ್ನು ಆರಿಸಿಕೊಂಡು ಸಿನಿಮಾ ಮಾಡಲಿಲ್ಲ ಎಂಬ ಬೇಜಾರಿತ್ತೇ ವಿನಃ, ಒಳ್ಳೆಯ ಅವಕಾಶ ಸಿಗಲಿಲ್ಲ ಎಂದು ನನ್ನ ಮಗನಿಗೆ ಬೇಜಾರಾಗಿಲ್ಲ. ಅವನ ವಯಸ್ಸಿಗೆ ಮೀರಿದ ಪಾತ್ರಗಳ ಬಗ್ಗೆ ಹೇಳ್ತಾ ಇದ್ರು. ಹಾಗಾಗಿ ಅವನು ತನ್ನ ವಯಸ್ಸಿಗೆ ತಕ್ಕಂತಹ ಪಾತ್ರ ಸಿಕ್ಕಿದ್ರೆ ಮಾಡೋಣ ಎಂದು ಕಾಯ್ತಾ ಇದ್ದ. ಅವನು ಯಾವ ಡಿಫ್ರೆಶನ್​ಗೂ ಹೋಗಿಲ್ಲ. ಸಿನಿಮಾ ಮಾಡಿಸಿಕೊಂಡ ಎಷ್ಟೋ ಜನ ಪ್ರಡ್ಯೂಸರ್ಸ್​ಗಳು ನಮಗೆ ಹಣವನ್ನೇ ಕೊಟ್ಟಿಲ್ಲ. ದೇವರು ನಮಗೆ ತಿನ್ನೋಕೆ ಉಣ್ಣೋಕೆ, ಇರೋಕೆ ಮನೆಯನ್ನೂ ಕೊಟ್ಟಿದ್ದಾನೆ. ಅಂತಹ ಕಷ್ಟವೇನೂ ಇಲ್ಲ. ಮತ್ತೇಕೆ ಡಿಫ್ರೆಶನ್​ಗೆ ಹೋಗಬೇಕು ಎಂದು ಪ್ರಶ್ನಿಸಿದರು.ಇದನ್ನೂ ಓದಿರಿಕುಡಿತ-ಸಿಗರೇಟ್​ ಅಭ್ಯಾಸ ಇದ್ದದ್ದು ನಿಜ ಎಂದ ಲೂಸ್​ಮಾದ, ರಾಗಿಣಿ ಬಗ್ಗೆ ಹೇಳಿದ್ದೇನು?
ನನಗೆ ಗೊತ್ತಿರೋ ಹಾಗೆ ಯೋಗಿಗೆ ಮೂರ್ನಾಲ್ಕು ಜನ ಸ್ಕೂಲ್​ಮೇಟ್ಸ್ ಫ್ರೆಂಡ್ಸ್​ ಇದ್ದಾರಷ್ಟೆ. ಶೂಟಿಂಗ್​ ಮುಗಿದ ಕೂಡಲೇ ಸೀದಾ ಮನೆಗೆ ಬರ್ತಾನೆ. ಚಿತ್ರರಂಗದಲ್ಲೂ ತುಂಬಾ ಜನ್ರ ಜತೆ ಆತ ಬೆರೆಯಲ್ಲ. ನಮಗೆ ಗೊತ್ತಿರೋ ಹಾಗೆ ಹೊರಗಿನವರ ಸಂಪರ್ಕ ಕಡಿಮೆ ಎನ್ನುವ ಮೂಲಕ ಡ್ರಗ್ಸ್​ ಪೆಡ್ಲರ್​ಗಳ ಪರಿಚಯ ಇಲ್ಲ ಎಂದು ಪರೋಕ್ಷವಾಗಿ ಹೇಳಿದರು.
ಮನೆಯಲ್ಲಿ ಜೋರಾಗಿ ಸೌಂಡ್​ ಮಾಡುತ್ತ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಕೊಟ್ಟಿದ್ದರ ಬಗ್ಗೆ ಗಿರಿನಗರ ಪೊಲೀಸರು ಲೂಸ್​ಮಾದಗೆ ವಾರ್ನಿಂಗ್​ ಕೊಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಂಬುಜಾ, ‘ತುಂಬಾ ಹಿಂದಿನ ಘಟನೆ ಅದು. ಮ್ಯೂಸಿಕ್​ ಜಾಸ್ತಿ ಇಟ್ಟಿದ್ದ ಅನ್ಸುತ್ತೆ. ಅಕ್ಕಪಕ್ಕದ ಮನೆಯವರಿಗೆ ತೊಂದರೆ ಆಗುತ್ತೆ ಸೌಂಡ್​ ಕಡಿಮೆ ಮಾಡಿಕೊಳ್ಳಿ ಎಂದು ಪೊಲೀಸರು ಹೇಳಿದರು. ಸರಿ ಅಂದ. ಅಲ್ಲಿಗೆ ಅದು ಮುಗಿತು’ ಎಂದರು.
https://www.facebook.com/DighvijayNews/videos/2810931865795718
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
