ಮುಂಬೈ:ಬಾಲಿವುಡ್ ನಟಿ ಐಶ್ವರ್ಯ ರೈ ಪುತ್ರಿ ಆರಾಧ್ಯ ಬಚ್ಚನ್ ಅವರು ಮುಕೇಶ್ ಅಂಬಾನಿ  ಅವರ ಪುತ್ರ ಅನಂತ್​ ಅಂಬಾನಿ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆರಾಧ್ಯ ಬಚ್ಚನ್ ಅವರ ಹೊಸ ಲುಕ್​​  ನೆಟ್ಟಿಗರ ಗಮನ ಸೆಳೆದಿತ್ತು.  ಇದೀಗ ಆರಾಧ್ಯ ಅವರ ಕುರಿತಾಗಿ ಹೊಸ ಸುದ್ದಿಯೊಂದು ವೈರಲ್​​ ಆಗುತ್ತಿದೆ.
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ  ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮವು ಗುಜರಾತ್‌ನ ಜಾಮ್‌ನಗರದಲ್ಲಿ ಇತ್ತೀಚೆಗೆ ನಡೆಯಿತು. ಈ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ವಿದೇಶದಿಂದಲೂ ಅತಿಥಿಗಳು ಬಂದಿದ್ದರು. ಇದೀಗ ಈ ವಿವಾಹ ಪೂರ್ವ ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬಹುತೇಕ ಬಾಲಿವುಡ್ ನಟರು ಅನಂತ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಮೂರು ದಿನಗಳ ಕಾಲ ಈ ವಿವಾಹ ಪೂರ್ವ ಸಮಾರಂಭ ನಡೆಯಿತು. ಅತಿಥಿಗಳಿಗೆ ವಿಶೇಷ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಬಚ್ಚನ್ ಕುಟುಂಬದವರೆಲ್ಲರೂ ಬಂದಿದ್ದರು. ಆ ಪೈಕಿ ಐಶ್ ಮಗಳಾಗಿರುವ ಆರಾಧ್ಯ ಬಚ್ಚನ್​ ಲುಕ್ ಈಗ ಎಲ್ಲರನ್ನೂ ಸೆಳೆಯುತ್ತಿದೆ.
A post shared by Aaradhya ♡ (@aaradhyaraibachchanofficial)

ಈ ಹಿಂದೆ ಆರಾಧ್ಯ ಬಚ್ಚನ್ ಪ್ರತಿ ಬಾರಿಯೂ ಅದೇ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅಂಬಾನಿ ಪಾರ್ಟಿಯಲ್ಲಿ ಆರಾಧ್ಯ ಬಚ್ಚನ್ ವಿಭಿನ್ನವಾಗಿ ಕಾಣುತ್ತಿದ್ದರು. ಅವಳ ಮುಖದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂತು. ಆಕೆಯಲ್ಲಿದ್ದ ದಿಢೀರ್ ಬದಲಾವಣೆಯನ್ನು ನೋಡಿದ ಹಲವರು ಆರಾಧ್ಯ ಬಚ್ಚನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆರಾಧ್ಯ ಬಚ್ಚನ್ ತುಂಬಾ ವಿಭಿನ್ನವಾಗಿ ಕಾಣುತ್ತಿದ್ದಾರೆ. ಆರಾಧ್ಯ ಅವರನ್ನು ಈ ರೀತಿ ನೋಡುತ್ತಿರುವುದು ಇದೇ ಮೊದಲು ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಾನಾ ಚರ್ಚೆಗಳೂ ನಡೆಯುತ್ತಿವೆ.
ಆರಾಧ್ಯ ಬಚ್ಚನ್ ಪ್ಲಾಸ್ಟಿಕ್ ಸರ್ಜರಿ ಮಾಡಿದ್ರಾ?ಎಂಬ ಅನುಮಾನ ಮೂಡುವುದು ಸಹಜ. ಏಕೆಂದರೆ ಕೆಲವು ತಿಂಗಳ ಹಿಂದೆ ಆರಾಧ್ಯ ಹೀಗಿರಲಿಲ್ಲ. ಈಗ ನೋಟ ತುಂಬಾ ಬದಲಾಗಿದೆ. ಆರಾಧ್ಯ ಅವರ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.
ಆರಾಧ್ಯಗೆ ಕೇವಲ 12 ವರ್ಷ 3 ತಿಂಗಳು. ಆಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂದು ಹಲವರು ಹೇಳುತ್ತಾರೆ. ಕೆಲ ದಿನಗಳ ಹಿಂದೆ ಆರಾಧ್ಯ ಬಚ್ಚನ್ ತನ್ನ ಪೋಷಕರೊಂದಿಗೆ ವಿದೇಶಕ್ಕೆ ತೆರಳಿದ್ದರು. ಆರಾಧ್ಯ ಬಚ್ಚನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ವದಂತಿಗಳಿವೆ.  ಇನ್ನು ಕೆಲವರು ಹೇರ್ ಸ್ಟೈಲ್ ಮತ್ತು ಮೇಕಪ್ ನಿಂದಾಗಿ ಆರಾಧ್ಯ ಲುಕ್ ಬದಲಾಗಿದೆ ಎನ್ನುತ್ತಾರೆ. ಈ ಸುದ್ದಿಯ ಸತ್ಯಾಸತ್ಯತೆ ತಿಳಿಯಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
