
ಬೆಂಗಳೂರು:ಪರಿಸರ ದಿನಾಚರಣೆ ಅಂಗವಾಗಿ ಅಖಿಲ ಕರ್ನಾಟಕ ಮಕ್ಕಳ ಕೂಟ ಸಹಯೋಗ ಮತ್ತು ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಲ್ಲಿ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್’ ಚಾನಲ್ ವತಿಯಿಂದ ಆಯೋಜಿಸಲಾಗಿರುವ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಗೆ ಇಂದು ಬೆಳಗ್ಗೆ ಚಾಲನೆ ದೊರೆತಿದೆ. ಈ ಸಂದರ್ಭ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಅರ್ಚನಾ, ಮಕ್ಕಳಿಗೆ ನೀರನ್ನು ಉಳಿಸುವ ಕುರಿತಾಗಿ ಕಿವಿಮಾತನ್ನು ಹೇಳಿದ್ದಾರೆ.

ಇದನ್ನೂ ಓದಿ:ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜಿಸಿರುವ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಗೆ ಚಾಲನೆ

ವಿಜಯವಾಣಿ ದಿಗ್ವಿಜಯ ನ್ಯೂಸ್​ ಸಂಸ್ಥೆಗಳ ಜತೆ ಯಶಸ್ಸಿನಲ್ಲಿ ಅಖಿಲ ಕರ್ನಾಟಕ ಮಕ್ಕಳ ಕೂಟ ಸಂಘ ಕೂಡ ಪರಿಣಾಮಕಾರಿಯಾಗಿ ಭಾಗವಹಿಸಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಕಾಳಜಿ ಬೆಳೆಸುವ ಉದ್ದೇಶದಿಂದ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಶೀರ್ಷಿಕೆ ಅಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಚಾಮರಾಜಪೇಟೆ ಮಕ್ಕಳ ಕೂಟ ಆವರಣದಲ್ಲಿ ಸ್ಪರ್ಧೆ ನಡೆಯುತ್ತಿದೆ. 800ಕ್ಕೂ ಹೆಚ್ಚು 7ರಿಂದ 16 ವರ್ಷದ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಅರ್ಚನಾ, “ಪರಿಸರ ದಿನಾಚರಣೆ ಪ್ರಯುಕ್ತ ನಡೆಯುವ ಸ್ಫರ್ಧೆಯಲ್ಲಿ ಹಸಿರೇ ಉಸಿರು ಒಂದು ಘೋಷಣೆ ಆಗಬಾರದು. ಅದನ್ನು ಬದುಕಲ್ಲಿ ನಾವು ಅದನ್ನು ಅಳವಡಿಸಬೇಕು. ಪ್ರಕೃತಿ ನಮ್ಮ ಒಬ್ಬರ ಸ್ವತ್ತಲ್ಲ ಅದು ಎಲ್ಲರ ಸ್ವತ್ತು. ಪರಿಸರ ಸಂರಕ್ಷಣೆ ಎಲ್ಲರೂ ಮಾಡೋಣ” ಎಂದಿದ್ದು ಇದೇ ಸಂದರ್ಭಲ್ಲಿ ನೀರಿನ ಬಳಕೆ ಹೇಗಿರಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.
ಇಂದಿರಾ ಕ್ಯಾಂಟೀನ್​​ ಮರುಜೀವಕ್ಕೆ 355 ಕೋಟಿ ರೂ. ಬೇಡಿಕೆ6 ಸಾವಿರ ರೂ. ಲಂಚ ಪಡೆಯುವಾಗ ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಲೋಕಾ ಬಲೆಗೆಇನ್ಫೋಸಿಸ್ ಸಿಇಒ ಸಂಬಳದಲ್ಲಿ ಶೇಕಡ 21ರಷ್ಟು ಇಳಿಕೆ! ಯಾಕೆ?

ಇಂದಿರಾ ಕ್ಯಾಂಟೀನ್​​ ಮರುಜೀವಕ್ಕೆ 355 ಕೋಟಿ ರೂ. ಬೇಡಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
