ಬೆಂಗಳೂರು: ವಂಚನೆಗೊಳಗಾಗಿ ಸ್ಯಾಂಡಲ್​ವುಡ್​ ನಟಿ ವಿ.ಕೆ. ಚಂದನಾ(29) ಸೆಲ್ಫಿ ವಿಡಿಯೋ ಮಾಡುತ್ತ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆಕೆಯ ಪ್ರೇಮಿ ದಿನೇಶ್ ಮತ್ತು ಆತನ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದಾರೆ. ಚಂದನಾ ಆತ್ಮಹತ್ಯೆ ಪ್ರಕರಣ ರಾಜ್ಯದ ಗಮನ ಸೆಳೆದಿದ್ದು, ಈ ಕುರಿತು ಸುದ್ದಗುಂಟೆಪಾಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ನಡೆದು ನಾಲ್ಕು ದಿನವಾದರೂ ಪೊಲೀಸರಿಗೆ ತಲೆಮರೆಸಿಕೊಂಡವರ ಸುಳಿವೇ ಸಿಕ್ಕಿಲ್ವಂತೆ!
ಇದನ್ನೂ ಓದಿ:ನಟಿ ಚಂದನಾ ಆತ್ಮಹತ್ಯೆಗೆ ಇಲ್ಲಿದೆ ನೋಡಿ ನಿಜವಾದ ಕಾರಣ…
ವಿ.ಕೆ.ಚಂದನಾ ಮೇ 30ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಿಯತಮ ದಿನೇಶ್, ಆತನ ತಂದೆ ಲೋಕಪ್ಪ ಗೌಡ, ತಾಯಿ ಗಾಯತ್ರಿ, ಚಿಕ್ಕಮ್ಮ ಶೈಲಾ, ಸೋದರಮಾವ ಸ್ವಾಮಿ ವಿರುದ್ಧ ಆಕೆಯ ಪಾಲಕರು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಾಗುತ್ತಿದ್ದಂತೆ ದಿನೇಶ್ ಮತ್ತು ಕುಟುಂಬ ಸದಸ್ಯರು ತಲೆಮರೆಸಿಕೊಂಡಿದ್ದಾರೆ. ಬುಧವಾರ ಸಂಜೆಯಾದರೂ ಅವರೆಲ್ಲಿದ್ದಾರೆ ಎಂಬ ಸುಳಿವು ಪೊಲೀಸಿರಗೆ ಸಿಕ್ಕಿಲ್ಲ.
ಇದನ್ನೂ ಓದಿ:ಪ್ರೀತಿ ಹೆಸರಲ್ಲಿ ಹಾಸಿಗೆಗೆ ಕರೆದವನ ನಂಬಿ ದುರಂತ ಅಂತ್ಯ ಕಂಡ ನಟಿ ಚಂದನಾ; ದಿನೇಶ್​ಗೆ ಶುರುವಾಗಿತ್ತು ಅನುಮಾನ !
ಇದೇ ವೇಳೆ ಚಂದನಾಳ ಅಂತ್ಯಸಂಸ್ಕಾರ ನೆರವೇರಿಸಿರುವ ಪಾಲಕರು ಚೇತರಿಸಿದ ಬಳಿಕ ಅವರ ಹೇಳಿಕೆ ದಾಖಲಿಸಿ, ಸಾಕ್ಷ್ಯಗಳನ್ನು ಕೋರ್ಟ್​ಗೆ ಒಪ್ಪಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
VIDEO: ದೈಹಿಕವಾಗಿ ಬಳಸಿಕೊಂಡು, ಮದುವೆಯಾಗಲ್ಲ ಎಂದ ಪ್ರಿಯಕರ; ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − three =
Remember me
