ಬೆಂಗಳೂರು:ನಟಿ ಗೌತಮಿ ಒಂದು ಕಾಲದಲ್ಲಿ ಸೌತ್ ಸಿನಿಮಾ ಪ್ರೇಮಿಗಳ ನೆಚ್ಚಿನ ನಾಯಕಿ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ.
ಗೌತಮಿ ತಡಿಮಲ್ಲ ಭಾರತೀಯ ಚಲನಚಿತ್ರ ರಂಗದ ನಟಿ. ಇವರು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದೂ, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇವರು ಕಿರುತೆರೆಯಲ್ಲೂ ನಟನೆ, ನಿರೂಪಣೆ ಮಾಡಿದ್ದೂ, ವಸ್ತ್ರ ವಿನ್ಯಾಸದಲ್ಲಿಯೂ ಪ್ರಸಿದ್ದರಾಗಿದ್ದಾರೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ಜನರ ಮನ ಗೆದ್ದಿದ್ದಾಳೆ. 90ರ ದಶಕದಲ್ಲಿ ತಾರೆಯೊಬ್ಬರು ನಾಯಕಿಯಾಗಿ ಮಿಂಚಿದ್ದರು. ಅಭಿನಯಕ್ಕಾಗಿ ತಮಿಳುನಾಡು ಸರ್ಕಾರದಿಂದ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
A post shared by Gautami Tadimalla (@gautamitads)

ಖ್ಯಾತ ಉದ್ಯಮಿ ಸಂದೀಪ್ ಭಾಟಿಯಾ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಮುದ್ದಾದ ಮಗಳು ಇದ್ದಾಳೆ. ಆಕೆ ಹೆಸರು ಸುಬ್ಬಲಕ್ಷ್ಮಿ . ಆದರೆ ಗೌತಮಿಯ ಜೀವನದಲ್ಲಿ ಪ್ರೀತಿ ಮತ್ತು ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಅವರು 1998 ರಲ್ಲಿ ವಿವಾಹವಾದರು ಮತ್ತು 1999 ರಲ್ಲಿ ವಿಚ್ಛೇದನ ಪಡೆದರು. ಆ ನಂತರ ಮಗಳನ್ನು ಒಬ್ಬಳೇ ನೋಡಿಕೊಂಡಳು. ಮದುವೆಯಾದ ನಂತರ ಗೌತಮಿ ಬಹುಕಾಲ ಸಿನಿಮಾಗಳಿಂದ ದೂರ ಉಳಿದಿದ್ದರು. ಆ ನಂತರ ೨೦೦೫ರಿಂದ ಕಮಲಹಾಸನ್ ಅವರೊಂದಿಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದರು. ಆದರೆ ಈ ಜೋಡಿ ಮತ್ತೆ ಬೇರೆ ಆಗುತ್ತಾರೆ. ಒಂಟಿಯಾಗಿ ಮಗಳನ್ನು ನೋಡಿಕೊಳ್ಳುತ್ತಿದ್ದಾರೆ.
A post shared by subbu tadimalla (@maybesubbu)

ಈಗ ಗೌತಮಿ ಪುತ್ರಿ ಸುಬ್ಬಲಕ್ಷ್ಮಿ ಅವರ ಫೋಟೋಗಳು ಈಗ ಹರಿದಾಡುತ್ತಿವೆ. ಉನ್ನತ ವಿದ್ಯಾಭ್ಯಾಸ ಮುಗಿಸಿರುವ ಸುಬ್ಬಲಕ್ಷ್ಮಿ ಮನಮೋಹಕ ಮತ್ತು ಫ್ಯಾಶನ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸುಬ್ಬಲಕ್ಷ್ಮಿಗೆ ಅಮ್ಮನಿಗಿಂತ ಸುಂದರಿ. ಅಲ್ಲದೇ ಸುಬ್ಬಲಕ್ಷ್ಮಿ ಗ್ಲಾಮರ್ ಶೋನಿಂದ ದೂರ ಉಳಿದು ತಾಯಿಯಂತೆ ಸಾಂಪ್ರದಾಯಿಕ ಲುಕ್‌ಗೆ ಅಂಟಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಆ್ಯಕ್ಟಿವ್ ಆಗಿರುವ ಸುಬ್ಬಲಕ್ಷ್ಮಿಗೆ ನಟನೆಯಲ್ಲಿ ಅಷ್ಟಾಗಿ ಆಸಕ್ತಿ ಇಲ್ಲವಂತೆ. ಆದರೆ ಈ ಹಿಂದೆಯೇ ಅವರು ಚಿತ್ರರಂಗಕ್ಕೆ ಬರಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

ಗೌತಮಿ ನಟಿಸಿದ ಕನ್ನಡ ಚಿತ್ರಗಳು ಏಳು ಸುತ್ತಿನ ಕೋಟೆ, ಚಿಕ್ಕೆಜಮಾನ್ರು ಹಾಗೂ ಚೆಲುವ .ಇವರು ನಟಿಸಿರುವ ಹಿಂದಿ ಚಿತ್ರಗಳು ಪ್ಯಾರ್ ಹುಅ ಚೋರಿ ಚೋರಿ, ಜನತ ಕಿ ಅದಾಲತ್, ಹೈವಾನ್, ಆದ್ಮಿ, ಅಪ್ಪು ರಾಜಾ, ತ್ರಿಮೂರ್ತಿ ಹಾಗೂ ಧಾಲ್.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 4 =
Remember me
