ಬೆಂಗಳೂರು:ಬಿಗ್​ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾದನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವೃದ್ಧಾಶ್ರಮವೊಂದರಲ್ಲಿ ನೇಣುಬಿಗಿದುಕೊಂಡು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಬಿಗ್​ಬಾಸ್​ ಸೀಸನ್​ 3ರ ಸ್ಪರ್ಧಿಯಾಗಿದ್ದ ಜಯಶ್ರೀ, ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ಉಪ್ಪು ಹುಳಿ ಖಾರ ಮತ್ತು ಶಿರಾಡಿ ಘಾಟ್ ಚಿತ್ರದಲ್ಲಿ ಜಯಶ್ರೀ ನಟಿಸಿದ್ದರು.
2020ರ ಜುಲೈ ತಿಂಗಳಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ಜಯಶ್ರೀ, 2019ರ ಸೆಪ್ಟೆಂಬರ್​ನಲ್ಲಿ ತನ್ನ ಸೋದರ ಮಾವನ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. ‘ಮೊದಲಿನಿಂದಲೂ ನನಗೆ ನಮ್ಮ ಮಾವ ಕಿರುಕುಳ ಕೊಡುತ್ತಿದ್ದರು. ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದರು. ನಮ್ಮ ಮಾವ​ ಒಬ್ಬ ಸೈಕೋ. ಆಸ್ತಿ ವಿಚಾರಕ್ಕೆ ನಮ್ಮನ್ನು ಮನೆಯಿಂದ ಮಾವ ಹೊರಹಾಕಿದ್ದಾರೆ’ ಎಂದು ಮಾವ ಗಿರೀಶ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದಕ್ಕೂ ಮುನ್ನಾ, ಸ್ವತಃ ಜಯಶ್ರೀ ಅವರೇ ಫೇಸ್​ಬುಕ್​ನಲ್ಲಿ, ‘ನನ್ನಿಂದಾಗದು, ಇಡೀ ಜಗತ್ತಿಗೆ ಮತ್ತು ಖಿನ್ನತೆಗೆ ಗುಡ್​ಬೈ’ ಎಂದು ಬರೆದುಕೊಂಡಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ, ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಕೆಲ ದಿನಗಳಿಂದ ಇದ್ದರು. ಇದೀಗ ನೇಣಿಗೆ ಶರಣಾಗಿ ಬದುಕಿಗೆ ಗುಡ್​ಬೈ ಹೇಳಿದ್ದಾರೆ.
ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕುಮಾರಸ್ವಾಮಿ!

ಸಚಿವ ಮಾಧುಸ್ವಾಮಿ ನಾಳೆ ಮಧ್ಯಾಹ್ನ ರಾಜೀನಾಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
