ಬೆಂಗಳೂರು:ಪದೇಪದೆ ಆತ್ಮಹತ್ಯೆಯ ಮಾತುಗಳನ್ನಾಡುತ್ತಿದ್ದ ಉಪ್ಪು ಹುಳಿ ಖಾರ, ಶಿರಾಡಿ ಘಾಟ್ ಸಿನಿಮಾ ನಟಿ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಕೊನೆಗೂ ಸಾವಿನ ಮನೆಯ ಕದ ತಟ್ಟಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ, ಕಳೆದ 7 ತಿಂಗಳಲ್ಲಿ ಹಲವು ಬಾರಿ ಬದುಕಿನ ಪಯಣ ಮುಗಿಸಿಕೊಳ್ಳಲು ಯತ್ನಿಸಿದ್ದರು. ಬದುಕಿನ ಜಂಜಾಟದಲ್ಲಿ ಸಾವಿಗಾಗಿ ಹಾತೊರೆದಿದ್ದರು ಎಂಬುದಕ್ಕೆ ಇಲ್ಲಿನ ಕೆಲ ಘಟನೆಗಳೇ ಸಾಕ್ಷಿ.
ಮಾಗಡಿ ಮುಖ್ಯರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಫ್ಯಾನ್​ಗೆ ನೇಣುಹಾಕಿಕೊಂಡು ಇಂದು ಬೆಳಗ್ಗೆ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದಾಗಿ ಹಲವು ಬಾರಿ ಹೇಳಿಕೊಂಡಿದ್ದ ಜಯಶ್ರೀ, ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೂ ಮನವಿ ಸಲ್ಲಿಸಿದ್ದರು.ಇದನ್ನೂ ಓದಿರಿಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
‘ನನ್ನ ಚಿಕ್ಕವಯಸ್ಸಿನಲ್ಲಿ ಆಗ್ಬಾರದ ಘಟನೆ ಆಗಿದೆ, ನನ್ನ ಕೈಯಲ್ಲಿ ಅದ್ಯಾವುದನ್ನೂ ಮರೆಯಲು ಆಗುತ್ತಿಲ್ಲ. ಇದರ ನಡುವೆ ನಾನು ಫೇಸ್​ಬುಕ್​ನಲ್ಲಿ ಕಾಮೆಂಟ್ಸ್​ ನೋಡುತ್ತಿದ್ದೇನೆ. ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ನಾನೊಬ್ಬಳು ಲೂಸ್​, ನನಗೆ ಬದುಕೋಕೆ ಆಗ್ತಿಲ್ಲ, ಪ್ಲೀಸ್​.. ಪ್ಲೀಸ್..​ ನನಗೆ ಬೇಕಿರೋದು ಸಾವು, ನನಗೆ ಬದುಕಲು ಇಷ್ಟವಿಲ್ಲ. ನಾನು ಸಾಯಬೇಕು…’ ಎಂದು ಕಳೆದ ಜುಲೈನಲ್ಲಿ ಫೇಸ್​ಬುಕ್​ ಲೈವ್​ನಲ್ಲಿ 2020ರ ಜುಲೈನಲ್ಲಿ ಹೇಳಿಕೊಂಡಿದ್ದರು.
‘ನಾನು ಯಾರ ಬಳಿಯೂ ಧನಸಹಾಯ ಕೇಳಿಲ್ಲ. ಸುದೀಪ್​ ಸರ್​ ಹತ್ರನೂ ನಾನು ಆರ್ಥಿಕ ಸಹಾಯವನ್ನು ಕೇಳಿಲ್ಲ. ನನಗೆ ಹಣದ ಸಮಸ್ಯೆ ಏನೂ ಇಲ್ಲ. ನನಗೀಗ ಬೇಕಾಗಿರುವುದು ಒಂದೇ ಅದು ನನ್ನ ಸಾವು. ನಾನು ತುಂಬಾ ಖಿನ್ನತೆಯಲ್ಲಿದ್ದೇನೆ. ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ತುಂಬಾ ನೋವಿನಲ್ಲಿದ್ದೇನೆ. ನನಗೆ ದಯಾಮರಣವನ್ನು ನೀಡಿ, ನಾನು ಒಳ್ಳೆಯ ಹುಡುಗಿಯಲ್ಲ’ ಎಂದು ಕಣ್ಣೀರು ಹಾಕಿದ್ದರು. ಇದಾದ ಬೆನ್ನಲ್ಲೇ ನೆಟ್ಟಿಗರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ, ಧೈರ್ಯವಾಗಿರಿ ಎಂದಿದ್ದರು. ಅಲ್ಲದೆ, ಅವರನ್ನು ಸಂಪರ್ಕಿಸಲು ಸಾಕಷ್ಟು ಮಂದಿ ಪ್ರಯತ್ನಿಸಿದ್ದರು.ಇದನ್ನೂ ಓದಿರಿಸಚಿವ ಮಾಧುಸ್ವಾಮಿ ನಾಳೆ ಮಧ್ಯಾಹ್ನ ರಾಜೀನಾಮೆ
ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ಪೋಸ್ಟ್​ ಮಾಡಿದ ಜಯಶ್ರೀ, ನಾನು ಚೆನ್ನಾಗಿದ್ದೇನೆ. ಸುರಕ್ಷಿತವಾಗಿದ್ದೇನೆ. ಲವ್​ ಯು ಆಲ್​ ಎಂದು ಪೋಸ್ಟ್​ ಮಾಡಿ ಆತಂಕಕ್ಕೆ ತೆರೆ ಎಳೆದಿದ್ದರು. ಇದಾದ ಮೇಲೂ ಮತ್ತೊಮ್ಮೆ ಸಾಯುವ ಮಾತುಗಳನ್ನಾಡಿದ್ದರು. ಬಳಿಕ ಜಯಶ್ರೀ ತನ್ನ ಕೇಶ ಮುಂಡನ ಮಾಡಿಸಿಕೊಂಡು, ಕೂದಲನ್ನು ಕ್ಯಾನ್ಸರ್​ ರೋಗಿಗಳಿಗೆ ದಾನ ನೀಡಿ ಮಾದರಿಯಾಗಿದ್ದರು. ಆ ಕ್ಷಣದ ಫೋಟೋವನ್ನು ಜಾಲತಾಣದಲ್ಲಿ ಹಾಕಿಕೊಂಡಿದ್ದ ಜಯಶ್ರೀ, ಒಳ್ಳೆಯ ನಾಳೆಗೆ ಮೊದಲ ಹೆಜ್ಜೆ ಎಂಬ ಕ್ಯಾಪ್ಶನ್​ ಕೂಡ ಕೊಟ್ಟಿದ್ದರು.
ಇದಕ್ಕೂ ಮುನ್ನ ಅಂದ್ರೆ 2019ರ ಸೆಪ್ಟೆಂಬರ್​ನಲ್ಲಿ ತನ್ನ ಸೋದರ ಮಾವನ ವಿರುದ್ಧ ಜಯಶ್ರೀ ಆರೋಪಗಳ ಸುರಿಮಳೆಗೈದಿದ್ದರು. ‘ಮೊದಲಿನಿಂದಲೂ ನನಗೆ ನಮ್ಮ ಮಾವ ಕಿರುಕುಳ ಕೊಡುತ್ತಿದ್ದರು. ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದರು. ನಮ್ಮ ಮಾವ​ ಒಬ್ಬ ಸೈಕೋ. ಆಸ್ತಿ ವಿಚಾರಕ್ಕೆ ನಮ್ಮನ್ನು ಮನೆಯಿಂದ ಮಾವ ಹೊರಹಾಕಿದ್ದಾರೆ’ ಎಂದು ಮಾವ ಗಿರೀಶ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಷ್ಟೆಲ್ಲ ಬೆಳವಣಿಗೆ ಬಳಿಕ ನಟಿ ಜಯಶ್ರೀ ಬದುಕಲ್ಲಿ ಹೊಸ ಭರವಸೆ ಮೂಡಿದೆ, ಆಕೆ ಇನ್ಮುಂದೆ ಆರಾಮವಾಗಿ ಇರಲಿದ್ದಾಳೆ ಎಂದೇ ಭಾವಿಸಲಾಗಿತ್ತು. ಆದರಿಂದ ಜಯಶ್ರೀ ಬಾರದಲೋಕಕ್ಕೆ ಹೋಗಿರುವುದು ದುರಂತ.
ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಮಾತು ತಪ್ಪಿದ್ರೆ ಮನೆ ಹಾಳಾಗುತ್ತೆ… ಧರ್ಮಸ್ಥಳ ಶ್ರೀಕ್ಷೇತ್ರದಲ್ಲಿ ಕರ್ಪೂರ ಹಚ್ಚಿ ಜೆಡಿಎಸ್​-ಬಿಜೆಪಿ ಬೆಂಬಲಿತರ ಆಣೆ-ಪ್ರಮಾಣ!

ಸಚಿವ ಮಾಧುಸ್ವಾಮಿ ನಾಳೆ ಮಧ್ಯಾಹ್ನ ರಾಜೀನಾಮೆ

ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 2 =
Remember me
