ಬೆಂಗಳೂರು:‘ರಾಧಾ ರಮಣ’ ಸೀರಿಯಲ್​ ಖ್ಯಾತಿಯ ನಟಿ ಕಾವ್ಯ ಗೌಡ ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆ ದಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ನಟಿ ಮುದ್ದಾದ ಹೆಣ್ಣು ಮಗುವಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸಿದ್ದಾರೆ.
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನದಂದು.. ಅಂದ್ರೆ 2024  ಜನವರಿ 22ರಂದು ಹೆಣ್ಣು ಮಗುವಿಗೆ ಕಾವ್ಯ ಗೌಡ ಜನ್ಮ ನೀಡಿದರು. ಮಗು ಹುಟ್ಟಿದ 11 ದಿನಗಳಿಗೆ ಸರಿಯಾಗಿ ತೊಟ್ಟಿಲು ಶಾಸ್ತ್ರವನ್ನ ಕಾವ್ಯ ಗೌಡ – ಸೋಮಶೇಖರ್ ದಂಪತಿ ನೆರವೇರಿಸಿದ್ದಾರೆ.

ಫೆಬ್ರವರಿ 1 ರಂದು ತಮ್ಮ ನಿವಾಸದಲ್ಲೇ ಮಗಳಿಗೆ ತೊಟ್ಟಿಲು ಶಾಸ್ತ್ರವನ್ನ ಕಾವ್ಯ ಗೌಡ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ತೊಟ್ಟಿಲು ಶಾಸ್ತ್ರದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿವೆ.

ಬೆಳ್ಳಿ ತೊಟ್ಟಿಲಲ್ಲಿ ಮಗಳನ್ನು ಮಲಗಿಸಿ, ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಿದ್ದಾರೆ. ಮಗಳ ಆಗಮನದಿಂದ ಕಾವ್ಯ ಗೌಡ – ಸೋಮಶೇಖರ್‌ ದಂಪತಿ ಖುಷಿ ಖುಷಿಯಾಗಿದ್ದಾರೆ. ತೊಟ್ಟಿಲು ಶಾಸ್ತ್ರದ ದಿನದಂದೇ ಕಾವ್ಯ ಗೌಡ ಮಗಳ ಪುಟಾಣಿ ಕಾಲುಗಳಿಗೆ ಕಾಲಂದುಗೆ ತೊಡಿಸಲಾಗಿದೆ.
A post shared by Kavya v Somashekar (@kavya_gowdaaaaofficial)

‘ಗಾಂಧಾರಿ’, ‘ರಾಧಾ ರಮಣ’, ‘ಶುಭ ವಿವಾಹ’ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದ ನಟಿ ಕಾವ್ಯ ಗೌಡ. 2021ರಲ್ಲಿ ಉದ್ಯಮಿ ಸೋಮಶೇಖರ್ ಅವರನ್ನ ಕಾವ್ಯ ಗೌಡ ಮದುವೆಯಾದರು. ಇದೀಗ ಮುದ್ದಾದ ಹೆಣ್ಣು ಮಗುವಿಗೆ ನಟಿ ಕಾವ್ಯ ಗೌಡ ತಾಯಿಯಾಗಿದ್ದಾರೆ. ಮದುವೆಯಾದ ಬಳಿಕ ನಟನೆಯಿಂದ ಕಾವ್ಯ ಗೌಡ ಬ್ರೇಕ್ ಪಡೆದರು. ಇದೀಗ ಮಗುವಿನ ಲಾಲನೆ ಪಾಲನೆಯಲ್ಲಿ ಕಾವ್ಯ ಗೌಡ ತೊಡಗಿದ್ದಾರೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಕಾವ್ಯಾ ಗೌಡ

ಮೈ ಚಳಿ ಬಿಟ್ಟು ಕುಣಿದ ನೋರಾ ಫತೇಹಿ; ಪಡ್ಡೆ ಹುಡುಗರು ಕ್ಲೀನ್​ ಬೋಲ್ಡ್​​


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − three =
Remember me
