ಬೆಂಗಳೂರು:ಸ್ಯಾಂಡಲ್​ವುಡ್​​ ನಟಿ ಪೂಜಾ ಗಾಂಧಿ ಅವರು ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಕುರಿತಾಗಿ ನಟಿ, ಅಥವಾ ಕುಟುಂಬಸ್ಥರು ಅಧಿಕೃತವಾಗಿ ಹೇಳದೆ ಇದ್ದರು, ಅವರ ಆಪ್ತರು ಹೇಳುವಂತೆ ನಾಳೆ ಉದ್ಯಮಿಯನ್ನು ವಿವಾಹವಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ತಿಳಿದು ಬಂದಿದೆ.
ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ಈಗಾಗಲೇ ಪೂಜಾ ತಮ್ಮ ಆಪ್ತರಿಗೆ ಕರೆ ಮಾಡಿ, ಮದುವೆ ಆ‍ಹ್ವಾನ ನೀಡಿದ್ದಾರೆ. ಮದುವೆ ಅತ್ಯಂತ ಸರಳವಾಗಿ ನಡೆಯುವುದರಿಂದ ಕೇವಲ ಹಸ್ತಾಕ್ಷರದಲ್ಲಿ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿ, ಆಪ್ತರಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ ಎನ್ನುವವರ ಜತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು. ಪೂಜಾ ಗಾಂಧಿ ಮತ್ತು ವಿಜಯ್‌ ಅವರು ನವೆಂಬರ್ 29ರಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗಲಿದ್ದಾರೆ.
ಬಂಗಾಳಿ ಮೂಲದವರಾದ ಪೂಜಾ ಗಾಂಧಿ ಸ್ಯಾಂಡಲ್ವುಡ್’ಗೆ ಎಂಟ್ರಿ ಕೊಡುವಾಗ ಕನ್ನಡ ಬರುತ್ತಿರಲಿಲ್ಲ. ಆ ಬಳಿಕ ವಿಜಯ್ ಸಹಾಯ ಪಡೆದುಕೊಂಡಿದ್ದರಂತೆ. ಇದೀಗ ಅಚ್ಚ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುತ್ತಿರುವ ಪೂಜಾ, ಸಿನಿಮಾದಲ್ಲಿ ನಟನೆ ಮಾಡುತ್ತಾ ಡಬ್ಬಿಂಗ್‌ ಕೂಡ ತಾವೇ ಮಾಡುತ್ತಿದ್ದಾರೆ. ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಾಗಿ ಈ ಹುಡುಗಿ ಇದೀಗ ಕನ್ನಡದವರೇ ಆಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಪೂಜಾ ಗಾಂಧಿ ಗುರುತಿಸಿಕೊಂಡಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
