ಬೆಂಗಳೂರು:ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜತೆಗೆ  ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ನಟಿ ಇದೀಗ ತಮ್ಮ ಬ್ಯೂಟಿ ಸಿಕ್ರೇಟ್​​ನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ.
ಇದನ್ನೂ ಓದಿ:ಸುಧಾಮೂರ್ತಿಗೆ ನಟ ಪ್ರಭಾಸ್ ಸಿನಿಮಾದ ಯಾವ ಹಾಡು ತುಂಬಾ ಇಷ್ಟ ಗೊತ್ತಾ?
ಐಸ್​ ನೀರಿನಲ್ಲಿ ಪ್ರತಿದಿನ ಮೂರು ನಿಮಿಷ ಮುಖವನ್ನಿಟ್ಟುಕೊಳ್ಳಿ. ಹೀಗೆ ಮಾಡುವುದು ಸ್ವಲ್ಪ ಕಷ್ಟವೇ. ಆದರೆ ಪ್ರತಿದಿನವೂ ಹೀಗೆ ಮಾಡಿದರೆ ಆಗುವ ಅಭೂತಪೂರ್ವ ಬದಲಾವಣೆಯನ್ನು ನೀವು ನೋಡಬಹುದು. ಇದಕ್ಕೆ ನಾನು ಚಾಲೆಂಜ್​ ಮಾಡುತ್ತೇನೆ ಎಂದು ಬರೆದುಕೊಂಡು ಸೋಶಿಯಲ್​​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಸೇರ್​​ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಅತೀ ಉದ್ದದ ಗಡ್ಡದಿಂದ ಗಿನ್ನಿಸ್ ದಾಖಲೆ ಬರೆದ ಮಹಿಳೆ
ವಿಡಿಯೋದಲ್ಲಿ ಏನಿದೆ?:ಐಸ್ ವಾಟರ್ ಫೇಶಿಯಲ್ ಮಾಡಲು ಒಂದು ಬೌಲ್‌ ನಲ್ಲಿ 10 ಐಸ್ ಕ್ಯೂಬ್‌ ತೆಗೆದುಕೊಂಡು ಬಟ್ಟಲಿಗೆ ಸ್ವಲ್ಪ ನೀರು ಸೇರಿಸಿ ಮತ್ತು ಐಸ್ ತುಂಡುಗಳು ಕರಗಲು ಬಿಡಬೇಕು. ನಂತರ ಅದರಲ್ಲಿ ಮುಖವನ್ನು ಅದ್ದಿ ತೆಗೆದರೆ ಪ್ರಯೋಜನಕಾರಿ ಎನ್ನುವಂತೆ ಅವರ ಈ ವಿಡಿಯೋ ತೋರಿಸುತ್ತದೆ.
A post shared by Ragini Dwivedi (@rraginidwivedi)
ರಾಗಿಣಿ ದ್ವಿವೇದಿ ಅವರ ಬ್ಯೂಟಿ ಸಿಕ್ರೇಟ್​​​ ಕೇಳಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಇದು ನಿಜಾನಾ..? ಸಮಸ್ಯೆ ಇಲ್ವಾ? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಐಸ್​ ವಾಟರ್​ ಮುಖಕ್ಕೆ ಹಾಗೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಕಣ್ಣುಗಳ ಕೆಳಗೆ ಪಫಿನೆಸ್ ಮತ್ತು ಕಪ್ಪು ವಲಯ ನಿವಾರಣೆಗೆ ಐಸ್​ ಕ್ಯೂಬ್​ ಸಹಕಾರಿ ಎನ್ನಲಾಗುತ್ತದೆ. ನಿದ್ರೆಯ ಕೊರತೆಯಿಂದ ಕಣ್ಣುಗಳು ಊದಿಕೊಂಡಿದ್ದ ಸಂದರ್ಭದಲ್ಲಿ ಕಪ್ಪು ವರ್ತುಲ ಉಂಟಾಗುತ್ತದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಐಸ್ ಫೇಶಿಯಲ್ ಮಾಡಬೇಕು ಎಂದು ಬ್ಯೂಟಿಷಿಯನ್​ ಟಿಪ್ಸ್​ ನೀಡುತ್ತಾರೆ.
ಇದನ್ನೂ ಓದಿ:77ನೇ ಸ್ವಾತಂತ್ರ್ಯ ದಿನಾಚರಣೆಗೆ ವೇದಿಕೆ ಸಜ್ಜು; ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಐಸ್ ಫೇಶಿಯಲ್ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಸನ್ ಬರ್ನ್, ಟ್ಯಾನಿಂಗ್, ರಕ್ತ ಪರಿಚಲನೆ ಹೆಚ್ಚಿಸಿ, ನೈಸರ್ಗಿಕವಾಗಿ ಹೊಳೆಯುವಂತೆ ಕಾಣುತ್ತದೆ ಎನ್ನಲಾಗುತ್ತದೆ.
ಅವಳಿ ಮಕ್ಕಳ ಶಾಲೆ; ಒಂದೇ ಸ್ಕೂಲ್​​​ನಲ್ಲಿದ್ದಾರೆ 17 ಸೆಟ್ ಅವಳಿ ವಿದ್ಯಾರ್ಥಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − two =
Remember me
