ಬೆಂಗಳೂರು:ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟಿನ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ನಟಿ ರಾಗಿಣಿ ದ್ವಿವೇದಿಯ ಗೆಳೆಯ ರವಿಶಂಕರ್​ಗೆ ಕೆಲಸದಿಂದ ಅಮಾನತು ಮಾಡಲಾಗಿದೆ.
ಜಯನಗರ ಆರ್​ಟಿಒ ಕಚೇರಿಯ ದ್ವಿತೀಯ ದರ್ಜೆ ಕ್ಲರ್ಕ್​ ಆಗಿರುವ ಬಿ.ಕೆ. ರವಿಶಂಕರ್​ನನ್ನು ಅಮಾನತು ಮಾಡಿ ಸಾರಿಗೆ ಆಯುಕ್ತ ಎನ್​.ಶಿವಕುಮಾರ್​ ಆದೇಶಿಸಿದ್ದಾರೆ. ಸರ್ಕಾರಿ ನೌಕರರಾಗಿ ಸರ್ಕಾರದ ಮತ್ತು ಸಾರಿಗೆ ಇಲಾಖೆಯ ಘನತೆ ಎತ್ತಿ ಹಿಡಿಯಬೇಕಾಗಿದ್ದ ರವಿಶಂಕರ್​, ಡ್ರಗ್ಸ್​ ಸರಬರಾಜು ಆರೋಪಕ್ಕೆ ತುತ್ತಾಗಿ ಬಂಧಿತನಾಗುವ ಮೂಲಕ ಇಲಾಖೆ ಹೆಸರಿಗೆ ಕಳಂಕ ತಂದಿರುವುದು ಮೇಲ್ನೋಟದ ತನಿಖೆಯಿಂದ ತಿಳಿದುಬಂದಿದೆ.ಇದನ್ನೂ ಓದಿರಿ‘ನಶೆ’ಯ ನಗ್ನ ಸತ್ಯ; ಸುದ್ದಿಗೋಷ್ಠಿಯಲ್ಲಿ ​ಸ್ಫೋಟಕ ಮಾಹಿತಿ ನೀಡಿದ್ರು ಪೊಲೀಸ್​ ಕಮಿಷನರ್
ಈ ಕುರಿತಂತೆ ಬೆಂಗಳೂರು ದಕ್ಷಿಣದ ಉಪ ಸಾರಿಗೆ ಆಯುಕ್ತರು ಪತ್ರ ಬರೆದಿದ್ದಲ್ಲದೆ, ನಗರ ಅಪರಾಧ ದಳದ ಸಹಾಯಕ ಪೊಲೀಸ್​ ಆಯುಕ್ತರು ಮಾಹಿತಿ ನೀಡಿದ್ದಾರೆ. ಹೀಗಾಗಿ ನಿಯದಂತೆ ರವಿಶಂಕರ್​ನನ್ನು ಅಮಾತನು ಮಾಡಲಾಗುವುದು ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ, ರವಿಶಂಕರ್​ ವಿರುದ್ಧ ಇಲಾಖಾ ವಿಚಾರಣೆ ನಡೆಸುವುದಾಗಿಯೂ ಉಲ್ಲೇಖಿಸಿದ್ದಾರೆ.
ರವಿಶಂಕರ್​ ಬಂಧನದ ಬಳಿಕ ನಟಿ ಸಂಜನಾರ ಆಪ್ತ ರಾಹುಲ್​ನನ್ನೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ರವಿಶಂಕರ್​ ಬಾಯ್ಬಿಟ್ಟ ಮಾಹಿತಿ ಮೇರೆಗೆ ರಾಗಿಣಿ ದ್ವಿವೇದಿಗೂ ಬುಧವಾರವೇ ಸಿಸಿಬಿ ನೊಟೀಸ್​ ಜಾರಿ ಮಾಡಿತ್ತು. ಆದರೂ ರಾಗಿಣಿ ವಿಚಾರಣಗೆ ಗೈರಾಗಿದ್ದರಲ್ಲದೆ ಸೋಮವಾರ ಬರುವುದಾಗಿ ಹೇಳಿದ್ದರು. ಇಂದು(ಶುಕ್ರವಾರ) ಬೆಳ್ಳಂಬೆಳಗ್ಗೆ ರಾಗಿಣಿ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ನಟಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಇಂದು ಸಂಜೆ ಬಂಧಿಸಿದ್ದಾರೆ.
‘ಮಾದಕ’ ನಟಿ ರಾಗಿಣಿ ಬಂಧನ: ಮನೆಯಲ್ಲಿ ಡ್ರಗ್ಸ್ ಪತ್ತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
